ತುಮಕೂರು ಜಿಲ್ಲೆಯ ಪಾವಗಡದಲ್ಲಿ ಅಕ್ರಮ ಸಂಬಂಧದ ವರದಿ ಮಾಡಿದ್ದಕ್ಕೆ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಬಂಧಿತ ಆರೋಪಿ ನಾರಾಯಣ ರೆಡ್ಡಿ ಕುಟುಂಬದ ಮಹಿಳೆಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತುಮಕೂರು (ಜ.6): ಅಕ್ರಮ ಸಂಬಂಧದ ಸುದ್ದಿ ಮಾಡಿದ್ದಕ್ಕೆ ಪತ್ರಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.
ರಾಮಾಂಜಿನಪ್ಪ, ಹಲ್ಲೆಗೊಳಗಾದ ಪತ್ರಕರ್ತ. ನಾರಾಯಣ ರೆಡ್ಡಿ ಬಂಧಿತ ಆರೋಪಿ.'ಗಡಿನಾಡು ಮಿತ್ರ' ಸ್ಥಳೀಯ ಪತ್ರಿಕೆಯ ವರದಿಗಾರನಾಗಿರುವ ರಾಮಾಂಜಿನಪ್ಪ. ನಾರಾಯಣ ರೆಡ್ಡಿ ಎಂಬಾತನ ಅಕ್ರಮ ಸಂಬಂಧದ ಬಗ್ಗೆ ಇತ್ತೀಚೆಗೆ ಡಿಸೆಂಬರ್ 16ರಂದು ಪತ್ರಿಕೆಯಲ್ಲಿ ವರದಿ ಮಾಡಿದ್ದ. ಈ ಪ್ರಕರಣ ಸಂಬಂಧ ಪೊಲೀಸರು ನಾರಾಯಣ ರೆಡ್ಡಿಯನ್ನ ಬಂಧಿಸಿದ್ದರು.
ಇದನ್ನೂ ಓದಿ: ದಾನ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ನಕಲಿ ಸ್ವಾಮೀಜಿಗಳಿಗೆ ಹಿಗ್ಗಾಮುಗ್ಗಾ ಗೂಸಾ!
ರಾತ್ರಿ ಪೊಲೀಸರು ನಾರಾಯಣ ರೆಡ್ಡಿಯನ್ನ ಬಂಧಿಸಿ ಕೊರಳಪಟ್ಟಿ ಹಿಡಿದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪತ್ರಕರ್ತ. ಇದೇ ವಿಚಾರವಾಗಿ ಆರೋಪಿ ನಾರಾಯಣ ರೆಡ್ಡಿ ಕುಟುಂಬದ ಮಹಿಳೆಯರು ದ್ವೇಷ ಸಾಧಿಸಿ ಹಲ್ಲೆ ನಡೆಸಿದ್ದಾರೆ.
ಸದ್ಯ ಹಲ್ಲೆ ನಡೆಸಿದ ಮಹಿಳೆಯರ ವಿರುದ್ಧ ಪತ್ರಕರ್ತ ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಪೊಲೀಸರು.
ಇದೇ ವಿಚಾರಕ್ಕೆ ದ್ವೇಷ ಸಾಧಿಸಿ ನಾರಾಯಣ ರೆಡ್ಡಿ ಕುಟುಂಬದ ಮಹಿಳೆಯರು ಏಕಾಏಕಿ ಪತ್ರಕರ್ತನ ಮೇಲೆರಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಮಹಿಳೆಯರ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ದೂರು ದಾಖಲಿಸಿದ್ದಾರೆ. ಘಟನೆ ಸಂಬಂದ ವಿಚಾರಣೆ ಮುಂದುವರಿಸಿರುವ ಪೊಲೀಸರು.