ಚಾಮರಾಜನಗರದಲ್ಲಿ ಭಾರೀ ಕಳ್ಳತನ: ಮುಕ್ಕಾಲು ಕೆಜಿ ಚಿನ್ನ, 5.5 ಲಕ್ಷ ನಗದು, 15 ಕೆಜಿ ಬೆಳ್ಳಿ ದೋಚಿದ ಕಳ್ಳರು!

By Govindaraj S  |  First Published Jan 9, 2025, 5:01 PM IST

ಚಾಮರಾಜನಗರದಲ್ಲಿ ಸ್ವಲ್ಪ ದಿನ ಸೈಲೆಂಟಾಗಿದ್ದ ಚೋರರು ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲೇ ಕಂಡು ಕೇಳರಿಯದಂತ ಕಳ್ಳತನ ನಡೆದು ಹೋಗಿದೆ. ಕಳ್ಳತನ ವಿಚಾರ ಕೇಳಿ ಖಾಕಿ ಪಡೆಯೆ ಒಂದು ಕ್ಷಣ ದಂಗಾಗಿದೆ.


ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜ.09): ಚಾಮರಾಜನಗರದಲ್ಲಿ ಸ್ವಲ್ಪ ದಿನ ಸೈಲೆಂಟಾಗಿದ್ದ ಚೋರರು ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲೇ ಕಂಡು ಕೇಳರಿಯದಂತ ಕಳ್ಳತನ ನಡೆದು ಹೋಗಿದೆ. ಕಳ್ಳತನ ವಿಚಾರ ಕೇಳಿ ಖಾಕಿ ಪಡೆಯೆ ಒಂದು ಕ್ಷಣ ದಂಗಾಗಿದೆ. ಅಷ್ಟಕ್ಕೂ ಯಾವ ಪ್ರಮಾಣದ ಕಳ್ಳತನ ನಡೆದಿದೆ ಅಂತೀರಾ. ನಡು ರಾತ್ರಿಯಲ್ಲಿ ಮನೆ ಮುಂದೆ ನಿಂತಿರೋ ಪೊಲೀಸರ ವಾಹನ.. ಮನೆ ಒಳಗೆ ಅದೇನನ್ನೊ ತಡಕಾಡುತ್ತಿರೋ ಹಿರಿಯ ಅಧಿಕಾರಿಗಳು.. ಮುರಿದು ಹೋಗಿರೋ ಬೀರು ಕಪಾಟನ್ನ ತೋರಿಸುತ್ತ ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಮನೆಯ ಮಾಲಕಿ. 

Tap to resize

Latest Videos

ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಗಡಿ ನಾಡು ಚಾಮರಾಜನಗರದಲ್ಲಿ. ಹೌದು! ಚಾಮರಾಜನಗರದ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಮನೆಗಳ್ಳತನ ನಡೆದು ಹೋಗಿದೆ. ನಗರದ ಸಿದ್ದಾರ್ಥ ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಕಚೇರಿ ಎದುರೇ ಇರುವ  ಶ್ರೀನಿವಾಸ್ ಕುಮಾರ್ ಎಂಬುವರ ಮನೆ ಬಾಗಿಲು ಮೀಟಿ ನುಗ್ಗಿರುವ ಚೋರರು ಬರೋಬ್ಬರಿ ಮುಕ್ಕಾಲು ಕೆಜಿ ಗೋಲ್ಡ್ 15 ಕೆಜಿ ಬೆಳ್ಳಿ, ಹಾಗೂ 5.5ಲಕ್ಷ ಹಾರ್ಡ್ ಕ್ಯಾಶ್ ಒಂದು ಟ್ಯಾಬ್ ಹಾಗು ಒಂದು ಮೊಬೈಲ್  ದೋಚಿ ಗಾಯಬ್ ಆಗಿದ್ದಾರೆ. 

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಬೆರಳಚ್ಚು ತಜ್ಞರು ಎಫ್.ಎಸ್.ಎಲ್ ತಂಡ ಖದೀಮರು ಬಿಟ್ಟು ಹೋದ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಆಗಿದ್ದಿಷ್ಟೇ ನಿನ್ನೆ ಶ್ರೀನಿವಾಸ್ ಕುಮಾರ್ ಅವರ ತಂದೆ ವಾರ್ಷಿಕ ತಿಥಿಯ ಕಾರ್ಯವಿತ್ತು ಹಾಗಾಗಿ ಶ್ರೀನಿವಾಸ್ ಕುಮಾರ್  ಹಾಗೂ ಪತ್ನಿ ರೇಣುಕಾ ಮೂರು ದಿನಗಳ ಹಿಂದೆ  ಬೆಂಗಳೂರಿಗೆ ತೆರಳಿದ್ದಾರೆ. ಮಕ್ಕಳು ಬೆಂಗಳೂರಿನಲ್ಲೆ ಸೆಟಲ್ ಆಗಿರೊ ಕಾರಣ ಗಂಡ ಹೆಂಡ್ತಿ ಚಾಮರಾಜನಗರದಲ್ಲೇ ಇದ್ರು ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಹೋಗಿ ತಂದೆಯ ಕಾರ್ಯ ಮಾಡಿದ್ದಾರೆ. 

ಹುಡುಗಿ ಕೈಕೊಟ್ಟಿದ್ದಕ್ಕೆ ಮೇಷ್ಟ್ರುಗೆ ಶಿಕ್ಷೆ! ನ್ಯೂ ಇಯರ್​​ ಲಡ್ಡು​​ನಲ್ಲಿ ವಿಷ.. ಮೂಲದಲ್ಲಿ ಲವ್‌ ಸ್ಟೋರಿ!

ಮೂರು ದಿನಗಳಿಂದ  ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಚೋರರು ತಡ ರಾತ್ರಿ  ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಚಾಮರಾಜನಗರ ಇತಿಹಾಸದಲ್ಲೇ ಇಷ್ಟು ದೊಡ್ಡ ಕಳ್ಳತನ ಪ್ರಕರಣ ಇದಾಗಿದ್ದು, ಸ್ವತಃ ಪೊಲೀಸರೆ ಹೌ ಹಾರಿದ್ದಾರೆ. ಅದು ಜನನಿಬಿಡ ಪ್ರದೇಶದಲ್ಲೇ ಮನೆಗೆ ಕನ್ನಾ ಹಾಕಿರುವುದು ಪೊಲೀಸರ ನಿದ್ದೆಗೆಡಿಸಿದೆ. ಸದ್ಯ ಪ್ರಕರಣ ದಾಕಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಚೋರರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

click me!