ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ, ಬೆಲೆಬಾಳುವ ವಸ್ತುಗಳನ್ನ ಸುಲಿಗೆ ಮಾಡಿದ ಖದೀಮರು

By Girish GoudarFirst Published Jun 25, 2022, 11:58 AM IST
Highlights

*  ಬಿಸಿನೆಸ್‌ ಟ್ರಿಪ್‌ಗೆ ಬಂದಿದ್ದ ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ 
*  ಎರಡು ಪ್ರತಿಷ್ಠಿತ ಕಂಪನಿಗಳ ಸಿಇಓ ಆಗಿರುವ ಹಂಝೋಹಿ
*  ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲು 

ಬೆಂಗಳೂರು(ಜೂ.25):  ಬಿಸಿನೆಸ್‌ ಟ್ರಿಪ್‌ಗೆ ಬಂದಿದ್ದ ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ ಘಟನೆ ಕೆ.ಜಿ.ಹಳ್ಳಿಯಲ್ಲಿ ನಡೆದಿದೆ. 

ಆಸ್ಟೇಲಿಯಾದ ಎರಡು ಪ್ರತಿಷ್ಠಿತ ಕಂಪನಿಗಳ ಸಿಇಓ ಆಗಿರುವ ಹಂಝೋಹಿ ಅವರು ವಾರಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಇರುವ ಫಾರ್ಚೂಲ್ ಇನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಎರಡು ವಾರಗಳ ಹಿಂದೆ ಹೋಟೆಲ್ ಬುಕ್ ಮಾಡಿದ್ದ ಆಸ್ಟ್ರೇಲಿಯಾ ಪ್ರಜೆ ಹಂಝೋಹಿ ವೆಬ್‌ಸೈಟ್ ಮೂಲಕ ಪೇಮೆಂಟ್ ಮಾಡಿದ್ದರು. ಆದ್ರೆ ಬಿಲ್ ಪಾವತಿ ಆಗಿಲ್ಲ ಎಂದು ಜೂನ್ 23 ರ ಬೆಳಗಿನ ಜಾವ ಆಸ್ಟ್ರೇಲಿಯಾ ಪ್ರಜೆ ಜೊತೆ ಹೋಟೆಲ್ ಸಿಬ್ಬಂದಿ ಜಗಳ ಮಾಡಿದ್ದಾರೆ. ಅದೇ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಮೂವರು ಈ ಜಗಳವನ್ನೇ ಬಂಡವಾಳ ಮಾಡಿಕೊಂಡ‌ ಖದೀಮರ ಗ್ಯಾಂಗ್ ವಿದೇಶಿ ಪ್ರಜೆಯಿಂದ ಸುಲಿಗೆ ಮಾಡಲು ಪ್ಲಾನ್ ಮಾಡಿದ್ದಾರೆ. 

ತುಮಕೂರು: ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆಗೆ ಯತ್ನ

ಹೋಟೆಲ್ ಸಿಬ್ಬಂದಿ ವಿರುದ್ಧ ದೂರು ನೀಡಲು ಮುಂದಾಗಿದ್ದ ಆಸ್ಟ್ರೇಲಿಯಾ ಪ್ರಜೆಗೆ ಪುಸಲಾಯಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ತಿಳಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಸುಲಿಗೆಕೋರರ ಗುಂಪು ಹಂಝೋಹಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. 

ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಆಸ್ಟ್ರೇಲಿಯಾ ಪ್ರಜೆಯಿಂದ ಆ್ಯಪಲ್ ಮೊಬೈಲ್, ಓಪೋ ಮೊಬೈಲ್ ಫೋನ್, ಪರ್ಸ್, ಎರಡು ಕ್ರೆಡಿಟ್ ಕಾರ್ಡ್, ಮೂರು ಬ್ಯಾಗ್ ಹಾಗೂ 4 ಸಾವಿರ ನಗದು ರಾಬರಿ ಮಾಡಿದ್ದಾಗಿ ಕೇಸ್ ದಾಖಲಾಗಿದೆ. 

ಆರೋಪಿಗಳ ವಿರುದ್ಧ ಗೋವಿಂದ ಪುರ ಠಾಣೆಯಲ್ಲಿ ಸೆ.397 ಅಡಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸೈಯ್ಯದ್ ಇಮ್ರಾನ್ ಎಂಬಾತನ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಗೋವಿಂದಪುರ ಪೊಲೀಸರಿಂದ‌ ಹುಡುಕಾಟ ನಡೆಸಿದ್ದಾರೆ. 
 

click me!