ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷದ ವೃದ್ಧೆಯನ್ನ ಆಕೆ ಮಕ್ಕಳೇ ರಾತ್ರೋ ರಾತ್ರಿ ಕಳ್ಳರಂತೆ ಕಾರಿನಲ್ಲಿ ಬಂದು ನಡುರಸ್ತೆಯಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ವಿ ಕಲ್ಲಹಳ್ಳಿಯಲ್ಲಿ ನಡೆದಿದೆ.
ಆನೇಕಲ್ (ಜ.6): ರಾತ್ರಿ ವೇಳೆ ಕಳ್ಳರಂತೆ ಕಾರಿನಲ್ಲಿ ಬಂದು ವಯಸ್ಸಾದ ವೃದ್ಧೆಯನ್ನ ನಡುರಸ್ತೆಯಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ವಿ ಕಲ್ಲಹಳ್ಳಿಯಲ್ಲಿ ನಡೆದಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷದ ವೃದ್ದೆ. ವೃದ್ಧೆಯನ್ನು ಆರೈಕೆ ಮಾಡಲಾಗದೆ ರಸ್ತೆಯ ಬದಿ ಇರುವ ದೇವಾಸ್ಥಾನದ ಬಳಿ ಬಿಟ್ಟು ಕಳ್ಳರಂತೆ ಪರಾರಿಯಾಗಿರುವ ಮಕ್ಕಳು. ಘಟನೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೃದ್ಧೆಯ ಪಾಡು ಮನಕಲಕುವಂತಿದೆ ಇತ್ತ ಮಕ್ಕಳ ದುಷ್ಕೃತ್ಯ ಕಂಡು ಜನರು ಹಿಡಿಶಾಪ್ ಹಾಕಿದ್ದಾರೆ.
ಸಂಸ್ಕಾರ ಇಲ್ಲದ ಮಕ್ಕಳಿಂದಾಗಿ ವೃದ್ಧಾಶ್ರಮ ಹೆಚ್ಚಳ : ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ
ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸೋ ಮಕ್ಕಳನ್ನು ನೋಡಿದ್ದೇವೆ. ಆದರೆ ಈ ಪಾಪಿ ಇಂಥ ಚಳಿಯಲ್ಲೂ ನಡುರಸ್ತೆಗೆ ಬಿಟ್ಟುಹೋಗಿದ್ದಾರೆಂದರೆ ಮನುಕುಲಕ್ಕೆ ಕಳಂಕ. ಹೆತ್ತ ತಾಯಿಯ ಮೇಲೆ ಕರುಣೆ ಇಲ್ಲದೆ ಬೀಸಾಡಿಹೋಗಿರುವ ಮಕ್ಕಳು ರಾತ್ರಿ ಹೊತ್ತಲ್ಲಿ ಕಾಡುಪ್ರಾಣಿ, ಬೀದಿನಾಯಿಗಳ ದಾಳಿ ಮಾಡಿದ್ದಾರೆ ಏನು ಗತಿ? ವೃದ್ಧೆಯನ್ನು ಕಂಡು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BIG 3 ; ಅನಾಥ ವೃದ್ಧರ ಪಾಲಿಗೆ ಮಗನಾದ ರತೀಶ್ ರಲದೇವ್: ಆಧುನಿಕ ಶ್ರವಣ ಕುಮಾರಗೆ ಸಲಾಂ