ಕೋಲಾರ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಕಾರಿನಲ್ಲಿ ಶ್ವೇತಾ ಮೈಸೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಳಿದ ಪೊಲೀಸರು, ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಬೆಂಗಳೂರು(ಡಿ.21): ಚಿನ್ನಾಭರಣ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಆಭರಣ ಖರೀದಿಸಿ ಹಣ ಪಾವತಿಸದೆ ವಂಚಿಸಿದ ಮಾಜಿ ಸಚಿವರ ಸ್ನೇಹಿತೆಯನ್ನು ಪುಲಕೇಶಿ ನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಬಂಧಿತೆ. ಕೆಲ ದಿನಗಳ ಹಿಂದೆ ಅವೆನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿಸುಮಾರು 2.42 ಕೋಟಿ ರು. ಮೌಲ್ಯದ ಆಭರಣವನ್ನು ಖರೀದಿಸಿ ಶ್ವೇತಾ ವಂಚಿಸಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಎಸಿಪಿ ಗೀತಾ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
undefined
ಬೆಂಗಳೂರು: ಒಂದೇ ಮನೆ 12 ಜನಕ್ಕೆ ಲೀಸ್, 1 ಕೋಟಿ ವಂಚನೆ!
ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿ ಕೊಂಡಿದ್ದ ಶ್ವೇತಾಗೌಡ, ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ತುಳಿದಿದ್ದರು. ಹಾಗಾಗಿ ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಎಂದು ಹೇಳಿ ಕೆಲ ಚಿನ್ನ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು. ಈ ಮೊದಲು ಇದೇ ರೀತಿ ಚಿನ್ನದ ವ್ಯಾಪಾರಿಗೆ ಮೋಸಗೊಳಿಸಿದ ಪ್ರಕರಣದಲ್ಲಿ ಶ್ವೇತಾಗೌಡಳನ್ನು ಯಲಹಂಕ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದ ಆಕೆ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಳು ಎನ್ನಲಾಗಿದೆ.
ಘಟನೆ ಹಿನ್ನೆಲೆ:
ಕೆಲ ದಿನಗಳ ಹಿಂದೆ ಕಮರ್ಷಿಯಲ್ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್ ಮಾಲೀಕ ಸಂಜಯ್ ಭಾಪ್ಪಾ ಅವರನ್ನು ಭೇಟಿಯಾಗಿದ್ದ ಶ್ವೇತಾಗೌಡ, ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದು, ನಿಮ್ಮಿಂದಲೇ ಆಭರಣ ಖರೀದಿ ಸುತ್ತೇನೆ ಎಂದಿದ್ದಳು. ಇದಕ್ಕೆ ಸಂಜಯ್ ಸಹ ಸಮ್ಮಿತಿಸಿದ್ದರು. ಆಕೆಯ ಮಾತು ನಂಬಿ ಆರಂಭದಲ್ಲಿ ಎರಡು ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು. ಹೀಗೆ ವಿಶ್ವಾಸಗಳಿಸಿದ ಶ್ವೇತಾ, ಕೊನೆಗೆ ನವರತ್ನ ಜ್ಯುವೆಲರ್ಸ್ ನಲ್ಲಿ 2.42 ಕೋಟಿ ರು. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಮಿ ಸಹ ಹಾಕಿದ್ದಳು. ಈ ಬಗ್ಗೆ ಜ್ಯುವೆಲರ್ಸ್ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ಶ್ವೇತಾಗೌಡ ನಗರ ತೊರೆದು ತಪ್ಪಿಸಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ.
ಗಣ್ಯರ ಜತೆಗಿರುವ ಫೋಟೋ ದುರ್ಬಳಕೆ
ರಾಜಕಾರಣಿಗಳು ಹಾಗೂ ಚಲನಚಿತ್ರ ನಟ-ನಟಿಯರ ಜತೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಆರೋಪಿ ಶ್ವೇತಾ, ಆ ಫೋಟೋವನ್ನು ಬಳಸಿಕೊಂಡು ತನಗೆ ಗಣ್ಯರ ಸ್ನೇಹವಿದೆ ಎಂದು ಪರಿಚಿತರಲ್ಲಿ ಹೇಳಿಕೊಳ್ಳುತ್ತಿದ್ದಳು. ಇದೇ ರೀತಿ ನವರತ್ನ ಮಳಿಗೆ ಮಾಲೀಕರಿಗೆ ಸಹ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಸ್ನೇಹಿತೆ ಎಂದು ಹೇಳಿಕೊಂಡು ಆಕೆ ವಂಚಿಸಿದ್ದಳು ಎನ್ನಲಾಗಿದೆ.
ವರ್ತೂರು ಪ್ರಕಾಶ್‌ಗೆ ವಿಚಾರಣೆಗೆ ನೋಟಿಸ್
ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಶ್ವೇತಾ - ಖರೀದಿಸಿದ್ದ 2.945 ಕೆಜಿ ಚಿನ್ನವನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆಗೆ, ಅಂಗಡಿ ಸಿಬ್ಬಂದಿ ತಲುಪಿಸಿದ್ದರು. ಶ್ವೇತಾ ಮಾಜಿ ಸಚಿವರ ಮನೆ ವಿಳಾಸವನ್ನೇ ಕೊಟ್ಟಿದ್ದಳು. ಹಾಗಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕನ ಕಾರಿನಲ್ಲಿ ಸಿಕ್ಕಿಬಿದ್ದ ಆರೋಪಿ
ಕೋಲಾರ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಕಾರಿನಲ್ಲಿ ಶ್ವೇತಾ ಮೈಸೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಳಿದ ಪೊಲೀಸರು, ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.