
ಮನೆಗೆಲಸದ ಮಹಿಳೆ ಮೇಲೆ ಅ*ತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಳೆದ ತಿಂಗಳು ಜೀವನಪರ್ಯಂತ ಜೈಲು ಶಿಕ್ಷೆ ಹಾಗೂ 11 ಲಕ್ಷ 60 ಸಾವಿರ ರೂಪಾಯಿ ದಂಡ ವಿಧಿಸಿರುವುದು ಗೊತ್ತೇ ಇದೆ. ಇದರಲ್ಲಿ 11 ಲಕ್ಷ 25 ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಲೈಂ*ಗಿಕ ದೌರ್ಜನ್ಯ ಮತ್ತು ಅ*ತ್ಯಾಚಾರ ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ ಇದೆ. ವಿಚಾರಣೆಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರ ಬಂಧನವಾಗಿರಲಿಲ್ಲ, ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ನೀಡಿದ ಆಗಸ್ಟ್ 2ರಿಂದಲೇ ಈ ಶಿಕ್ಷೆ ಆರಂಭವಾಗಿದ್ದು, ಇದೀಗ ಒಂದು ತಿಂಗಳಿನಿಂದ ಅವರು ಜೈಲಿನಲ್ಲಿ ಇದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಶೋಭಾ ಅವರು ತನಿಖೆಯ ನೇತೃತ್ವ ವಹಿಸಿದ್ದರು ಮತ್ತು 26 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಸುಮಾರು 2 ಸಾವಿರ ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಸಲ್ಲಿಸಿದ್ದರು.
ಸಂಚಲನ ಮೂಡಿಸಿದ್ದ ಪೆನ್ಡ್ರೈವ್
ಈ ಬಗ್ಗೆ ತನಿಖೆ ನಡೆಯುವ ಪೂರ್ವದಲ್ಲಿ ಪೆನ್ಡ್ರೈವ್ ಇಡೀ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದರ ಬಗ್ಗೆ ತನಿಖೆಗೆ ಆಗ್ರಹಗಳು ಕೇಳಿ ಬಂದಿದ್ದವು. ಅದಾದ ಬಳಿಕ ರಾಜ್ಯ ಮಹಿಳಾ ಆಯೋಗವು ಇದರ ವಿಚಾರಣೆ ನಡೆಸಿತ್ತು. ಆ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡದ ಬಗ್ಗೆ ಪೆನ್ಡ್ರೈವ್ನಲ್ಲಿ ದಾಖಲಾಗಿದ್ದ ವಿಡಿಯೋ ಅನ್ನು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ (Dr Nagalakshmi Choudhary ) ವೀಕ್ಷಿಸಿದ್ದರು. ಸುವರ್ಣ ಬೆಂಗಳೂರು ಬಜ್ ಪಾಡ್ಕಾಸ್ಟ್ಗೆ (Suvarna Bangaluru Bujj Podcast) ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಅಂದು ತಾವು ನೋಡಿದ ಪೆನ್ಡ್ರೈವ್ (Prajwal Revanna Pen drive case)ನಲ್ಲಿ ಏನಿತ್ತು ಎನ್ನುವುದನ್ನು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಮಡಿಕೇರಿ ಆಂಟಿಯರ ಸುದ್ದಿಗೆ ಹೋಗಿ ತಗ್ಲಾಕ್ಕೊಂಡ ಭೂಪ! ಹನಿಮೂನ್ಗೆ ಹೋಗಿ ಜೈಲು ಸೇರಿದ...
ಮನೆಕೆಲಸದವಳ ವಿಡಿಯೋ ಪೆನ್ಡ್ರೈವ್ನಲ್ಲಿ....
ತಾವು ಪೆನ್ಡ್ರೈವ್ ನೋಡಿದಾಗ ಅದರಲ್ಲಿ ಮನೆ ಕೆಲಸದವಳ ವಿಡಿಯೋ ಇರುವುದನ್ನು ನಾಗಲಕ್ಷ್ಮಿ ರಿವೀಲ್ ಮಾಡಿದ್ದಾರೆ. 'ಮನೆ ಕೆಲಸದವಳನ್ನು ಅಟ್ಟಾಡಿಸಿಕೊಂಡು ... ಮಾಡುವುದು ಇವೆಲ್ಲವೂ ಅದರಲ್ಲಿ ರೆಕಾರ್ಡ್ ಆಗಿದೆ. ಅದನ್ನು ನೋಡಿದ ತಕ್ಷಣ ಏನೋ ಆಯ್ತು. ಅದರಲ್ಲಿಯೂ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನದಲ್ಲಿ ಕುಳಿತಾದ ಇದರ ಬಗ್ಗೆ ಗಮನ ಹರಿಸುವುದು ಸೂಕ್ತ ಎನ್ನಿಸಿತು. ಇದೇ ಕಾರಣಕ್ಕೆ ಮಧ್ಯಾಹ್ನವೇ ಪ್ರೆಸ್ಮೀಟ್ ಕರೆದೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದೆ. ಇದು ತುಂಬಾ ಹೈ ಪ್ರೊಫೈಲ್ ಕೇಸ್ ಆಗಿರುವ ಕಾರಣ ಈ ರೀತಿ ಅನಿವಾರ್ಯವಾಯಿತು. ಒಬ್ಬರಲ್ಲ, ಇಬ್ಬರಲ್ಲ... ಯಾವ್ಯಾವ ಸ್ಥಿತಿಗಳಲ್ಲಿ ಅವರು ಈ ರೀತಿಯ ಕೆಲಸ ಮಾಡಬೇಕಾಯಿತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಇದರ ತನಿಖೆ ಆಗಲೇಬೇಕು, ಇದಕ್ಕೆ ನ್ಯಾಯ ಸಿಗಲೇಬೇಕು ಎಂದು ಎನ್ನಿಸಿತು' ಎಂದಿದ್ದಾರೆ ನಾಗಲಕ್ಷ್ಮಿ.
ತಿಂಗಳಾದ್ರೂ ಮಗು ನೋಡಲು ಬರಲಿಲ್ಲ: ಮಗು ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗಾಗಿ ಕಾಯ್ತಿರೋ ಯುವತಿ!
ತುಂಬಾ ಹೆಣ್ಣುಮಕ್ಕಳ ಮಾನಹಾನಿ
'ಪೆನ್ಡ್ರೈವ್ ನೋಡಿದಾಗ, ತುಂಬಾ ಜನ ಹೆಣ್ಣುಮಕ್ಕಳ ಮಾನಹಾನಿಯಾಗಿದೆ ಎನ್ನುವುದು ತಿಳಿಯಿತು. ಎಷ್ಟೋ ಮಂದಿ ಊರು ಬಿಟ್ಟು ಹೋದರು. ಇವತ್ತು ಎಷ್ಟು ಮಂದಿ ಎಲ್ಲಿ ಇದ್ದಾರೆ ಎನ್ನುವುದೇ ಗೊತ್ತಿಲ್ಲ. ಆದ್ದರಿಂದ ಇದನ್ನು ಸೀರಿಯಲ್ ಆಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು' ಎಂದು ನಡೆದ ಘಟನೆಯನ್ನು ಅವರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