ನಿಧಿಯಾಸೆಗೆ ಹೂವಿನಹಡಗಲಿ ಐತಿಹಾಸಿಕ ದೇಗುಲದ ಗೋಪುರ ಭಗ್ನ!

By Kannadaprabha News  |  First Published Nov 1, 2021, 3:49 AM IST

* ನಿಧಿಯಾಸೆಗೆ ಐತಿಹಾಸಿಕ ದೇಗುಲದ ಗೋಪುರ ಭಗ್ನ
* ಹಿರೇಹಡಗಲಿಯ ಕಲ್ಲೇಶ್ವರ ದೇವಸ್ಥಾನಕ್ಕೆ ದುಷ್ಕರ್ಮಿಗಳಿಂದ ಹಾನಿ
* ಐತಿಹಾಸ ಕೆರೆಯ ಪಕ್ಕದಲ್ಲಿರುವ ದೇವಾಲಯ
* ಕಲಾಕೃತಿ ಒಡೆದು ಹಾಕಿದ ದುಷ್ಕರ್ಮಿಗಳು 


ಹೂವಿನಹಡಗಲಿ(ನ. 01)  ತಾಲೂಕಿನ (Huvina Hadagali) ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಪಕ್ಕದ ಕಲ್ಯಾಣ ಚಾಲುಕ್ಯರ (Chalukya dynasty)ಸುಂದರ ಕಲಾಕೃತಿಯಿರುವ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನದ (Temple) ಗೋಪುರವನ್ನು ನಿಧಿ ಆಸೆಗೆ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

ತಾಲೂಕಿನ ಹಿರೇಹಡಗಲಿ ಪೊಲೀಸ್‌ ಠಾಣೆಗೆ ಕೂಗಳತೆಯ ದೂರದ ಐತಿಹಾಸಿಕ ಕೆರೆಯ ಪಕ್ಕದಲ್ಲಿರುವ ಕಲ್ಲೇಶ್ವರ ದೇಗುಲ ಅತ್ಯಂತ ಸುಂದರವಾಗಿದೆ. ಭಾರತೀಯ ಪುರಾತತ್ವ ಇಲಾಖೆಗೆ ಈ ದೇಗುಲ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ನಿಧಿ ಇಟ್ಟಿರಬಹುದೆಂದು ದುಷ್ಕರ್ಮಿಗಳು ಶನಿವಾರ ರಾತ್ರಿ ವೇಳೆ ಸುಂದರ ಕಲಾಕೃತಿಯ ಗೋಪುರ ಭಗ್ನಗೊಳಿಸಿದ್ದಾರೆ

Tap to resize

Latest Videos

ಹಾಸನ: ನಿಧಿ ಆಸೆಗಾಗಿ ದೇಗುಲದ ಗರ್ಭಗುಡಿ ಬಗೆದ ಖದೀಮರ ಬಂಧನ

ದೇವಸ್ಥಾನಕ್ಕೆ ಎರಡು ಕಡೆ ಬಾಗಿಲುಗಳಿವೆ. ಅವುಗಳಿಗೆ ಬೀಗ ಹಾಕಲಾಗಿತ್ತು. ದೇವಸ್ಥಾನದ ಒಳಗಿರುವ ಶಿಲ್ಪಕಲೆಗಳು ಹಾಗೂ ದೇವರ ಮೂರ್ತಿಗಳಿವೆ. ಅದನ್ನು ದುಷ್ಕರ್ಮಿಗಳು ಮುಟ್ಟಿಲ್ಲ. ಆದರೆ ದೇವಸ್ಥಾನದ ಗೋಪುರ ಮೇಲಿದ್ದ ಹೂವಿನಾಕೃತಿಯ ಕಳಸದಂತಿದ್ದ ಸುಂದರ ಶಿಲ್ಪಕಲೆಯ ಕೆಳಗೆ ನಿಧಿ ಇರಬಹುದೆಂದು, ಆ ಕಲಾಕೃತಿಯನ್ನು ಒಡೆದು ಹಾಕಿದ್ದಾರೆ. ಇದರಿಂದ ದೇವಸ್ಥಾನದ ಪ್ರಮುಖ ಆಕರ್ಷಣೆಯೇ ಇಲ್ಲದಂತಾಗಿದೆ. ಈ ಕುರಿತು ಹಿರೇಹಡಗಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾಸನ ಮತ್ತು ಚಿತ್ರದುರ್ಗ:   ನಿಧಿ ಆಸೆಗಾಗಿ ಪುರಾತನ ಕಾಲದ ದೇವಾಲಯದಲ್ಲಿ ಗರ್ಭಗುಡಿ ಬಗೆದ ಚೋರರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಸಹಾಕಾರಿ ಸಂಘಗಳ ಸಹಾಯಕ ಉಪ ನಿಬಂಧಕ ಸೇರಿ ಒಟ್ಟು ಏಳು ಜನರನ್ನ ಪೊಲೀಸರು  ಬಂಧಿಸಿದ್ದರು. ಚಿತ್ರದುರ್ಗ ಕಲ್ಲಿನ ಕೋಟೆ ಆವರಣದಲ್ಲಿಯೂ ನಿಧಿ ಆಸೆಗಾಗಿ ಚೋರರು  ಕಲ್ಲುಗಳನ್ನು ಸ್ಫೋಟ ಮಾಡಿದ್ದು ವರದಿಯಾಗಿತ್ತು.

click me!