ಮದುವೆಯಾಗಲು ರೆಡಿ ಇರುವ ಹುಡುಗರೇ ಹುಷಾರ್​..! ಅವಳು ಬರ್ತಾಳೆ, ಮದುವೆಯಾಗ್ತಾಳೆ, ಆಮೇಲೆ..?

By Suvarna News  |  First Published Aug 14, 2024, 7:16 PM IST

ಮದುವೆ ಎನ್ನುವುದು ಪ್ರತಿಯೊಬ್ಬರ ಬದುಕಿನ ಕನಸು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಮದುವೆಯಾಗಲು ರೆಡಿಯಿರುವ ಹುಡುಗರನ್ನು ಹೇಗೆಲ್ಲಾ ವಂಚಿಸಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ


ಅದೊಂದು ಖತರ್ನಾಕ್​ ಗ್ಯಾಂಗ್​​​. ಮದುವೆಯೇ ಅವರ ಬ್ಯುಸಿನೆಸ್​​​.. ರಾತ್ರೋ ರಾತ್ರಿ ಬರ್ತಾರೆ. ಒಂದೇ ದಿನದಲ್ಲಿ ಮದುವೆ ಮುಗಿಸುತ್ತಾರೆ. ಮರುದಿನವೇ ಶಾಸ್ತ್ರ ಅಂತ ಆಭರಣಗಳನ್ನ ಹಾಕೊಂಡೇ ಎಸ್ಕೇಪ್​​ ಆಗ್ತಾರೆ.

ಯಸ್​​. ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಲ್ಲೂ ಒಂದು ಮಹತ್ವದ ಘಟ್ಟ. ಆದ್ರೆ ಇದೇ ಮದುವೆಯನ್ನ ಬ್ಯುಸಿನೆಸ್​ ಮಾಡಿಕೊಂಡ ಅದೊಂದು ಗ್ಯಾಂಗ್​​ ಬರೊಬ್ಬರಿ 5 ವರರಿಗೆ ಮಕ್ಮಲ್​ ಟೋಪಿ ಹಾಕಿದೆ.. ಅಷ್ಟಕ್ಕೂ ಯಾವುದು ಆ ಗ್ಯಾಂಗ್​​..? ಅವರ ವರ್ಕಿಂಗ್​​ ಸ್ಟೈಲ್​​ ಹೇಗೆ..? ವರ್ಷಕ್ಕೆ ಮೂರು ನಾಲ್ಕು ಮದುವೆಯಾಗಿ ಮದುವೆಯಾಗದ ಹುಡುಗರನ್ನ ವಂಚಿಸುತ್ತಿದ್ದ ಒಂದು ಖತರ್ನಾಕ್​​​​ ಗ್ಯಾಂಗ್​​ನ ಅಸಲಿ ಕಥೆ ನಾವಿಂದು ಎಳೆಎಳೆಯಾಗಿ ಬಿಚ್ಚಿಡ್ತೀವಿ ಕೇಳಿ.

Tap to resize

Latest Videos

undefined

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ನಿವಾಸಿ ಪಾಲಾಕ್ಷಯ್ಯ. ವಯಸ್ಸು 55 ವರ್ಷ, ಗ್ರಾಮದಲ್ಲಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸುಖಿ ಕುಟುಂಬ ಇವರದ್ದು. ಇನ್ನೂ ಈ ಪಾಲಾಕ್ಷಯ್ಯಗೆ ದಯಾನಂದ್‌ ಮೂರ್ತಿ ಎಂಬ ಒಬ್ಬ ಗಂಡು ಮಗ, ತನುಜಾ ಎಂಬ ಹಿರಿಯ ಮಗಳಿದ್ದು, ಪಾಲಾಕ್ಷ್ಯನದ್ದು ಚಿಕ್ಕದಾದ ಒಂದು ಸುಂದರ ಕುಟುಂಬ. ಮಗಳು ತನುಜಾಳನ್ನ ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಗ್ರಾಮದ ನಿವಾಸಿ ಕುಮಾರ್‌ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಯ್ತು. ಇತ್ತ ಮಗಳ ಮದುವೆ ಮುಗಿಸಿದ ಪಾಲಾಕ್ಷಯ್ಯ ನೆಮ್ಮದಿಯ ನಿಟ್ಟೂಸಿರು ಬಿಟ್ಟು, ಮಗನಿಗೆ ಮದುವೆ ಮಾಡಲು ಮುಂದಾದ್ರೂ. ಅಲ್ಲಿಂದಲೇ ನೋಡಿ ಶುರುವಾಗಿದ್ದು ಪಾಲಾಕ್ಷಯ್ಯ ಕುಟುಂಬದ ನೋವಿನ ದಿನಗಳು.

