'ದೇವರ ಬಳಿ ಹೋಗ್ತೇನೆ'  2  ವರ್ಷ ನಿರಂತರ ಹುಡುಕಾಟ, ಕೆಲಸ ಸಿಕ್ಕ ಮೇಲೆ ಸುಸೈಡ್!

Published : Nov 01, 2020, 12:32 AM ISTUpdated : Nov 01, 2020, 12:33 AM IST
'ದೇವರ ಬಳಿ ಹೋಗ್ತೇನೆ'  2  ವರ್ಷ ನಿರಂತರ ಹುಡುಕಾಟ, ಕೆಲಸ ಸಿಕ್ಕ ಮೇಲೆ ಸುಸೈಡ್!

ಸಾರಾಂಶ

ನನಗೆ ಕೆಲಸ ನೀಡಿದ ದೇವರ ಬಳಿ ಹೋಗುತ್ತಿದ್ದೇನೆ/ ಕೆಲಸ ಸಿಕ್ಕ ಮೇಲೆ ಆತತ್ಮಹತ್ಯೆ ಮಾಡಿಕೊಂಡ ಯುವಕ/ ಕಿಸೆಯುಲ್ಲಿ ದೇವರ ಬಳಿ ಹೋಗುತ್ತಿದ್ದೇನೆ  ಎಂದು ಬರೆದಿದ್ದ ಚೀಟಿ

ಚೆನ್ನೈ(ಅ. 31)   ಇದೊಂದು ವಿಚಿತ್ರ ಪ್ರಕರಣ. ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಈ ವ್ಯಕ್ತಿ ಕೆಲಸ ಸಿಕ್ಕ ಮೇಲೆ ಸುಸೈಡ್ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಿಂದ ಘಟನೆ ವರದಿಯಾಗಿದೆ.  ಸಿ ನವೀನ್ ಎಂಬುವರು ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಜೇಬಿನಲ್ಲಿ ಸಿಕ್ಕ ಚೀಟಿ ಎಲ್ಲ ವಿವರ ಹೇಳಿದೆ.

ಪೋಷಕರ ಎದುರೆ ನದಿಗೆ ಹಾರಿದ ಯುವತಿ

ನನಗೆ ಕೆಲಸ ನೀಡಿದ ದೇವರ ಬಳಿ ಹೋಗುತ್ತಿದ್ದೇನೆ ಎಂದು ಚೀಟಿಯಲ್ಲಿ ಬರೆದಿದ್ದ. ಇಂಜಿನಿಯರ್ ಆಗಿದ್ದ ನವೀನ್ ಕಳೆದ ಎರಡು ವರ್ಷದಿಂದ ಕೆಲಸದ ಹುಡುಕಾಟದಲ್ಲಿ ಇದ್ದರು. ಕಳೆದ ತಿಂಗಳು ಬ್ಯಾಂಕ್ ಒಂದರಲ್ಲಿ ಅವರನ್ನು ಅಸಿಸ್ಟಂಟ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿತ್ತು.

ಮುಂಬೈನಲ್ಲಿ ಕೆಲಸ ಸಿಕ್ಕಿತ್ತು. ಇಂದು ವಾರ ಕೆಲಸ ಮಾಡಿ ವಿಮಾಣ ಹಿಡಿದು ತವರಿಗೆ ನವೀನ್ ವಾಪಸ್ ಆಗಿದ್ದಾರೆ. ಅಲ್ಲಿಂದ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ರಾಜಕ್ಮಮಂಗಲಂ ಬ್ಲಾಕ್‌ನ ಪುಥೇರಿ ಗ್ರಾಮದಲ್ಲಿ ರೈಲಿಗೆ ತಲೆ ಕೊಟ್ಟಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