ಆತ ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಾಪ್ಟ್ವೇರ್ ಕಂಪನಿಯನ್ನು ಸ್ಥಾಪಿಸಿ, ಸಿಇಒ ಆಗಿ ಅನೇಕರಿಗೆ ಕೆಲಸ ನೀಡಿರುವ ವಿದ್ಯಾವಂತ ವ್ಯಕ್ತಿ. ಆದರೆ ಸೈಬರ್ ಜಾಲದಲ್ಲಿ ಸಿಲುಕಿ ಬರೋಬ್ಬರಿ 2 ಕೋಟಿಗೂ ಹೆಚ್ಚು ಹಣ ಕಳೆದುಕೊಂಡು ಇಂದು ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.
ಬೆಂಗಳೂರು (ಫೆ.20): ಆತ ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿ, ಸಿಇಒ ಆಗಿ ಅನೇಕರಿಗೆ ಕೆಲಸ ನೀಡಿರುವ ವಿದ್ಯಾವಂತ ವ್ಯಕ್ತಿ. ಆದರೆ ಸೈಬರ್ ಜಾಲದಲ್ಲಿ ಸಿಲುಕಿ ಬರೋಬ್ಬರಿ 2 ಕೋಟಿಗೂ ಹೆಚ್ಚು ಹಣ ಕಳೆದುಕೊಂಡು ಇಂದು ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.
ಬೆಂಗಳೂರು ಮೂಲದ ಕಂಪೆನಿ ಸಿಇಒ ಮತ್ತು ಸ್ಥಳೀಯ ಸಾಫ್ಟ್‌ವೇರ್ ಕಂಪನಿಯ ಸಂಸ್ಥಾಪಕರೊಬ್ಬರು ಪ್ರತಿಷ್ಠಿತ ಕೊರಿಯರ್ ಕಂಪೆನಿಯ ಹಗರಣದಲ್ಲಿ ಮೋಸ ಹೋಗಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ 66 ವರ್ಷದ ಸಿಇಒ 2.3 ಕೋಟಿ ರೂ. ಕಳೆದುಕೊಂಡಿದ್ದಾರೆ. ಉದ್ಯಮಿಯ ಗುರುತು ಬಹಿರಂಗಪಡಿಸಲಾಗಿಲ್ಲ, ವಂಚಕರು ಫೆಡೆಕ್ಸ್ ಮುಂಬೈ ಮತ್ತು ಅಂಧೇರಿ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳಂತೆ ನಟಿಸಿ ಸಾಫ್ಟ್‌ವೇರ್ ಕಂಪನಿಯ ಸಂಸ್ಥಾಪಕನಿಗೆ ಮೋಸ ಮಾಡಿದ್ದಾರೆ.
ಭಾರತೀಯ ನಾಗರಿಕರಿಗೆ ಯುಕೆ ಭರ್ಜರಿ ಆಫರ್, ವೀಸಾ ಬೇಕಾದ್ರೆ ಮತದಾನ ಮಾಡಿ
TOI ವರದಿ ಪ್ರಕಾರ, ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಸಿಸುವ ಅಜಿತ್ ಎಂಬವರು ಈ ಮೋಸದ ಜಾಲಕ್ಕೆ ಬಲಿಪಶು ಆದವರು. ಫೆಬ್ರವರಿ 6 ರಂದು ಫೋನ್ ಕರೆ ಮೂಲಕ ಅಜಿತ್ ಅವರನ್ನಿ ಸಂಪರ್ಕಿಸಲು ಪ್ರಾರಂಭಿಸಿದ ವಂಚಕರು ಬಳಿಕ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಫೆಡೆಕ್ಸ್ ಕೊರಿಯರ್‌ನಲ್ಲಿ ಕೆಲಸ ಮಾಡುವ ಕಾರ್ಯನಿರ್ವಾಹಕರು ಮುಂಬೈನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡ ವಂಚಕರು, ನಿಮ್ಮ ಹೆಸರಿನಲ್ಲಿ 150 ಗ್ರಾಂ ಎಂಡಿಎಂಎ, 4 ಪಾಸ್‌ಪೋರ್ಟ್‌ಗಳು ಮತ್ತು 4 ಕೆಜಿ ಬಟ್ಟೆಗಳನ್ನು ಹೊಂದಿರುವ ಪಾರ್ಸೆಲ್ ಇತ್ತು ಅದನ್ನು ಶಾಂಘೈಗೆ ಅಕ್ರಮವಾಗಿ ಕಳುಹಿಸಲಾಗುತ್ತಿದೆ ಎಂದು ಹೇಳಿಕೊಂಡು. ಹೆಸರು, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಜಿತ್ ಅವರ ವೈಯಕ್ತಿಕ ವಿವರಗಳನ್ನು ನಜೂಕಿನಿಂದ ಪಡೆದುಕೊಂಡಿದ್ದಾರೆ.