ಮಗನಿಗೆ ಹೆಣ್ಣು ಹುಡುಕಿ ಹುಡುಕಿ  ನೊಂದು ಬೆಂದು ಹೋಗಿದ್ದ ಪಾಲಾಕ್ಷಯ್ಯ ಕುಟುಂಬಕ್ಕೆ ಯಾವುದಾದ್ರೂ ಒಂದು ಹೆಣ್ಣು ಮಗಳು ಸಿಕ್ಕರೇ ಸಾಕು, ಎಷ್ಟು ವರ್ಷ ವಯಸ್ಸಾದ್ರೂ ಪರವಾಗಿಲ್ಲ, ಮಗನ ಮದುವೆಯಾದ್ರೆ ಸಾಕು ಅನ್ನುವಂತಾಗಿತ್ತು. ಪರಿಸ್ಥಿತಿ ಹೀಗಿರುವಾಗಲೇ. ಕುಷ್ಟಗಿ ಮೂಲದ ಬಸವರಾಜು ಮೂಲಕ  ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದಲ್ಲಿ ವಾಸವಿದ್ದ ಮದುವೆ ಬ್ರೋಕರ್‌ ಲಕ್ಷ್ಮೀಯ ಕಾಂಟ್ಯಾಕ್ಟ್​​​ ಸಿಗುತ್ತೆ..

ಕನ್ನಡ ಬಿಗ್ ಬಾಸ್‌ ಸ್ಟಾರ್, ಇಂಟರ್‌ನ್ಯಾಷನಲ್ ಕ್ರಿಕೆಟ್ ತಂಡದ ಕೋಚ್..!

ಮದುವೆ ಬ್ರೋಕರ್‌ ಲಕ್ಷ್ಮೀಯನ್ನ ನಂಬಿದ ಪಾಲಾಕ್ಷಯ್ಯ, ಮಗ ದಯಾನಂದ್‌ ಮೂರ್ತಿಗೆ ಮದುವೆ ಮಾಡಲು ಬಿದ್ದ ಪರಿಪಾಟಲು ಎಲ್ಲಾವನ್ನು ಲಕ್ಷ್ಮಿ ಜೊತೆಗೆ ಹೇಳಿಕೊಂಡಿದ್ದಾರೆ.  ಮಗನಿಗೆ ಒಂದು  ಹೆಣ್ಣು ಸಿಕ್ಕರೆ ಸಾಕು.., ನಾವೇ ಮದುವೆ ಮಾಡಿಕೊಳ್ಳುತ್ತೇವೆ.., ಹೆಣ್ಣು ಹೇಗಿದ್ದರು ಪರವಾಗಿಲ್ಲ, ಅಂತ ಹೇಳಿದ್ದಾರೆ. ಜೊತೆಗೆ ಲಕ್ಷ್ಮಿ ವಾಟ್ಸ್‌ ಅಪ್‌ ಗೆ ದಯಾನಂದಮೂರ್ತಿಯ ಪೋಟೋ, ಬಯೋಡೇಟವನ್ನು ಕಳುಹಿಸಿದ್ದಾರೆ. 

