3.70 ಲಕ್ಷ ಮೌಲ್ಯದ ವಿಗ್ರಹ ಸೇರಿ ಸಾಮಗ್ರಿಗಳ ಕಳವು| ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮುಂಡರಗಿ ಶಿವರಾಯ ದೇವಸ್ಥಾನದಲ್ಲಿ ನಡೆದ ಕಳ್ಳತನ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| ಪ್ರಕರಣ ದಾಖಲಿಸಿಕೊಂಡಿರುವ ಕಳ್ಳರ ಪತ್ತೆಗೆ ಬಲೆಬೀಸಿದ ಪೊಲೀಸರು|
ದೇವದುರ್ಗ(ಸೆ.28): ತಾಲೂಕಿನ ಮುಂಡರಗಿ ಶಿವರಾಯ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು 3.70 ಲಕ್ಷ ಮೌಲ್ಯದ ದೇವರ ವಿಗ್ರಹ ಸೇರಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.
ಶನಿವಾರ ರಾತ್ರಿ ದೇವಸ್ಥಾನಕ್ಕೆ ಪ್ರವೇಶಿಸಿದ ಕಳ್ಳರು ಗುಡಿಯಲ್ಲಿದ್ದ 6 ಸಾವಿರ ಬೆಳೆಬಾಳುವ 12 ತೊಲೆ ಬೆಳ್ಳಿಯ ಶಿವರಾಯ ತಾತನ ಮೂರ್ತಿ, 3.5000 ಮೌಲ್ಯದ 9 ಕೆಜಿ ಬೆಳ್ಳಿಯ ಗೋಪುರ ಆಕಾರದ ಚಟ್ಟ, ಏಳು ಸಾವಿರ ಬೆಲೆಯ 12 ತೊಲೆಯ ಚಪ್ಪಲಿ ಕೊಡಲಿ, 5 ಸಾವಿರ ಮೌಲ್ಯದ 10 ತೊಲೆ ಬೆಳ್ಳಿಯ ಎರಡು ಲಿಂಗದ ಕಾಯಿ, 2500 ಬೆಲೆಯ ಐದು ತೊಲೆಯ ಶಿವನ ಬೆಳ್ಳಿ ಮೂರ್ತಿ ಸೇರಿ ಒಟ್ಟು 3.70 ಲಕ್ಷ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಮಂಡ್ಯ : 9 ತಿಂಗಳಲ್ಲಿ 23 ದೇಗುಲದಲ್ಲಿ ಕಳ್ಳತನ
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆಬೀಸಿದ್ದಾರೆ.