ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 7 ಮಂದಿ ಬಂಧನ, 5 ಮಕ್ಕಳ ರಕ್ಷಣೆ, ಆರೋಗ್ಯ ಇಲಾಖೆ ಶಾಮೀಲು

By Govindaraj SFirst Published Jun 26, 2024, 6:29 PM IST
Highlights

ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ.‌ ವ್ಯವಸ್ಥಿತವಾಗಿ ಮಕ್ಕಳನ್ನು ಕದ್ದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇಂತಹ ಖರ್ನಾಕ್ ಗ್ಯಾಂಗ್ ನ ತುಮಕೂರು ಪೊಲೀಸರು ಪತ್ತೆ ಹಚ್ಚಿ ಹೆಡೆ ಮುರಿ ಕಟ್ಟಿದ್ದಾರೆ. 

ವರದಿ: ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು.

ತುಮಕೂರು (ಜೂ.26): ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ.‌ ವ್ಯವಸ್ಥಿತವಾಗಿ ಮಕ್ಕಳನ್ನು ಕದ್ದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇಂತಹ ಖರ್ನಾಕ್ ಗ್ಯಾಂಗ್ ನ ತುಮಕೂರು ಪೊಲೀಸರು ಪತ್ತೆ ಹಚ್ಚಿ ಹೆಡೆ ಮುರಿ ಕಟ್ಟಿದ್ದಾರೆ. ಹಸುಗೂಸು ಮಕ್ಕಳನ್ನ ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನ ಬೇಧಿಸುವಲ್ಲಿ ತುಮಕೂರು ಪೊಲೀಸರು  ಯಶಸ್ವಿ ಯಾಗಿದ್ದಾರೆ.  ತುಮಕೂರಿನ ಮಹೇಶ್( 39) ಮಹಬೂಬ್ ಷರೀಫ್ ( 52) ರಾಮಕೃಷ್ಣ (53) ಹನುಮಂತರಾಜು (45) ಮುಬಾರಕ್ ಪಾಷ (44) ಸ್ಟಾಫ್ ನರ್ಸ್ ಗಳಾದ ಪೂರ್ಣಿಮಾ ( 39) ಸೌಜನ್ಯ (48) ಎಂಬ  7 ಜನರನ್  ಬಂಧಿಸಿದ್ದಾರೆ.  ಈ ಗ್ಯಾಂಗ್ ತುಮಕೂರು ಜಿಲ್ಲೆಯಲ್ಲಿ 2022 ರಿಂದ ಆಕ್ಟೀವ್ ಆಗಿತ್ತು. ಈ ಖತಾರ್ನಾಕ್ ಗ್ಯಾಂಗ್  ತುಮಕೂರು ಜಿಲ್ಲೆಯಲ್ಲಿ 9 ಮಕ್ಕಳನ್ನ ಮಾರಾಟ ಮಾಡಿದ್ದಾರೆ.‌ 9 ಮಕ್ಕಳ ಪೈಕಿ 5  ಮಕ್ಕಳನ್ನ ರಕ್ಷಣೆ ಮಾಡಲಾಗಿದೆ.‌

Latest Videos

ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು ಹೇಗೆ?: ಜುಲೈ 09 ರಂದು  ಮಹದೇವಮ್ಮ, ಮುಬಾರಕ್ ದಂಪತಿಯ 11 ತಿಂಗಳ ಮಗು ಕಿಡ್ನಾಪ್ ಆಗಿತ್ತು. ಗುಬ್ಬಿ ಪಟ್ಟಣ ಚನ್ನಬಸವೇಶ್ವರ ದೇವಸ್ಥಾನದ ಎದುರು ಟೆಂಟ್ ಹಾಕಿಕೊಂಡಿದ್ದ ಈ ದಂಪತಿಗಳು ಹಳ್ಳಿ ಹಳ್ಳಿಗಳ ಮೇಲೆ ತಲೆ ಕೂದಲು, ಏರ್ ಪಿನ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಅಲೆಮಾರಿಗಳು,  ರಾತ್ರಿ ಟೆಂಟ್ ನಲ್ಲಿ ಮಲಗಿದ್ದ ಈ ದಂಪತಿಗಳ 11 ವರ್ಷದ ರಾಕಿ ಹೆಸರಿನ ಗಂಡು ಮಗು ಬೆಳಗ್ಗೆ ವೇಳೆಗೆ ನಾಪತ್ತೆಯಾಗಿತ್ತು.‌ ಈ ಬಗ್ಗೆ ದಂಪತಿ ಗುಬ್ಬಿ ಪೊಲೀಸರಿಗೆ ದೂರು ನೀಡಿದ್ರು. 

