ಇಂದು ಬೆಳ್ಳಂಬೆಳಗ್ಗೆ ಟ್ರಕ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒರ್ವ ಬಾಲಕ, ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ನಡೆದಿದೆ.
ವಿಜಯಪುರ (ಏ.13): ಇಂದು ಬೆಳ್ಳಂಬೆಳಗ್ಗೆ ಟ್ರಕ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒರ್ವ ಬಾಲಕ, ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ನಡೆದಿದೆ.
ವಿಜಯಪುರ ಮೂಲದ ಅರ್ಜುನ ಕುಶಾಲಸಿಂಗ್ ರಜಪೂತ(32), ರವಿನಾಥ ಸುನಿಲಾಲ್ ಪತ್ತಾರ (52), ಪುಷ್ಟಾ ರವಿನಾಥ ಪತ್ತಾರ ( 40), ಮೇಘರಾಜ ಅರ್ಜುನಸಿಂಗ್ ರಜಪೂತ (12) ಮೃತರು. ಜಯಶ್ರೀ ಅರ್ಜುನ ರಜಪೂತ (28), ನಯಾರಾ ಅರ್ಜುನ ರಜಪೂತ (6), ಪ್ರೇಮಸಿಂಗ್ ಅರ್ಜುನ ರಜಪೂತ (12) ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಬರಟಗಿ ತಾಂಡಾದ ನಿವಾಸಿಗಳಾಗಿದ್ದಾರೆ.
20 ದಿನಗಳ ನಂತರ ಈ ರಾಶಿ ಭವಿಷ್ಯ ಬದಲಾಗುತ್ತೆ, ಕಂಕಣ ಭಾಗ್ಯ ಲಕ್ಷಾಧಿಪತಿ ಯೋಗ
ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA28 D 1021 ನಂಬರಿನ ಕಾರಿನಲ್ಲಿ ಒಟ್ಟು ಏಳು ಜನರು ತೆರಳುತ್ತಿದ್ದರು. ಈ ಪೈಕಿ ನಾಲ್ವರು ಸ್ಥಳದಲ್ಲೇ ಮೃಪಟ್ಟಿದ್ದಾರೆ. ಇನ್ನುಳಿದ ಮೂವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಅರ್ಜುನ್ ಮಹಾಲಿಂಗಾಪುರದ ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಆದರೆ ಮಹಾಲಿಂಗಾಪುರದಿಂದ ವಿಜಯಪುರಕ್ಕೆ ವರ್ಗಾವಣೆಗೊಂಡಿದ್ದರು. ವರ್ಗಾವಣೆಗೊಂಡ ಹಿನ್ನೆಲೆ ಮಹಾಲಿಂಗಾಪುರದಲ್ಲಿರುವ ಮನೆಯಿಂದ ವಿಜಯಪುರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ದೇವರ ದರ್ಶನದ ನಂತರ ಮನೆ ಬದಲಾವಣೆ ಮಾಡಲು ಪ್ಲಾನ್ ಮಾಡಿದ್ದ ಕುಟುಂಬಸ್ಥರು. ಹೀಗಾಗಿ ಬೆಳಗಿನ ಜಾವ ವಿಜಯಪುರದಿಂದ ಮುಧೋಳಕ್ಕೆ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಯಮಸ್ವರೂಪಿಯಾಗಿ ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬಂದು ಕಾರಿಗೆ ಡಿಕ್ಕಿಯಾಗಿದೆ.
ಭೀಕರ ರಸ್ತೆ ಅಪಘಾತದ ಬಳಿಕ ಸ್ಥಳಕ್ಕೆ ತೆರಳಿದ ಬಬಲೇಶ್ವರ ಪೊಲೀಸರು ಕಾರಿನಿಂದ ಶವಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಎಸ್‌ಪಿ ಋಷಿಕೇಶ್ ಸೋನೆವಣೆ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಶವಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