ಮಾತ್ರವಲ್ಲ ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದ ವಂಚಕರು ಕರೆಯನ್ನು ಪೊಲೀಸ್ ಅಧಿಕಾರಿಯೊಬ್ಬರಿಗೆ ವರ್ಗಾಯಿಸುತ್ತಾರೆ ಎಂದು ಸಿಇಒಗೆ ತಿಳಿಸಲಾಯಿತು.
ಪೊಲೀಸ್ ಅಧಿಕಾರಿ ತನ್ನನ್ನು ಬಾಲಾಜಿ ಸಿಂಗ್ ಎಂದು ಗುರುತಿಸಿಕೊಂಡು ಸಿಇಒ ಬಳಿ ಮಾತನಾಡಿದ್ದು, ತಕ್ಷಣ ಮುಂಬೈಗೆ ಬರುವಂತೆ ಅಥವಾ ಬಂಧನವನ್ನು ಎದುರಿಸುವಂತೆ ಕೇಳಿಕೊಂಡಿದ್ದಾನೆ. ಮಾತ್ರವಲ್ಲ ಸ್ಕ್ಯಾಮರ್ ಸ್ಕೈಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ಸಿಇಒಗೆ ಹೇಳಿದ್ದಾನೆ. ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಇದ್ದವನಿಗೆ ಕರೆ ಮಾಡಿದಾಗ ವೀಡಿಯೊದಲ್ಲಿ, ಸಮವಸ್ತ್ರದಲ್ಲಿ ಕೆಲವು ಪುರುಷರು ಕುಳಿತಿರುವುದನ್ನು ಅವರು ನೋಡಿದರು, ಮಾತ್ರವಲ್ಲ ಅವರೆಲ್ಲ ನಿಜವಾದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಸಿಇಒ ನಂಬುವಂತೆ ವಂಚಕ ಮಾಡಿದನು.
ಮಾದಕ ದ್ರವ್ಯ ದಂಧೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಸಿಇಒ ವಿವರಿಸಲು ಪ್ರಯತ್ನಿಸಿದಾಗಲೂ, ವಂಚಕರು ತಮ್ಮ ಆಧಾರ್ ವಿವರಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯನ್ನು ರಚಿಸಿದ್ದು, ಮತ್ತು ಆ ಖಾತೆಯಿಂದ ಹಣ ವರ್ಗಾವಣೆ ನಡೆಯುತ್ತಿದೆ ಎಂದು ಹೇಳಿದರು.
ವಂಚಕರು ಸಂಭಾಷಣೆಯನ್ನು ಗೌಪ್ಯವಾಗಿಡಲು ಹೇಳಿದರು ಮತ್ತು ಅವನ ಚಲನವಲನಗಳನ್ನು ಪತ್ತೆಹಚ್ಚಲು "ಸ್ಲೀಪರ್ ಸೆಲ್‌ಗಳನ್ನು" ನಿಯೋಜಿಸಲಾಗುತ್ತಿದೆ ಸಿಇಒಗೆ ತಿಳಿಸಿದರು. ನಂತರ, ಅವರು ತೊಂದರೆಯಿಂದ ಹೊರಬರಲು ನಿಮಗೆ ಸಹಾಯ ಮಾಡುವುದಾಗಿ ಹೇಳಿ, ಅವರ ಖಾತೆಯಿಂದ ಎಲ್ಲಾ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವರ್ಗಾಯಿಸಲು ಕೇಳಿಕೊಂಡರು.
ಫೆಬ್ರವರಿ 7 ರಿಂದ14 ರ ನಡುವೆ ಸಿಇಒ ಅವರು ಎಂಟು ಖಾತೆಗಳಿಗೆ 30 ಲಕ್ಷ, 20 ಲಕ್ಷ, 10 ಲಕ್ಷ, 50 ಲಕ್ಷ, 30 ಲಕ್ಷ, 30 ಲಕ್ಷ, 50 ಲಕ್ಷ ಮತ್ತು 5 ಲಕ್ಷ ರೂ. ಹೀಗೆ ಒಟ್ಟು 2.3 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ನಂತರ ಸ್ಕೈಪ್ ಕರೆಗಳು ನಿಂತು ಹೋಗಿವೆ ಮತ್ತು ಅವರು ವಂಚನೆಗೊಳಗಾಗಿರುವುದನ್ನು ಅರಿತುಕೊಂಡು ಫೆಬ್ರವರಿ 16 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.