6 ಸಾವಿರ ಜನರಿಗೆ ಮನಿ ಡಬ್ಲಿಂಗ್ ಆಮಿಷವೊಡ್ಡಿ 210 ಕೋಟಿ ವಂಚನೆ ಮಾಡಿದ್ದ ಅಂತರ್ ರಾಜ್ಯ ಕಳ್ಳನ ಬಂಧನ!

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾತ್ಮೀದಾರರ ಮಾಹಿತಿ ಮೆರೆಗೆ ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡದ ರಾಮಕೃಷ್ಣಪ್ಪ, ಹಾಗೂ ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಾತ್ರೆಯಲ್ಲಿ ಟ್ಯಾಟೂ ಹಾಕುವ ಕೆಲಸ ಮಾಡುವ ಈ ಇಬ್ಬರು ಮಗುವನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಕ್ಕಳ ಮಾರಾಟ ಜಾಲದ ಬಗ್ಗೆ ಬಾಯಿ ಬಿಟ್ಟಿದ್ದಾರೆ.‌ ಕೂಡಲೇ ಅಲರ್ಟ್ ಆದ ಪೊಲೀಸರು‌ ಪ್ರಕರಣದ ಕಿಂಗ್ ಪಿನ್ ಗಳಾದ ತುಮಕೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಮಹೇಶ್, ಚಿಕ್ಕನಾಯನಕನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಶಿಸ್ಟ್ ಆಗಿದ್ದ ಮಹಬೂಬ್ ಪರೀಪ್ ಹಾಗೂ  ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ.

ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೌಜನ್ಯ, ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುಬಾರಕ್ ಪಾಷ್ ಎಂಬುವರನ್ನ ಬಂಧಿಸಿದ್ದಾರೆ.  ಅವಿವಾಹಿತ ಗರ್ಭಧರಿಸಿದ ಹಾಗೂ ಅಕ್ರಮವಾಗಿ ಗರ್ಭಧರಿಸಿರುವ ಮಹಿಳೆಯರನ್ನ ಪತ್ತೆ ಮಾಡಿ ಅವರಿಂದ ಮಕ್ಕಳನ್ನ ಪಡೆದುಕೊಂಡು ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು. ಮಕ್ಕಳ ಅವಶ್ಯಕತೆ ಇರುವ ಮಹಿಳೆಯರನ್ನ  ಗರ್ಭವತಿಯಾಗಿದ್ದಾರೆಂದು ಹುಳಿಯಾರಿನ ಖಾಸಗಿ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಜನನ ದಾಖಲೆ ಸೃಷ್ಟಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. 

ಮಕ್ಕಳ ಕಳ್ಳರ ಜಾಲ ಹೇಗೆ ಕೆಲಸ ಮಾಡ್ತಿತ್ತು: ಅತ್ತ ಆಸ್ಪತ್ರೆಗೆ ಬರುತ್ತಿದ್ದ ಗರ್ಭಧರಿಸಿದ ಅವಿವಾಹಿತ ಮಹಿಳೆಯರನ್ನ ಗುರುತಿಸುತ್ತಿದ್ದ ನರ್ಸ್ ಗಳಾದ ಸೌಜನ್ಯ ಹಾಗೂ ಪೂರ್ಣಿಮ, ಮಕ್ಕಳ‌ ಮಾರಾಟ ಮಾಡಲು ಸಂತ್ರಸ್ತೆಯರನ್ನ ಒಪ್ಪಿಸುತ್ತಿದ್ದರು, ಇತ್ತ ಮಕ್ಕಳಿಲ್ಲದ ದಂಪತಿಗಳನ್ನು ಪತ್ತೆ ಹಚ್ಚುತ್ತಿದ್ದ ಮಹೇಶ್ ಹಾಗೂ ಮೆಹಬೂಬ್ ಷರಿಪ್, ಡೀಲ್ ಕುದಿರಿದ ಬಳಿಕ, ಮಕ್ಕಳಿಲ್ಲದ ದಂಪತಿಗಳಿಗೆ ತಲಾ ಒಂದು ಮಗುವಿಗೆ 2 ರಿಂದ 3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು.

