ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ಧೂರಿ ಅಲಿಯಾಸ್ ಹಾಲಪ್ಪ ಸುರೇಶ ಬಬಲೇಶ್ವರ್, ಹಾಲಪ್ಪ ಗಿಡ್ಡವ್ವಗೋಳ ಮತ್ತು ಗೋಪಾಲ್ ಗಾಡಿವಡ್ಡರ್ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಇಬ್ಬರು 16 ವರ್ಷದ ಬಾಲಕಿಯರು ಮತ್ತು 15 ವರ್ಷದ ಒಬ್ಬ ಬಾಲಕಿಯನ್ನು ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಬಲವಂತವಾಗಿ ತಮ್ಮ ಕಾರಿನಲ್ಲಿ ಕೂಡ್ರಿಸಿಕೊಂಡು, ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಬೆಳಗಾವಿ(ಫೆ.20): ಪ್ರೇಮಿಗಳ ದಿನದಂದು ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ಧೂರಿ ಅಲಿಯಾಸ್ ಹಾಲಪ್ಪ ಸುರೇಶ ಬಬಲೇಶ್ವರ್, ಹಾಲಪ್ಪ ಗಿಡ್ಡವ್ವಗೋಳ ಮತ್ತು ಗೋಪಾಲ್ ಗಾಡಿವಡ್ಡರ್ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಇಬ್ಬರು 16 ವರ್ಷದ ಬಾಲಕಿಯರು ಮತ್ತು 15 ವರ್ಷದ ಒಬ್ಬ ಬಾಲಕಿಯನ್ನು ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಬಲವಂತವಾಗಿ ತಮ್ಮ ಕಾರಿನಲ್ಲಿ ಕೂಡ್ರಿಸಿಕೊಂಡು, ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ಸ್ಯಾಂಡಲ್ವುಡ್ ನಟನ ವಿರುದ್ಧ ಯುವತಿ ದೂರು
ಈ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ ಎಂದೂ ದೂರಿನಲ್ಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.