ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!

By Gowthami K  |  First Published Jul 10, 2023, 10:34 AM IST

ಟೊಮೆಟೊ ರೇಟ್ ಗಗನಕ್ಕೇರಿದ್ದೇ ತಡ ಟೊಮೆಟೊ ಗಾಡಿಯನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. 250ಕ್ಕೂ ಹೆಚ್ಚು ಕೆಜಿ ಟೊಮೆಟೊ ಟ್ರೈ ಇರೋ ಬೊಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವ  ಹೈಜಾಕ್ ಮಾಡಿದ್ದಾರೆ.


ಬೆಂಗಳೂರು (ಜು.10): ಟೊಮೆಟೊ ರೇಟ್ ಗಗನಕ್ಕೇರಿದ್ದೇ ತಡ ಟೊಮೆಟೊ ಗಾಡಿಯನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. 250ಕ್ಕೂ ಹೆಚ್ಚು ಕೆಜಿ ಟೊಮೆಟೊ ಟ್ರೈ ಇರೋ ಬೊಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವ  ಹೈಜಾಕ್ ಮಾಡಿದ್ದಾರೆ. ಟೊಮೆಟೊ ತುಂಬಿದ್ದ ಗಾಡಿ ಫಾಲೋ ಮಾಡಿ ಮೂವರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಶನಿವಾರ ಘಟನೆ ನಡೆದಿದೆ.

ಟೊಮೆಟೊ ಗಾಡಿಯನ್ನು ಹಿಂಬಾಲಿಸಿಕೊಂಡು ಬಂದ ನಂತರ ಗಾಡಿ ಟಚ್ ಆಗುವಂತೆ ನಾಟಕ ಆಡಿ ಡ್ರೈವರ್ ಗೆ ಥಳಿಸಿದ್ದಾರೆ.  ಬೆಂಗಳೂರಿನ ಆರ್ ಎಮ್ ಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಕಿರಿಕ್ ತೆಗೆದಿದ್ದು, ಹಿರಿಯೂರಿನಿಂದ ಕೋಲಾರಕ್ಕೆ ರೈತ ಟೊಮ್ಯಾಟೋ ಸಾಗಿಸುತ್ತಿದ್ದ ಈ ವೇಳೆ ಪೀಣ್ಯಾ ಬಳಿ ಗಾಡಿ ಟಚ್ ಆಗಿದೆ ಎಂದು ಖ್ಯಾತೆ ತೆಗೆದಿದ್ದಾರೆ.  ಗಾಡಿ ಟಚ್ ಆಗಿದೆ  ಸೈಡಿಗೆ ಹಾಕಿ ಎಂದು ಮೂರು ಮಂದಿ ರೈತನಿಗೆ ಅವಾಜ್ ಹಾಕಿ ನಂತರ ರೈತನ ಮೇಲೆ ಹಲ್ಲೆ ಮಾಡಿದ್ದಾರೆ.

Tap to resize

Latest Videos

undefined

ಒಂದೇ ತಿಂಗಳಲ್ಲಿ ದೇಶದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಶೇ. 1900ರಷ್ಟು ಏರಿಕೆ, ಏನು ಕಾರಣ?

ಈ ವೇಳೆ ಹಣ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಇಲ್ಲ ಎಂದಾಗ ಮೊಬೈಲ್ ನಲ್ಲಿದ್ದ ಹಣ ಟ್ರಾನ್ಸಫರ್ ಮಾಡಿಸಿಕೊಂಡು ನಂತರ ಟೊಮ್ಯಾಟೋ ನೋಡಿ ಇಡೀ ಗಾಡಿಯೇ ಹೈಜಾಕ್ ಮಾಡಿದ್ದಾರೆ.  ಡ್ರೈವರ್ ಸಮೇತ ಬೊಲೆರೋ ವಾಹನ ಕಿಡ್ನ್ಯಾಪ್ ಮಾಡಿ ಬಳಿಕ ಚಿಕ್ಕಜಾಲ ಬಳಿ ಡ್ರೈವರ್ ನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ.

ಸದ್ಯ ಘಟನೆ ಸಂಬಂಧ ಆರ್ ಎಮ್ ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ ಪೂಟೇಜ್ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸ್ಮಾರ್ಟ್‌ಫೋನ್ ಶಾಪ್‌ಲ್ಲಿ ಪ್ರತಿಯೊಬ್ಬರಿಗೆ 2 ಕೆಜಿ ಟೊಮೆಟೊ ಫ್ರಿ, ಆದರೆ ಒಂದು ಕಂಡೀಷನ್!

ದೇಶದಲ್ಲಿ ಪೆಟ್ರೋಲ್ ದರಕ್ಕಿಂತ ಟೊಮೆಟೊ ದರ ಹೆಚ್ಚಾಗಿದೆ. ಒಂದು ತಿಂಗಳಿಂದ ಟೊಮೆಟೊ ಬೆಲೆ ಇಳಿಕೆಯಾಗಿಲ್ಲ. ಬೆಂಗಳೂರಲ್ಲಿ ಪೆಟ್ರೋಲ್ ದರ 101.96  ಪೈಸೆ ಇದ್ರೆ, ಬೆಂಗಳೂರಲ್ಲಿ ಟೊಮೆಟೊ ದರ 120 ರಿಂದ 130 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಕಸದ ತೊಟ್ಟಿಗೆ ಹಾಕುತ್ತಿದ್ದ ಟೊಮೆಟೊಗೂ  ಈಗ ಚಿನ್ನದ ಬೆಲೆ ಬಂದಿದೆ.  ಟೊಮೆಟೊ ಮಾತ್ರವಲ್ಲ ಎಲ್ಲ ತರಕಾರಿ ಬೆಲೆಯಲ್ಲಿ ಬಾರಿ ಏರಿಕೆ ಕಾಣುತ್ತಿದೆ.

ತರಕಾರಿ               ಕೆಜಿಗೆ
ಸೌತೆಕಾಯಿ          40 ರಿಂದ 60
ಮೆಣಸಿನಕಾಯಿ    70-120
ಹುರುಳಿಕಾಯಿ     80-110
ಹೂಕೋಸು          35- 50
ಬಟಾಣಿ                180-200
ಕ್ಯಾರೆಟ್               70  -80

click me!