ಮನೆ ನೋಡುವ ಸಂದರ್ಭದಲ್ಲಿ ಪಾಲಾಕ್ಷಯ್ಯನ ಕುಟುಂಬದೊಂದಿಗೆ ಸಭ್ಯ ಹಾಗೂ ಸೌಮ್ಯವಾಗಿ ವರ್ತಿಸಿದ್ದಾರೆ.  ಹೆಣ್ಣಿನ ಮನೆ ನೋಡುವ ಶಾಸ್ತ್ರ ಅಂತ ಪದೇ ಪದೇ ಹುಬ್ಬಳ್ಳಿಗೆ ನೀವು ಬರೋದು ಬೇಡ, ಸುಮ್ಮನೆ ಹಣ ಯಾಕೆ ಖರ್ಚು ಮಾಡಿಕೊಳ್ತಿರಾ ನಾಳೆಯೇ ಮದುವೆ ಮಾಡಿ ಮುಗಿಸೋಣ ಅಂತ ಬ್ರೋಕರ್‌ ಲಕ್ಷ್ಮಿ ಹೇಳ್ತಾಳೆ. ಪಾಲಾಕ್ಷಯ್ಯ ಕುಟುಂಬ ಕೂಡ ಆಕೆಯ ಮಾತಿಗೆ ಓಕೆ ಅಂದು ಮದುವೆ ತಯಾರಿ ಆರಂಭಿಸಿಯೇ ಬಿಡ್ತಾರೆ.. 

ಭಾರತೀಯ ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನ ಮಹಿಳೆಯ ಮದುವೆಯಾದ ವ್ಯಕ್ತಿಯ ಬಂಧನ

ಮಾತುಕತೆಯಂತೆ ಮರುದಿನ ಅಂದ್ರೆ ನವೆಂಬರ್​​ 20 ರಂದೇ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮುಂಜಾನೇಯ ಮದುವೆ ಕಾರ್ಯ ನಡೆಯುತ್ತೆ.  ಹೆಣ್ಣಿಗೆ ಚಿನ್ನದ ತಾಳಿ, ಓಲೆ, ಸೇರಿದ್ದಂತೆ 15 ಗ್ರಾಂ ಚಿನ್ನಾಭರಣವನ್ನು ಪಾಲಾಕ್ಷಯ್ಯ ಕುಟುಂಬ ನೀಡುತ್ತೆ. ಜೊತೆಗೆ ಊರಿನ ಗ್ರಾಮದ ಜನರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ. ಮದುವೆ 200ಕ್ಕೂ ಹೆಚ್ಚು ಜನರು ಸೇರಿದ್ದಾರೆ. ಕೊನೆಗೂ ದಯಾನಂದ ಮೂರ್ತಿಗೆ ಮದುವೆ ಆಯ್ತು ಅಂತ ಎಲ್ಲಾರು ಸಂತಸ ಪಡ್ತಾರೆ..

ರಾತ್ರಿ ಮಾತುಕತೆ ಬೆಳಗ್ಗೆ ಮದುವೆ..ಕೊನೆಗೂ ದಯಾನಂದn ಮದುವೆ ಮುಗೀತು.. ಎಲ್ಲರೂ ಮನೆ ಮಗನಿಗೆ ಮದುವೆ ಆಯ್ತು ಅಂತ ಫುಲ್​ ಖುಷಿಯಾಗಿರ್ತಾರೆ.. ಆದರೆ ಆ ಖುಷಿ ಹೆಚ್ಚು ದಿನ ಇರೋದಿಲ್ಲ.. ಕಾರಣ ಆ ಬ್ರೋಕರ್​​ ಲಕ್ಷ್ಮೀಯ ಅಸಲಿಯಾಟ ಶುರುವಾಗೋದೇ ಮದುವೆ ನಂತರ

