ಕಳವು ಮಾಡುತ್ತಿದ್ದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಸಿಸಿ ಕ್ಯಾಮೆರಾದಲ್ಲಿ ದ್ವಿಚಕ್ರ ವಾಹನದ ಸಂಖ್ಯೆ ಹಾಗೂ ಕಳ್ಳತನ ಮಾಡಿದ ವ್ಯಕ್ತಿಗಳ ಚಹರೆ ಸ್ವಷ್ಟವಾಗಿ ಗೋಚರಿಸುತ್ತಿತ್ತು. ಈ ಜಾಡನ್ನು ಹಿಡಿದು ಹೊರಟ ಪೊಲೀಸರು ಅಂತಿಮವಾಗಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಜಿಎಫ್(ಜು.23): ನಗರದಲ್ಲಿ ಬ್ಯಾಂಕ್‌ಗಳ ಬಳಿ ಹೊಂಚು ಹಾಕಿ ಹಣವನ್ನು ಕಳವು ಮಾಡುತ್ತಿದ್ದ ಮೂವರು ಅಂತರ ರಾಜ್ಯ ಕಳ್ಳರನ್ನು ಬಂಧಿಸಿ ಎರಡು ದ್ವಿಚಕ್ರ ವಾಹನ ಹಾಗೂ 4 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್‌ಸನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಜಕ್ರಯ್ಯ(43), ರಮೇಶ್(50), ನಲ್ಲೂರು ಜಿಲ್ಲೆಯ ಆಕಲಕುಮಾರ್(32) ಎಂದು ಗುರ್ತಿಸಲಾಗಿದ್ದು, ಆರೋಪಿಗಳು ಬ್ಯಾಂಕ್‌ಗಳ ಬಳಿ ಅಮಾಯಕ ಜನರನ್ನು ವಂಚಿಸಿ ಕಳುವು ಮಾಡುತ್ತಿದ್ದರು ಎನ್ನಲಾಗಿದೆ.
undefined
ದಾವಣಗೆರೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರ ಫಯಾಜ್‌ವುಲ್ಲಾ ವಶಕ್ಕೆ; ಉಗ್ರರರೊಂದಿಗೆ ನಂಟು?
ಇವರು ಕಳವು ಮಾಡುತ್ತಿದ್ದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಸಿಸಿ ಕ್ಯಾಮೆರಾದಲ್ಲಿ ದ್ವಿಚಕ್ರ ವಾಹನದ ಸಂಖ್ಯೆ ಹಾಗೂ ಕಳ್ಳತನ ಮಾಡಿದ ವ್ಯಕ್ತಿಗಳ ಚಹರೆ ಸ್ವಷ್ಟವಾಗಿ ಗೋಚರಿಸುತ್ತಿತ್ತು. ಈ ಜಾಡನ್ನು ಹಿಡಿದು ಹೊರಟ ಪೊಲೀಸರು ಅಂತಿಮವಾಗಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಚಿನ್ನಾಗನಹಳ್ಳಿ ಬಳಿ ಗಾಂಜಾ ಮಾರುತ್ತಿದ್ದ ಆಂಧ್ರದ ವ್ಯಕ್ತಿಯನ್ನು ಆಂಡರ್‌ಸನ್‌ಪೇಟೆ ಪೊಲೀಸರು ಬಂಧಿಸಿ, 130 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.