Murugha Mutt Row: ಇದು ಕ್ರಿಶ್ಚಿಯನ್ ಮಿಷನರಿಗಳ ಷಡ್ಯಂತ್ರ: ಮುರುಘಾ ಮಠದ ಆಪ್ತ ಜಿತೇಂದ್ರ ಆರೋಪ

By Manjunath NayakFirst Published Sep 6, 2022, 1:06 PM IST
Highlights

Murugha Mutt Row: ಮತಾಂತರ ಮಾಡುವುದೇ ಒಡನಾಡಿ ಮೂಲ ಉದ್ದೇಶ,  ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಒಡನಾಡಿ ಮಾಡುತ್ತಿದೆ ಎಂದು ಮುರುಘಾ ಮಠದ ಆಪ್ತ ಜಿತೇಂದ್ರ ಗಂಭೀರ ಆರೋಪ ಮಾಡಿದ್ದಾರೆ

ಚಿತ್ರದುರ್ಗ (ಸೆ. 06): "ಮತಾಂತರ ಮಾಡುವುದೇ ಒಡನಾಡಿ ಮೂಲ ಉದ್ದೇಶ,  ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಒಡನಾಡಿ ಮಾಡುತ್ತಿದೆ, ಇದು ಕ್ರಿಶ್ಚಿಯನ್ ಮಿಷನರಿಗಳ (Christian Missionaries) ಷಡ್ಯಂತ್ರ" ಎಂದು ಮುರುಘಾ ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಎನ್ ಹುಲಿಕುಂಟೆ‌ ಹೇಳಿದರು. ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ (Murugha Shri) ಬಂಧನ ಹಿನ್ನೆಲೆ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಒಡನಾಡಿ ಶೋಷಿತ ಸಮುದಾಯಗಳನ್ನು ಬಳಸಿಕೊಂಡು ಮಿಸ್ ಯೂಸ್ ಮಾಡುತ್ತಿದೆ.  ಒಡನಾಡಿ ಸಂಸ್ಥೆಯವರು ಎಲ್ಲಾ ಕಡೆ ಏಜೆಂಟರನ್ನು ಬಿಟ್ಟಿದಾರೆ, ಎಲ್ಲಾ ಕಡೆ ಏಜೆಂಟರು ಅವರಿಗೆ ಮಾಹಿತಿ ಕೊಡ್ತಾರೆ, ಒಡನಾಡಿ ಸಂಸ್ಥೆಯವರು ಬಡವರನ್ನು ಟಾರ್ಗೆಟ್ ಮಾಡಲ್ಲ, ಹಣವಂತರೇ ಒಡನಾಡಿ ಟಾರ್ಗೆಟ್" ಎಂದು ಆರೋಪಿಸಿದರು. 

ಸಾಧುಕೋಕಿಲ ಸಹ ಒಡನಾಡಿ ಸಂಸ್ಥೆ ಮೇಲೆ ಕೇಸ್ ನಡೆಸುತ್ತಿದ್ದಾರೆ ಎಂದ ಅವರು "ಇದೊಂದು ವ್ಯವಸ್ಥಿತ ಜಾಲ, ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳ ಕೈಗೊಂಬೆ ಒಡನಾಡಿ ಸಂಸ್ಥೆ, ಇವರ ಮೇಲೆ ಅನೇಕ ದೌರ್ಜನ್ಯದ ಕೇಸುಗಳಿವೆ, ಸಾಮಾಜಿಕ ಜವಾಬ್ದಾರಿ ಇರುವವರ ವಿರುದ್ಧ ಷಡ್ಯಂತ್ರ ಮಾಡುತ್ತಾರೆ, ಹಿಂದೂ ಧರ್ಮವನ್ನು ಒಡೆಯುವಂತ ಕೆಲಸ,  ಸಾಮರಸ್ಯ ಕೆಡಿಸುವಂತ ಕೆಲಸ ಮಾಡುತ್ತಿದ್ದಾರೆ" ಎಂದರು

