
ತುಮಕೂರು (ಫೆ.2): ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿ ಪೊಲೀಸ್ ಠಾಣೆಯಿಂದ ಗ್ರೇಟ್ ಎಸ್ಕೇಪ್ ಆದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸೈಯದ್ ಆಲಿ ಬಾಬಾ ಸಾಹೇಬ್ ನದಾಫ್ ಅಲಿಯಾಸ್ ಹರ್ಷವರ್ಧನ್ ಠಾಣೆಯಿಂದ ತಪ್ಪಿಸಿಕೊಂಡಿರೋ ಕಳ್ಳ. ಸಿಆರ್ ನಂ. 13/2024 ರ ಪ್ರಕರಣದಲ್ಲಿ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದ ಪೊಲೀಸರು ಗುಬ್ಬಿ ಠಾಣೆಗೆ ಕರೆತಂದಿದ್ದರು ಎಂಬ ಮಾಹಿತಿ. ಆದರೆ ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಠಾಣೆಯಿಂದ ಪರಾರಿಯಾಗಿರೋ ಆರೋಪಿ.
ಬೆಂಗಳೂರು: ಬೈದಳೆಂದು ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ!
ಆರೋಪಿಯ ಎಡಗೈ ಮೇಲೆ ಸಿರಿಗನ್ನಡಂ, ಬಲಗೈಗೆ ಎಲ್ಲ ಧರ್ಮದ ಅಚ್ಚೆ ಇರೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ಸೈಯದ್, ಡ್ಯಾನ್ಸ್ ಕೋರಿಯಾಗ್ರಾಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ.
ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!
ಕಳ್ಳ ಪರಾರಿಯಾಗುತ್ತಿದ್ದಂತೆ ವೈರ್‌ಲೆಸ್ ಮಾಹಿತಿ:
ಇಂದು ಬೆಳಗಿನ ಜಾವ ಕಳ್ಳ ಪರಾರಿಯಾಗ್ತಿದ್ದಂತೆ ವೈರ್‌ಲೆಸ್ ಮೂಲಕ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿರುವ ಪೊಲೀಸರು. ವೈರ್ ಲೆಸ್ ನಲ್ಲಿ ಮಾಹಿತಿ ರವಾನೆ ಆಡಿಯೋ ಏಷ್ಯನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಕಳ್ಳನ ಬಲೆಗೆ ಗುಬ್ಬಿ ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಎಲ್ಲೆಡೆ ಮಾಹಿತಿ ರವಾನಿಸಿದ್ದು, ಕಳ್ಳನ ಗುರುತು ಸಿಕ್ಕಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