
ಬೆಂಗಳೂರು(ಜ.12): ನಿದ್ದೆಯಲ್ಲಿದ್ದ ಚಾಲಕನ ಗಮನ ಬೇರೆಡೆ ಸೆಳೆದ ನಾಲ್ವರು ಕಳ್ಳರು ಕಾರು ಸಮೇತ ಪರಾರಿಯಾಗಿರುವ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾವರೆಕೆರೆ ನಿವಾಸಿ ಲೋಕೇಶ್ (45) ಕಾರು ಕಳೆದುಕೊಂಡವರು. ಓಲಾ-ಊಬರ್ ಚಾಲಕರಾಗಿದ್ದ ಲೋಕೇಶ್ ಜ.8ರಂದು ತಡರಾತ್ರಿ 2.30ರಲ್ಲಿ ಕೆ.ಆರ್.ಪುರದಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ಮನೆಗೆ ಹೋಗುತ್ತಿದ್ದರು. ಮಂಪರು ನಿದ್ರೆ ಹಿನ್ನೆಲೆಯಲ್ಲಿ ಇಂದಿರಾನಗರದ ಬೇಕರಿಯೊಂದರ ಮುಂದೆ ಕಾರು ನಿಲ್ಲಿಸಿ ಕಾರಿನೊಳಗೆ ನಿದ್ರೆಗೆ ಜಾರಿದ್ದರು.
ಕಾರು ಅಪಘಾತ: ಸಚಿವರಿಗೆ ಗಂಭೀರ ಗಾಯ, ಪತ್ನಿ ಸೇರಿ ಇಬ್ಬರು ಸಾವು
ಮುಂಜಾನೆ 5ರ ವೇಳೆಗೆ ಅಪರಿಚಿತನೊಬ್ಬ ಚಾಲಕನನ್ನು ನಿದ್ರೆಯಿಂದ ಎಬ್ಬಿಸಿ ನಿಮ್ಮ ಕಾರಿನ ಕೀಯನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದು, ಲೋಕೇಶ್‌ನನ್ನು ಎಬ್ಬಿಸಿದ ವ್ಯಕ್ತಿ ಸಮೀಪದಲ್ಲಿದ್ದ ಕಟ್ಟಡವೊಂದರ ಬಳಿ ಕೀ ಹುಡುಕಲು ಕರೆದೊಯ್ದಿದ್ದಾನೆ. ಈ ವೇಳೆ ಆರೋಪಿ ಲೋಕೇಶ್‌ರ ಗಮನ ಬೇರೆಡೆ ಸೆಳೆದು ತನ್ನ ಸಹಚರರ ಜತೆ ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