Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ

Kannadaprabha News   | Asianet News
Published : Feb 03, 2022, 04:29 AM IST
Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ

ಸಾರಾಂಶ

*   ವಿಶಾಖಪಟ್ಟಣದಲ್ಲಿ ಗಾಂಜಾ ಖರೀದಿಸಿ ರಾಜ್ಯದಲ್ಲಿ ಮಾರಾಟ *   ಪಣತ್ತೂರು ರೈಲ್ವೆ ನಿಲ್ದಾಣ ಸಮೀಪ ಆರೋಪಿಗಳನ್ನು ಬಂಧನ *   ದಾಳಿ ವೇಳೆ ತಪ್ಪಿಸಿಕೊಂಡಿರುವ ಆರೋಪಿ ಜಾಲ ಬೀಸಿದ ಪೊಲೀಸರು

ಬೆಂಗಳೂರು(ಫೆ.03):  ಬೆಂಗಳೂರು(Bengaluru) ಸೇರಿದಂತೆ ಇತರೆ ಜಿಲ್ಲೆಗಳಿಗೆ ಗಾಂಜಾ(Marijuana) ಪೂರೈಕೆ ಮಾಡುತ್ತಿದ್ದ ಮೂವರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮುದ್ದಲಪಲ್ಲಿ ಗ್ರಾಮದ ಆರ್‌.ಅಜಯ್‌ ಕುಮಾರ್‌, ರಾಜು ಅಲಿಯಾಸ್‌ ರಾಜ್‌ ಬಾಬು ಹಾಗೂ ಆಂಧ್ರಪ್ರದೇಶದ(Andhra Pradesh) ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲೂಕಿನ ರವಿ ಅಲಿಯಾಸ್‌ ರವಿ ಮೊಗಸಾಲ ಬಂಧಿತನಾಗಿದ್ದು, ಆರೋಪಿಗಳಿಂದ(Accused) 40 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಪಣತ್ತೂರು ರೈಲ್ವೆ ನಿಲ್ದಾಣ ಸಮೀಪ ಆರೋಪಿಗಳನ್ನು ಬಂಧಿಸಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಆಂಧ್ರಪ್ರದೇಶದ ಮದನಪಲ್ಲಿಯ ಶಂಕರ್‌ ಅಲಿಯಾಸ್‌ ರಾಜೇಶ್‌ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

ಶಂಕರ್‌ ವೃತ್ತಿಪರ ಪೆಡ್ಲರ್‌ ಆಗಿದ್ದು, ಆತನ ಮೇಲೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಪ್ರಕರಣಗಳಿವೆ. ಶಂಕರ್‌ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎರಡ್ಮೂರು ಕಿಂಟ್ವಾಲ್‌ ಗಾಂಜಾ ಖರೀದಿಸಿ ಬಳಿಕ ಅದನ್ನು ತನ್ನ ಸಹಚರರ ಮೂಲಕ ಕರ್ನಾಟಕದ(Karnataka) ಸಬ್‌ ಪೆಡ್ಲರ್‌ಗಳಿಗೆ(Peddlers) ಪೂರೈಸುತ್ತಿದ್ದ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿನವರೆಗಿನ ಪೆಡ್ಲರ್‌ಗಳಿಗೆ ಶಂಕರ್‌ ತಂಡ ಗಾಂಜಾ ಸರಬರಾಜು ಮಾಡುತ್ತಿತ್ತು. ಈ ಬಗ್ಗೆ ಬಾತ್ಮೀದಾರರ ಮೂಲಕ ಮಾರತ್ತಹಳ್ಳಿ ಇನ್‌ಸ್ಪೆಕ್ಟರ್‌ ಎಸ್‌ಎಲ್‌ಆರ್‌ ರೆಡ್ಡಿ ತಂಡಕ್ಕೆ ಮಾಹಿತಿ ಸಿಕ್ಕಿದೆ. ಅಂತೆಯೇ ಪಣತ್ತೂರು ಸಮೀಪ ಗಾಂಜಾ ವಿಲೇವಾರಿಗೆ ಬಂದಾಗ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು(Arrest) ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಂಜಾ ಮಾರುತ್ತಿದ್ದ ತ್ರಿಪುರದ ವ್ಯಕ್ತಿ ಸೆರೆ

ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಪ್ಲೈ-ಒವರ್‌ ಕೆಳಗೆ ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ತ್ರಿಪುರ ಮೂಲದ ವ್ಯಕ್ತಿಯನ್ನು ಆತನ ಬಳಿ ಇದ್ದ 4 ಕೆಜಿ ಗಾಂಜಾ ಸೊಪ್ಪಿನ ಸಮೇತ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಡಿವೈಎಸ್‌ಪಿ ಮುಂದಾಳತ್ವದಲ್ಲಿ ಕಾರ್ಯಾರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬೆಂಗಳೂರಿನ ಹೆಬ್ಬಾಳ ಬಳಿ ಇರುವ ಕಾಗ್ಜೆಂಟ್‌ ಈ-ಸರ್ವೀಸ್‌ ಪ್ರೈ. ಲಿಮಿಟೆಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತ್ರಿಪುರ ರಾಜ್ಯದ ಬಿನೋಯ್‌ ಕಲಾಯ್‌ ಬಿನ್‌ ಲೇಟ್‌ ರಬಿ ಕುಮಾರ್‌ ಕಲಾಯ (32) ಎಂದು ಗುರುತಿಸಲಾಗಿದೆ.