ಮತಾಂತರದ ಮೂಲಕ ದೇಶ ಒಡೆಯುವ ಕೆಲಸ: ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ - ಪರಶುರಾಮ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಜಿತೇಂದ್ರ "ಮೇಲ್ಜಾತಿ, ಕೆಳಜಾತಿ ಎಂಬ ಭೇದ ಸೃಷ್ಟಿ ಮಾಡುತ್ತಿದ್ದಾರೆ,  ಶೋಷಿತ ಹೆಣ್ಮಕ್ಕಳನ್ನು ಮತಾಂತರ ಮಾಡುತ್ತಾರೆ, ಮತಾಂತರದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ, ವಿದೇಶದ ಕ್ರಿಶ್ಚಿಯನ್ ಮಿಷಿನರಿಗಳಿಂದ ಇವರಿಗೆ ಹಣ ಬರುತ್ತೆ, ಷಡ್ಯಂತ್ರದಲ್ಲಿ ಪಾಲ್ಗೊಳ್ಳುವವರು ಮತಾಂತರಗೊಂಡ ಕ್ರಿಶ್ಚಿಯನ್ನರು, ಇವರಿಗೆ ವಿದೇಶದಿಂದ ಹಣ ಬರುತ್ತದೆ, ಇವರ ಅಕೌಂಟನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು" ಎಂದು ಹೇಳಿದರು. 

ಜೈಲು ಸೇರಿದ ಮುರುಘಾ ಶರಣರ ವಿರುದ್ಧ ಮತ್ತೊಂದು ಬಾಂಬ್, ವಿಡಿಯೋ ಇದೆ ಎಂದ ಒಡನಾಡಿ!

"ಒಡನಾಡಿ ಸಂಸ್ಥೆಯ ವಿರುದ್ದ ನಮ್ಮ ಹೋರಾಟ ಸದಾ ನಡೆಯುತ್ತೆ, ಗೃಹಮಂತ್ರಿಗಳನ್ನ ಭೇಟಿಯಾಗಿ ವಿನಂತಿ ಮಾಡುತ್ತೇವೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಮೂಲಕ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸುತ್ತೇವೆ" ಎಂದು ಜಿತೇಂದ್ರ ಹೇಳಿದರು. 

9 ದಿನ ನ್ಯಾಯಾಂಗ ವಶಕ್ಕೆ ಮುರುಘಾ ಶರಣರು: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಎದುರಿಸುತ್ತಿರುವ ಮುರುಘಾ ಶ್ರೀಗಳಿಗೆ ಚಿತ್ರದುರ್ಗ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಸೆಪ್ಟಂಬರ್ 14 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿ ಆದೇಶಿಸಿದೆ.  ಈ ಮೊದಲು ಶರಣರನ್ನು ನಾಲ್ಕು ದಿನ ಪೊಲೀಸರ ವಶಕ್ಕೆ ನೀಡಲಾಗಿತ್ತು. ಪೊಲೀಸ್‌ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 12ಕ್ಕೆ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. 

ಆ ಬಳಿಕ ಮುರುಘಾ ಶರಣರನ್ನು ನೇರವಾಗಿ ನಗರದ ಹೊರವಲಯದಲ್ಲಿರುವ ಬಂಧೀಖಾನೆಗೆ ಕರೆದೊಯ್ಯಲಾಯಿತು. ಏತನ್ಮಧ್ಯೆ ಪೋಕ್ಸೋ ಪ್ರಕರಣದ ಮೂರನೇ ಆರೋಪಿ ಕಿರಿಯ ಸ್ವಾಮೀಜಿ ಹಾಗೂ ನಾಲ್ಕನೇ ಆರೋಪಿ ಪರಮಶಿವಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.7ಕ್ಕೆ ನಿಗದಿ ಪಡಿಸಲಾಗಿದೆ.

ಮಹಿಳೆಯರ ಸಂಭಾಷಣೆಯಲ್ಲಿ ಕೇಳಿಬಂದ ಆರೋಪ: ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ

ಅರ್ಜಿ ವಿಚಾರಣೆಯನ್ನು ಸೋಮವಾರವೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು. ಪ್ರಕರಣಕ್ಕೆ ಸಂಬಂಧಿಸಿ ಶರಣರ ಜತೆಗೆ ಎರಡನೇ ಆರೋಪಿಯಾದ ಹಾಸ್ಟೆಲ್‌ ವಾರ್ಡನ್‌ ರಶ್ಮಿಯನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

click me!