ಅಂದುಕೊಂಡಂತೆ ಪಾಲಾಕ್ಷಯ ಮಗನ ಮದುವೆ ಮಾಡಿ ಮುಗಿಸಿದ್ರು.. ಮದುವೆ ಖರ್ಚು ಎಲ್ಲಾ ಗಂಡಿನ ಕಡೆಯವರದ್ದೇ ಆದ್ರೂ ಶಾಸ್ತ್ರವೆಲ್ಲಾ ಬ್ರೋಕರ್​ ಲಕ್ಷ್ಮೀ ಹೇಳಿದಂತೆಯೇ ನಡೆಯುತ್ತಿತ್ತು.. ಮದುವೆಯಾದ ಮೇಲೂ ಫಸ್ಟ್​​ ನೈಟ್​​ ಶಾಸ್ತ್ರಕ್ಕೂ ಮುನ್ನ ಒಂದು ಶಾಸ್ತ್ರವಿದೆ ಅಂತ ಹೇಳಿ ವಧುವನ್ನು ಕರೆದುಕೊಂಡು ಊರಿಗೆ ಹೋಗಿ ಬರ್ತೀವಿ ಅಂತ ಹೋದ್ರು. ಅಷ್ಟೇ.. ಮತ್ತೆ ಬ್ರೋಕರ್​​ ಲಕ್ಷ್ಮಿಯದ್ದಾಗಲಿ, ವಧು ಕುಟುಂಬದ ಸುಳಿವು ಸಿಗೋದೆ ಇಲ್ಲ. ಎಲ್ಲಿ ಹುಡುಕಾಡಿದ್ರೂ ಅವರ ಸುಳಿವು ಸಿಗೋದೇ ಇಲ್ಲ. ಮದುವೆಗೆ ಹಾಕಿದ್ದ ಒಡವೆಗಳನ್ನ ಹಾಕೊಂಡು ಅವರು ಎಸ್ಕೇಪ್​ ಆಗಿದ್ರು. ಇನ್ನೂ ಬೇರೆ ದಾರಿ ಕಾಣದೆ ಪೊಲೀಸ್​​ ಕಂಪ್ಲೆಂಟ್​​ ಕೊಡ್ತಾರೆ.. ಆಗಲೇ ನೋಡಿ ಈ ಗ್ಯಾಂಗ್​ ಮದುವೆಯನ್ನೇ ಬ್ಯುಸಿನೆಸ್​​ ಮಾಡಿಕೊಂಡಿತ್ತು ಅಂತ

ಇನ್ನೂ ಕೇಸ್​​​ ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಗುಬ್ಬಿ ಪೊಲೀಸರಿಗೆ ಮೊದಲು ಯಾವುದೇ ಸುಳಿವು ಸಿಗೋದಿಲ್ಲ, ಆರೋಪಿಗಳ ಮೊಬೈಲ್‌ ನಂಬರ್‌ ಎಲ್ಲಾವೂ ಸ್ವಿಚ್ಡ್‌ ಆಫ್‌ ಆಗಿರುತ್ತೆ, ಆರೇಳು ತಿಂಗಳು ಕಾದರು ಪಾಲಾಕ್ಷಯ್ಯ ನೀಡಿದ್ದ ಯಾವ ನಂಬರ್‌ ಗಳು ವರ್ಕ್‌ ಆಗದಿದ್ದಾಗ ಪೊಲೀಸರು ಹಳೇ ಸಿಮ್‌ ನಂಬರ್‌ ಆಧಾರದ ಮೇಲೆ ಬ್ರೋಕರ್‌ ಲಕ್ಷ್ಮಿಯ ಮೊಬೈಲ್‌ ಐಎಂಎ ನಂಬರ್‌ ತೆಗೆದುಕೊಂಡು.., ಆ ಐಎಂಎ ನಂಬರ್‌ ಗೆ ಮೂಲಕ ಲಕ್ಷ್ಮೀಯ ಹೊಸ ಸ್ವಿಮ್‌ ನಂಬರ್‌ ಅನ್ನು ಪತ್ತೆ ಹಚ್ಚಿದ್ರು..,

ಬ್ರೋಕರ್‌ ಲಕ್ಷ್ಮೀ ಬಳಸುತ್ತಿದ್ದ ಹೊಸ ನಂಬರ್‌ ಹುಬ್ಬಳ್ಳಿಯ ರೋಣ ಬಳಿ ಲೋಕೇಷನ್‌ ನಲ್ಲಿತ್ತು. ಕೂಡಲೇ ಆಕ್ಟೀವ್‌ ಆದ ಪೊಲೀಸರು ಹುಬ್ಬಳ್ಳಿಯ ರೋಣ ಬಳಿ ತೆರಳಿ ಲಕ್ಷ್ಮೀಯನ್ನ ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗಲೇ ನೋಡಿ ಲಕ್ಷ್ಮೀ ಮದುವೆ ಮಾಡಿ ವಂಚನೆ ಮಾಡುತ್ತಿದ್ದ ದಂಧೆಯನ್ನ ಈಕೆ ಬಾಯಿ ಬಿಡೋದು..