ಇದೇ ವೇಳೆ ಬಿನೋಯ್‌ ಕಲಾಯ್‌ ಎಂಬಾತನಿಂದ ಗಾಂಜಾ ಖರೀದಿ ಮಾಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಶಿಡ್ಲಘಟ್ಟತಾಲೂಕಿನ ವರಸಂದ್ರದ ನಿವಾಸಿ ಲಕ್ಷ್ಮಯ್ಯ ಬಿನ್‌ ನಾರಾಯಣಪ್ಪ (30), ಬಾಗೇಪಲ್ಲಿ ಥಾಲೂಕಿನ ಭತ್ತರೋಲಹಳ್ಳಿ ಗ್ರಾಮದ ನಿವಾಸಿ ಪಾಪಿರೆಡ್ಡಿ ಬಿನ್‌ ತಿಮ್ಮಣ್ಣ (35), ಚಿಂತಾಮಣಿ ಥಾಲೂಕಿನ ಗಡಿಗವಾರಹಳ್ಳಿ ಗ್ರಾಮದ ನಿವಾಸಿಗಳಾದ ಜಮಾಲ್‌ ಸಾಬ್‌ ಬಿನ್‌ ಹೈದರ್‌ ಸಾಬ್‌ (55) ಹಾಗೂ ಆದಿಲ್‌ ಬಿನ್‌ ಸುಭಾನ… ( 27) ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಪ್ರಶಾಂತ್‌ ಹಾಗೂ ಸಿಬ್ಬಂದಿ ಡಿವೈಎಸ್‌ಪಿ ವಿ.ಕೆ.ವಾಸುದೇವ್‌ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು.

Bengaluru Underworld: ಭೂಗತ ಪಾತಕಿಗಳ ಬೆನ್ನುಮೂಳೆ ಮುರಿಯಲು ಸಜ್ಜಾದ DCP ಪಾಂಡೆ

ಬೇಟೆಗೆ ತೆರಳುತ್ತಿದ್ದ 6 ಮಂದಿ ಬಂಧನ

ಚಿಕ್ಕಬಳ್ಳಾಪುರ: ಅಕ್ರಮವಾಗಿ ಬಂದೂಕು ಹಿಡಿದು ವ್ಯನ್ಯ ಜೀವಿಗಳ(Wild Animals) ಬೇಟೆಗೆ ಹೊರಟಿದ್ದ 6 ಮಂದಿ ಅಸಾಮಿಗಳನ್ನು ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. 

ಬಂಧಿತರನ್ನು ಚಿಂತಾಮಣಿ ತಾಲೂಕಿನ ಗಡಿಗವಾರಹಳ್ಳಿ ಗ್ರಾಮದ ರಾಮಾಂಜಿ ಬಿನ್‌ ವೆಂಕಟರಾಯಪ್ಪ, (30), ಮುನೇಶ ಬಿನ್‌ ಪಿಲ್ಲನಾಗಪ್ಪ,(30), ಅಂಬರೀಶ್‌ ಬಿನ್‌ ನರಸಿಂಹಪ್ಪ, (26), ಮೂರ್ತಿ ಬಿನ್‌ ಮುನಿವೆಂಕಟಪ್ಪ, (29), ನಾಗರಾಜ ಬಿನ್‌ ಶಂಕರ (24), ಶ್ರೀಕಾಂತ ಬಿನ್‌ ಶ್ರೀನಿವಾಸ, (21), ಎಂದು ಗುರುತಿಸಲಾಗಿದೆ. ಆರೋಪಿಗಳು ಸಮೀಪದ ತಿರುಮಲಾಪುರದ ಬೆಟ್ಟದ ಕಡೆಗೆ ಕಾನೂನು ಬಾಹಿರವಾಗಿ ಎಸ.ಬಿ.ಎಂ.ಎಲ್‌ ಬಂದೂಕು ಹೊಂದಿ ಬೇಟೆಯಾಡುವ ಉದ್ದೇಶದಿಂದ ಹೋಗುತ್ತಿದ್ದ ವೇಳೆ ಕೆಂಚಾರ್ಲಹಳ್ಳಿ ಠಾಣೆ ಸಿಪಿಐ ಪುರುಷೋತ್ತಮ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಎಸಬಿ.ಎಂ.ಎಲ್‌ ಬಂದೂಕು ಮತ್ತು ಮದ್ದು, ಕಬ್ಬಿಣದ ಚೂರುಗಳನ್ನು, ಎರಡು ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಸದರಿ ಬಂದೂಕನ್ನು ಮೊದಲ ಆರೋಪಿಸಿ ರಾಮಾಂಜಿ ಮಾವನಾದ ವಂಗಿಮಾಳ್ಳು ಗ್ರಾಮದ ಅಂಜನೇಯಪ್ಪಗೆ ಸೇರಿದ್ದು ಎಂದು ಪೊಲೀಸರ ಪರಿಶೀಲನೆ ವೇಳೆ ತಿಳಿದು ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!