ರಕ್ಷಣೆಯಾದ ಮಕ್ಕಳ ವಿವರ: ಮಾರಾಟವಾದ 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಿಸಿದ್ದಾರೆ. ಇದರಲ್ಲಿ 1 ಮಗು ಸಾವು, ಇನ್ನುಳಿದ 3 ಮಕ್ಕಳಿಗಾಗಿ  ಶೋಧಕಾರ್ಯ ಮುಂದುವರೆದಿದೆ. ಗುಬ್ಬಿಯಲ್ಲಿ ನಾಪತ್ತೆಯಾಗಿದ್ದ 11 ತಿಂಗಳ  ರಾಕಿ ಎಂಬ ಗಂಡು ಮಗು ಬೆಳ್ಳುರು ಕ್ರಾಸ್ ಮೂಲದ ದಂಪತಿಗೆ ಮಾರಾಟ ಮಾಡಲಾಗಿತ್ತು. ಉಳಿದಂತೆ ಹುಳಿಯಾರಿಗೆ ಮಾರಾಟವಾಗಿದ್ದ  1.6 ವರ್ಷದ ಹೆಣ್ಣು ಮಗು ಟಿ.ವಿ ಭಕ್ತಿ,‌ ಹಾಸನದ ಸಾಣೇಹಳ್ಳಿಗೆ ಮಾರಾಟವಾಗಿದ್ದ 1.3 ತಿಂಗಳ ಹೆಣ್ಣು ಮಗು ಕೃತಿ,  ಬೆಂಗಳೂರಿನ ಸಿಂಗಾಪುರ ಲೇಔಟ್ ದಂಪತಿಗೆ ಮಾರಾಟವಾಗಿದ್ದ 2.6 ವರ್ಷದ ಗಂಡು ಮಗು ವರ್ಷಿತ್ ಕಿಶನ್ ಆಚಾರ್ಯ.

ಮೋದಿಯವರ ಸುಳ್ಳಾಟ ಬಯಲಿಗೆಳೆಯಲು ರಾಹುಲ್‌ಗೆ ಒಳ್ಳೆಯ ಅವಕಾಶವಿದೆ: ಸಚಿವ ಸಂತೋಷ್ ಲಾಡ್

ಮಧುಗಿರಿ ತಾಲ್ಲೂಕಿನ ಎಸ್. ಎಂ. ಗೊಲ್ಲಹಳ್ಳಿಗೆ ಮಾರಾಟ‌ವಾಗಿದ್ದ 1.3 ವರ್ಷದ ಹೆಣ್ಣು ಮಗು ಮೈಥಿಲಿಯನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ರಾಕಿ ಮಗುವನ್ನು ಪೋಷಕರಿಗೆ ವಾಪಸ್ ಕೊಡಲಾಗಿದ್ದು, ಉಳಿದ ನಾಲ್ವರು ಮಕ್ಕಳ ಪೋಷಕರ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಏತನ್ಮಧ್ಯೆ  ಉಳಿದ 3 ಮಕ್ಕಳನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮುಂದುವರೆಸಿದ್ದಾರೆ. ಅಲ್ಲದೆ ಮಕ್ಕಳನ್ನು ಖರೀದಿಸಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.  ಮಾರಾಟ ಜಾಲವನ್ನ ಬೇದಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅಭಿನಂಧಿಸಿದ್ದಾರೆ‌.

click me!