* ಆರೋಪಿಗಳಿಂದ 19.5 ಕೆ.ಜಿ. ತೂಕದ ಗಾಂಜಾ ಜಪ್ತಿ
* ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ
* ಬೈಕ್ ಕಳ್ಳರ ಬಂಧನ, 3 ಬೈಕ್ ವಶ
ಬೆಂಗಳೂರು(ಫೆ.15): ಹೊರರಾಜ್ಯದಿಂದ ನಗರಕ್ಕೆ ಗಾಂಜಾ(Marijuana) ತಂದು ಮಾರಾಟ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಾಣಸವಾಡಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ತ್ರಿಪುರ ರಾಜ್ಯದ ಖಮರುಲ್ಲ ಇಸ್ಲಾಂ(27), ಸಾಹಿದ್ ಮಿಯಾ(40) ಮತ್ತು ಖುರ್ಷಿದ್ ಮಿಯಾ(21) ಬಂಧಿತರು(Arrest). ಆರೋಪಿಗಳಿಂದ(Accused) ಆರು ಲಕ್ಷ ರು. ಮೌಲ್ಯದ 19.5 ಕೆ.ಜಿ. ತೂಕದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಭಾನುವಾರ ಸಂಜೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime: ಆಂಧ್ರದಲ್ಲಿ ಗಾಂಜಾ ಬೆಳೆದು ಬೆಂಗ್ಳೂರಲ್ಲಿ ಮಾರಾಟ ಮಾಡ್ತಿದ್ದ ಪೆಡ್ಲರ್ ಪೊಲೀಸ್ ಬಲೆಗೆ
ಆರೋಪಿಗಳು ತ್ರಿಪುರದ ಮಧುಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಗಾಂಜಾವನ್ನು ಕಡಿಮೆ ದರಕ್ಕೆ ಖರೀದಿಸಿ ರೈಲಿನಲ್ಲಿ(Railway) ನಗರ ತಂದಿದ್ದರು. ಸ್ಥಳೀಯ ಪೆಡ್ಲರ್‌ಗಳು ಹಾಗೂ ಗಿರಾಕಿಗಳಿಗೆ ದುಬಾರಿ ದರಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಯುವಕರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿದ್ದ ಮೂವರು ಪೊಲೀಸ್ ಬಲೆಗೆ
ಬೆಂಗಳೂರು: ಇತ್ತೀಚಿಗೆ ನಾಯಂಡಹಳ್ಳಿ ಸಮೀಪ ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರು ಯುವಕರಿಗೆ ಕಲ್ಲಿನಿಂದ ಹೊಡೆದು ಮೊಬೈಲ್ ಹಾಗೂ ಹಣ ದೋಚಿದ್ದ ಮೂವರು ಕಿಡಿಗೇಡಿಗಳು ರೈಲ್ವೆ ಪೊಲೀಸರ(Railway Police) ಬಲೆಗೆ ಬಿದ್ದಿದ್ದಾರೆ.
ನಾಯಂಡಹಳ್ಳಿಯ ಲೋಕೇಶ್ ಅಲಿಯಾಸ್ ಗೊಣ್ಣೆ , ತಿಲಕ್ ಅಲಿಯಾಸ್ ಆರು ಬೆರಳು ಮತ್ತು ಮಳವಳ್ಳಿ ತಾಲೂಕಿನ ಹಲಗೂರಿನ ಮಹದೇವ ಬಂಧಿತರಾಗಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.
ಫೆ.6ರಂದು ಹಾರ್ಡ್‌ವೇರ್ ಅಂಗಡಿ ನೌಕರ ಅಮಿತ್ ಕುಮಾರ್ ಹಾಗೂ ವೀರಜ್ ಅವರನ್ನು ಅಡ್ಡಗಟ್ಟಿಹಲ್ಲೆ ನಡೆಸಿದ್ದ ಆರೋಪಿಗಳು 2 ಮೊಬೈಲ್ ಮತ್ತು 15 ಸಾವಿರ ರು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಟಿ ರೈಲ್ವೆ ಠಾಣೆ ಇನ್‌ಸ್ಪೆಕ್ಟರ್ ವಿ.ಶಿವಕುಮಾರ್ ನೇತೃತ್ವದ ತಂಡ ಘಟನಾ ಸ್ಥಳದಲ್ಲಿ ಸಿಕ್ಕ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ ಕಳ್ಳರ ಬಂಧನ, 3 ಬೈಕ್ ವಶ
ಹಗರಿಬೊಮ್ಮನಹಳ್ಳಿ(Hagaribommanahalli): ಪಟ್ಟಣದ ಬೈಪಾಸ್ ವೃತ್ತದಲ್ಲಿ ಮೂವರು ಬೈಕ್ ಕಳ್ಳತನ ಮಾಡಿದ ಮೂವರನ್ನು ಪೊಲೀಸರು ಹಿಡಿದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ
ಆರೋಪಿಗಳಾದ ಶಿರಹಟ್ಟಿಯ ಪರಶುರಾಮ್ ಮೊಡಿಕರ್ (25), ಲಕ್ಷ್ಮಣ (20) ಮತ್ತು ಚಿರಂಜೀವಿ ಮೊಡಿಕರ್‌ನನ್ನು ಬಂಧಿಸಿದ್ದಾರೆ. ಬೈಪಾಸ್ ವೃತ್ತದ ಬಳಿ ಈ ಮೂವರು ಪೊಲೀಸರನ್ನು ನೋಡಿ ಬೈಕ್ ಬಿಟ್ಟು ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಸಂಶಯಗೊಂಡ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ವಿಷಯ ಬಹಿರಂಗವಾಗಿದೆ. 40 ಸಾವಿರ ಬೆಲೆಬಾಳುವ 3 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೂಡ್ಲಿಗಿಯ ಡಿವೈಎಸ್‌ಪಿ ಹರೀಶ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ ಹಾಗೂ ಪಿ. ಸರಳಾ ನೇತೃತ್ವದಲ್ಲಿ ಎಎಸ್‌ಐ ಯಮುನಾನಾಯ್ಕ, ಸಿಬ್ಬಂದಿ ಕಿರಣ್ ಕುಮಾರ್, ಕೆ. ವೀರಣ್ಣ, ಕೃಷ್ಣಮೂರ್ತಿ, ಕಲಾಂದರ್, ವಿನಾಯಕ, ಗೌರಮ್ಮ ಕಾರ್ಯಾಚರಣೆ ನಡೆಸಿದರು.