ನೀರು ಕೊಡದಕ್ಕೆ ವಿಧವೆಯ ಗುಪ್ತಾಂಗದೊಳಗೆ ರಾಡ್ ನುಗ್ಗಿಸಿದ ಕಿರಾತಕರು!

By Suvarna News  |  First Published Jan 11, 2021, 10:26 PM IST

ಮಧ್ಯಪ್ರದೇಶದಲ್ಲಿ ಕ್ರೌರ್ಯ/ ವಿಧವೆಯ ಖಾಸಗಿ ಅಂಗದೊಳಗೆ ರಾಡ್ ನುಗ್ಗಿಸಿದ ಕಿರಾತಕರು/ ಪ್ರಕರಣಕ್ಕೆ ಸಂಬಂಧಿಸಿ ಮೂವರ ಬಂಧನ/ ಗಂಭೀರ ಸ್ಥಿತಿಯಲ್ಲಿರುವ ವಿಧವೆ


ಮಧ್ಯಪ್ರದೇಶ (ಜ. 11) ಮಧ್ಯಪ್ರದೇಶದಿಂದ ಘೋರ ಪ್ರಕರಣವೊಂದು ವರದಿಯಾಗಿದೆ.  ವಿಧವೆಯ ಮೇಲೆ  ಕಿರಾತಕರು ಕ್ರೌರ್ಯ ಮೆರೆದಿದ್ದು ಮಾನವ ಕುಲವೇ ತಲೆತಗ್ಗಿಸಬೇಕಾಗಿದೆ.

ವಿಧವೆ ಮೇಲೆ ಕ್ರೌರ್ಯ ಮೆರೆದ ಕಿರಾತಕರು ಆಕೆಯ ಗುಪ್ತಾಂಗದೊಳಕ್ಕೆ ಕಬ್ಬಿಣದ ರಾಡ್ ನುಗ್ಗಿಸಿದ್ದಾರೆ. ಪೊಲೀಸರು ಘಟನೆಯ ಮಾಹಿತಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. 

Tap to resize

Latest Videos

ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ವಿಧವೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದಳು.  ಅಮಾಲಿಯಾ ಪ್ರದೇಶದಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದಳು. ಕಿರಾತರು ಶನಿವಾರ ರಾತ್ರಿ ಅವಳ ಗುಡಿಸಲ ಬಳಿ ಹೋಗಿ ನೀರು ಕೇಳಿದ್ದಾರೆ.  ಅವಳು  ನೀರು ಕೊಡಲು ನಿರಾಕರಿಸಿದಾಗ ದೌರ್ಜನ್ಯ ಮೆರೆದಿದ್ದಾರೆ.#

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರು ಅಪಘಾತ... ಕೇಂದ್ರ ಸಚಿವರ ಪತ್ನಿ ಸಾವು

ರೇವಾ ಜಿಲ್ಲೆಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮಹಿಳೆಯನ್ನು ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ರಾಡ್ ತೆಗೆದಿದ್ದಾರೆ.

ಮಧ್ಯಪ್ರದೇಶದಲ್ಲಿ ಇದು ದೊಡ್ಡ  ಸುದ್ದಿಯಾಗಿದ್ದು   ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಕೆ.ಕೆ.ಮಿಶ್ರಾ  ಮಾತನಾಡಿ.  ಶಿವರಾಜ್ ಸಿಂಗ್ ಅವರೆ  , ಹತ್ರಾಸ್ ಮತ್ತು ಬಾದ್ವಾನ್ ಲಕಿರಾತಕರು ನಮ್ಮ ರಾಜ್ಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಎಲ್ಲ ರಾಷ್ಟ್ರೀಯವಾದಿಗಳು ಬಾಯಿಗೆ ಯಾವ ಕಾರಣಕ್ಕೆ ಬೀಗ ಹಾಕಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

 

click me!