ವಿದ್ಯಾರ್ಥಿವೇತನ ವಿಳಂಬ/ ನೊಂದ ಪ್ರತಿಭಾವಂತ ವಿದ್ಯಾರ್ಥಿನಿ ಸುಸೈಡ್/ ಡೇಟಾ ಪ್ಯಾಕ್ ಹಾಕಿಸಿಕೊಳ್ಳಲು ಹಣ ಇಲ್ಲ/ ಮನೆಯವರಿಗೆ ಹೊರೆಯಾಗಿ ಬದುಕಲಾರೆ
ನವದೆಹಲಿ(ನ. 09) ವಿದ್ಯಾರ್ಥಿ ವೇತನ ಸರಿಯಾದ ಸಮಯಕ್ಕೆ ಕೈಸೇರದ ಕಾರಣ ದೆಹಲಿಯ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ ನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನ ಹಾಸ್ಟೇಲ್ ನಿಂದ ನೋಟಿಸ್ ಬಂದ ಕಾರಣ ಸುಸೈಡ್ ಮಾಡಿಕೊಂಡಿದ್ದಾರೆ
ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ವಿದ್ಯಾರ್ಥಿನಿ 12 ನೇ ತರಗತಿಯ ಪರೀಕ್ಷೆಯ ಟಾಪರ್ ಆಗಿದ್ದರು. ಉನ್ನತ ಶಿಕ್ಷಣ ಪಡೆಯಲು ಮನೆ ಅಡವಿಟ್ಟು ಸಾಲ ಪಡೆದುಕೊಂಡಿದ್ದರು.
undefined
ನನಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ, ಮನೆಯವರಿಗೆ ಹೊರೆಯಾಗಿ ನಾನು ಬದುಕಲಾರೆ ಎಂದು ಸುಸೈಡ್ ನೋಟ್ ನಲ್ಲಿ ವಿದ್ಯಾರ್ಥಿನಿ ಐಶ್ವರ್ಯಾ ಬರೆದಿದ್ದಾರೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಸ್ಟುಡೆಂಟ್ಸ್ ಪ್ರತಿಭಟನೆ ಆರಂಭಿಸಿದ್ದು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಐಶ್ವರ್ಯ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ INSPIRE ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರು. ವಿದ್ಯಾರ್ಥಿವೇತನವನ್ನು ಕಳೆದ ಮಾರ್ಚ್‌ನಿಂದ ವಿಳಂಬವಾಗಿತ್ತು. ಇದು ಐಶ್ವರ್ಯಾ ಕುಟುಂಬವನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಿತ್ತು ಎಂದು ಎಂದು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.
ಆನ್ ಲೈನ್ ಕ್ರೆಡಿಟ್ ಆಪ್ ಸಾಲ ತೀರಿಸಲಾಗದೆ ಪ್ರಾಣ ಕಳೆದುಕೊಂಡ ಯುವತಿ
ಕೊರೋನಾ ಕಾರಣ ಆನ್ ಲೈನ್ ಶಿಕ್ಷಣ ಪದ್ಧತಿ ಜಾರಿ ಮಾಡಲಾಗಿದೆ. ಆದರೆ ತನ್ನ ಬಳಿ ಇಂಟರ್ ನೆಟ್ ಸಂಪರ್ಕ ಸರಿಯಾಗಿ ಇಲ್ಲ ಎಂದು ಐಶ್ವರ್ಯಾ ಹಿಂದೆಯೇ ಕಾಲೇಜಿಗೆ ತಿಳಿಸಿದ್ದರು. ಆಕೆ ಬಳಿ ಲ್ಯಾಪ್ ಟಾಪ್ ಸಹ ಇರಲಿಲ್ಲ. ಡೇಟಾ ಪ್ಯಾಕ್ ಹಾಕಿಸಿಕೊಳ್ಳುವ ಶಕ್ತಿಯೂ ಇರಲಿಲ್ಲ. ಇದೆಲ್ಲವೂ ಆಕೆಯ ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು.
ಅನೇಕ ವಿದ್ಯಾರ್ಥಿ ಸಂಘಟನೆಗಳು ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಯುಜಿಸಿ ಈ ಕೂಡಲೇ ಬಾಕಿ ಉಳಿದುಕೊಂಡಿರುವ ಸ್ಕಾಲರ್ ಶಿಪ್ ಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿವೆ.
ಇನ್ನೊಂದು ಕಡೆ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿ ತನಗಾಗುತ್ತಿದ್ದ ಸಮಸ್ಯೆಯನ್ನು ಗಮನಕ್ಕೆ ತಂದಿಲ್ಲ ಎಂದು ಹೇಳಿದೆ. ಒಟ್ಟಿನಲ್ಲಿ ಆನ್ ಲೈನ್ ಶಿಕ್ಷಣ, ಆರ್ಥಿಕ ಮುಗ್ಗಟ್ಟು, ವಿದ್ಯಾರ್ಥಿ ವೇತನ ವಿಳಂಬ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಪ್ರಾಣ ಬಲಿಪಡೆದಿದೆ.