ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು

Published : May 22, 2023, 11:17 AM ISTUpdated : May 22, 2023, 11:23 AM IST
ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು

ಸಾರಾಂಶ

ಚಿಕ್ಕಮಗಳೂರಿನಲ್ಲಿ ನೀರಿನ ಕಾಲುವೆಯ ಬಳಿ ಆಟವಾಡಲು ಹೋದ ವೇಳೆ ಕಾಲು ಜಾರಿ ಬಿದ್ದವರನ್ನು ಕಾಪಾಡಲು ಹೋಗಿ ಒಬ್ಬೊಬ್ಬರಂತೆ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಚಿಕ್ಕಮಗಳೂರು (ಮೇ 22): ರಾಜ್ಯದಲ್ಲಿ ನಿನ್ನೆ ಭಾನುವಾರ ಸುರಿದ ಗುಡುಗು-ಸಿಡಿಲು ಸಹಿತ ಬಿರುಗಾಳಿ ಮಳೆಯಿಂದಾಗಿ 10ಕ್ಕೂ ಅಧಿಕ ಸಾವು ಸಾಂಭವಿಸಿವೆ. ಇನ್ನು ಚಿಕ್ಕಮಗಳೂರಿನಲ್ಲಿ ನೀರಿನ ಕಾಲುವೆಯ ಬಳಿ ಆಟವಾಡಲು ಹೋದ ವೇಳೆ ಕಾಲು ಜಾರಿ ಬಿದ್ದವರನ್ನು ಕಾಪಾಡಲು ಹೋಗಿ ಒಬ್ಬೊಬ್ಬರಂತೆ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪರುವ ಘಟನೆ ನಡೆದಿದೆ. ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಆಟವಾಡುವಾಗ ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ದುರಂತ ಸಂಭವಿಸಿದೆ. ಮೃತರನ್ನು ರವಿ (31), ಅನನ್ಯ (17) ಹಾಗೂ ಶಾಮವೇಣಿ (16) ಎಂದು ಗುರುತಿಸಲಾಗಿದೆ. ರವಿ ಮೂಲತಃ ಲಕ್ಕವಳ್ಳಿ ನಿವಾಸಿ ಆಗಿದ್ದಾನೆ. ಇನ್ನು ಅನನ್ಯ ಮತ್ತು ಶಾಮವೇಣಿ ಇಬ್ಬರೂ ರವಿಯ ಸಹೋದರಿಯರ ಮಕ್ಕಳಾಗಿದ್ದರು. ನೀರಿನಲ್ಲಿ ಆಟವಾಡಲು ಹೋಗಿ ದುರಂತ ಸಂಭವಿಸಿದೆ.

Bengaluru: ಡ್ರೈವರ್‌ ಮಾತನ್ನ ಉಡಾಫೆ ಮಾಡಿದ ಕುಟುಂಬ: ಮಗಳನ್ನು ನೀರಲ್ಲಿ ಮುಳುಗಿಸಿ ಕಣ್ಣೀರು

ರವಿ ಅವರ ಅಕ್ಕಂದಿರನ್ನು ಶಿವಮೊಗ್ಗ ಮತ್ತು ನಂಜನಗೂಡಿಗೆ ಮದುವೆ ಮಾಡಿಕೊಡಲಾಗಿತ್ತು. ಅನನ್ಯ ಮೂಲತಃ ಶಿವಮೊಗ್ಗದ ನಿವಾಸಿ ಆಗಿದ್ದು, ಶಾಮವೇಣಿ ನಂಜನಗೂಡಿನವರು ಎಂದು ತಿಳಿದುಬಂದಿದೆ. ಇಬ್ಬರೂ ಸಹೋದರಿಯರ ಮಕ್ಕಳಾದ್ದರಿಂದ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಲಕ್ಕವಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದರು. ಬೆಳಗ್ಗೆಯೇ ಭದ್ರಾ ಜಲಾಶಯದ ಕಾಲುವೆಯ ಬಳಿ ಆಟವಾಡಲು ಹೋದಾಗ ಈ ಘಟನೆ ನಡೆದಿದ್ದು, ಮೃತ ರವಿ ದೇಹ ಮಾತ್ರ ಲಭ್ಯವಾಗಿದೆ. ಉಳಿದಂತೆ ಅನನ್ಯ ಹಾಗೂ ಶಾಮವೇಣಿ ಅವರ ಮೃತದೇಹಕ್ಕಾಗಿ ಶೋಧ ಮಾಡಲಾಗುತ್ತಿದೆ. ಈ ಘಟನೆ ಕುರಿತಂತೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ತುಮಕೂರು (ಮೇ.22) : ಶನಿವಾರ ಒಂದೇ ವಯಸ್ಸಿನ ನಾಲ್ವರು ಮಕ್ಕಳು ಮನೆಯಿಂದ ಹೊರಹೋಗಿ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ. ಎಲ್ಲ ಮಕ್ಕಳೂ 15 ವರ್ಷದವರಾಗಿದ್ದು, ಎಲ್ಲಿಗೆ ಹೋಗಿದ್ದಾರೆ, ಅವರಿಗೆ ಏನಾಗಿದೆ ಎಂಬ ಮಾಹಿತಿ ಈವರೆಗೂ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. 

Karnataka Rain: ರಾಜ್ಯಾದ್ಯಂತ ಮಹಾಮಳೆಗೆ ಒಂದೇ ದಿನ 3 ಬಲಿ: ಒಬೊಬ್ಬರದ್ದೂ ದುರಂತ ಸಾವು

ಈವರೆಗೂ ಸುಳಿವು ಸಿಕ್ಕಿಲ್ಲ: ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾದ ಮಕ್ಕಳು. ಎಲ್ಲರೂ 15 ವರ್ಷದ ವಯಸ್ಸಿನವರು. ಶನಿವಾರ ಮಧ್ಯಾಹ್ನದ ವೇಳೆ ನಾಲ್ವರು ಮನೆಯಿಂದ ಹೊರಗಡೆ ಹೋಗಿದ್ದಾರೆ. ಸಂಜೆಯಾದರೂ ಮನೆಗೆ ವಾಪಸ್ ಆಗಿಲ್ಲ. ಪೋಷಕರು ಆತಂಕಗೊಂಡು ಎಲ್ಲ ಕಡೆಯೂ ಹುಡುಕಾಡಿದ್ದಾರೆ ಆದರೂ ಮಕ್ಕಳು ಪತ್ತೆಯಾಗದೆ ನಿಗೂಢವಾಗಿ ಕಣ್ಮರೆಯಾಗಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮಕ್ಕಳನ್ನು ಸಾಕಷ್ಟು ಕಡೆ ಹುಡುಕಾಡಿದ್ದಾರೆ, ಪತ್ತೆಯಾಗದ ಹಿನ್ನೆಲೆ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು. ನೀಡಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು