ಪ್ರಸಾದವೆಂದು ನಿದ್ದೆ ಮಾತ್ರೆ ಕೊಡ್ತಿದ್ದ 'ದೇವಮಾನವ' ಮಾಡ್ತಿದ್ದ ಹೀನ ಕೆಲಸ!

By Suvarna News  |  First Published Nov 1, 2021, 12:58 AM IST

* ಸ್ವಯಂ ಘೋಷಿತ ದೇವಮಾನವನ ನೀಚ ಕೃತ್ಯ
* ತಾನು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದು ಜನರನ್ನು  ನಂಬಿಸಿದ್ದ
* ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಧನ
* ಬೆತ್ತಲೆ ಚಿತ್ರಗಳನ್ನು ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ


ತಿರುವನಂತಪುರ (ನ. 01)  ಕೇರಳದ (Kerala) ಕಝಕೂಟಂ ಮಹಿಳೆಯೊಬ್ಬರು(Woman) ಸ್ವಯಂ ಘೋಷಿತ ದೇವಮಾನವನ ವಿರುದ್ಧ ಆರೋಪ ಮಾಡಿದ್ದಾರೆ.  ತನ್ನನ್ನು ಲೈಂಗಿಕವಾಗಿ (Sexual Harassment) ಶೋಷಿಸಿದ್ದು ಅಲ್ಲದೇ ಬೆತ್ತಲೆ ಚಿತ್ರಗಳನ್ನು ತೆಗೆದುಕೊಂಡಿದ್ದಾನೆ.  ಹಣ ಮತ್ತು ಒಡವೆ ದೋಚಿದ್ದಾನೆ ಎಂದು ಆರೋಪಿಸಿದ್ದಾಳೆ. ಮಹಿಳೆ ದೂರಿನ ಆಧಾರದ ಮೇಲೆ  ಫೋರ್ಟ್ ಪೊಲೀಸರು 37 ವರ್ಷದ 'ದೇವಮಾನವ'ನನ್ನು ಬಂಧಿಸಿದ್ದಾರೆ.

ದೇವಮಾನವ ಎಂದು ಕರೆದುಕೊಳ್ಳುತ್ತಿದ್ದ ದಿಲೀಪ್‌ ಎಂಎಸ್‌ಕೆ ನಗರದ ನಿವಾಸಿ.  ತನಗೆ ‘ಮಂತ್ರಮೂರ್ತಿ’ ಎಂಬ ದೇವರ ಆಶೀರ್ವಾದವಿದೆ. ತಾನು ಹೇಳಿದ್ದೇಲ್ಲ ನಿಜವಾಗುತ್ತದೆ ಎಂದು ಜನರನ್ನು ನಂಬಿಸಿಕೊಂಡು ಬಂದಿದ್ದ.

Tap to resize

Latest Videos

undefined

ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!

ಪ್ರಸಾದದ  ಹೆಸರಿನಲ್ಲಿ ನಿದ್ದೆ ಮಾತ್ರೆಗಳನ್ನು ನೀಡುತ್ತಿದ್ದ. ಇದಾದ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ. ಇದೇ  ರೀತಿ ತನ್ನ ಮೇಲೆಯೂ ಪೈಶಾಚಿಕ ಕೃತ್ಯ ನಡೆಸಿದ್ದು ಮೂವತ್ತು ಗ್ರಾಂ ಚಿನ್ನಾಭರಣವನ್ನು ದೋಚಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ನಂತರ ಆಕೆಯ ನಗ್ನ ಛಾಯಾಚಿತ್ರಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡಲು ಬಳಸಿದ್ದ.   ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  

ಉತ್ತರ ಪ್ರದೇಶದಿಂದ ವರದಿಯಾದ ಘಟನೆಯಲ್ಲಿ ಮೂವರು ಯುವಕರು ಗನ್ ಪಾಯಿಂಟ್ ನಲ್ಲಿ ಹದಿನೇಳು ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.  ಬಾಲಕಿಯ ತಂದೆ ದೂರು ಸಲ್ಲಿಸಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

click me!