ಯಸ್​​.. ಹೆಣ್ಣು ಸಿಗದೆ ನೊಂದಿರುವ ಕುಟುಂಬಗಳೇ ಈ ಗ್ಯಾಂಗ್​​ನ ಮೇನ್​ ಟಾರ್ಗೆಟ್​​.. ಅಂಥವರನ್ನ ಗುರುತಿಸಿ ಪತ್ತೆ ಹಚ್ಚಿ, ಅವರಿಗೆ ಇದೇ ಕೋಮಲ್​ಳನ್ನ ಮದುವೆ ಹೆಣ್ಣು ಅಂತ ತೋರಿಸಿ ಅದಕ್ಕೆ ಚಿಕ್ಕಮ್ಮ ಚಿಕ್ಕಪ್ಪ ಅನ್ನೋ ಕ್ಯಾರೆಕ್ಟರ್​​​​ ಅನ್ನೇ ಸೃಷ್ಟಿಸಿ ನಂತರ ಗಂಡಿನ ಮನೆಗೇ ಹೋಗಿ ಮದುವೆಯ ನಾಟಕವಾಡಿ ಚಿನ್ನ ಹಾಗೂ ಹಣ ದೋಚುತ್ತಿತ್ತು ಈ ಖತರ್ನಾಕ್​ ಗ್ಯಾಂಗ್​​..

ಇನ್ನೂ ಲಕ್ಷ್ಮೀಯ ಬಳಿ ಎಲ್ಲಾ ಮಾಹಿತಿಗಳನ್ನ ಪಡೆದ ಪೊಲೀಸರು ಬಳಿಕ ಲಕ್ಷ್ಮೀಯ ಮೂಲಕವೇ ಕೋಮಲಾಗೆ ಪೋನ್‌ ಮಾಡಿಸಿದ್ದಾರೆ. ಅಷ್ಟರಲ್ಲೇ ಕೋಮಲ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮತ್ತೊಬ್ಬರನ ಜೊತೆಗೆ ಸಂಸಾರ ನಡೆಸುತ್ತಿರುತ್ತಾಳೆ. ಆಕೆಯನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ.  

35ಕ್ಕೂ ಹೆಚ್ಚು ವಯಸ್ಸಿನ ಕೋಮಲ ಗಂಡನ್ನ ಬಿಟ್ಟಿದ್ದು, ಈಕೆಗೆ 16 ಹಾಗೂ 20 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆದ್ರೂ ಈ ಕೋಮಲ್​ ಲಕ್ಷ್ಮೀ ಅನ್ನೋ ಕಿರಾತಕಿ ಜೊತೆ ಸೇರಿ ಮದುವೆಯಾಗದ ಹುಡುಗರನ್ನ ವಂಚಿಸುತ್ತಾ ಬಂದಿದ್ದಾಳೆ..

ಇನ್ನೊಂಡೆದೆ ಆರೋಪಿಗಳಾದ ಸಿದ್ದಪ್ಪ, ಲಕ್ಷ್ಮೀಮ್ಮ ಹಾಸನದ ಚೆನ್ನರಾಯಪಟಣ್ಣದಲ್ಲಿ ಮತ್ತೊಂದು ಮದುವೆ ಮಾಡಿಸುವ ಪ್ರಯತ್ನದಲ್ಲಿರುತ್ತಾರೆ. ಈ ಇಬ್ಬರು ಸೇರಿ ಒಟ್ಟು ನಾಲ್ವರನ್ನ ಗುಬ್ಬಿ ಪೊಲೀಸರು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.  ಈ ದೋಖಾ ಗ್ಯಾಂಗ್‌ ಕೇವಲ ತುಮಕೂರು ಅಷ್ಟೇ ಅಲ್ಲದೆ ಬಾಲಕೋಟೆ, ಜಮಖಂಡಿ ಸೇರಿದ್ದಂತೆ ನಾಲ್ಕೈದು ಮಂದಿಗೆ ಇದೇ ರೀತಿ ಮೋಸ ಮಾಡಿದ್ದಾರಂತೆ.

click me!