ಮಲಗಿದ್ದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಇಬ್ಬರು ಯುವಕರು

By Govindaraj S  |  First Published Jul 15, 2023, 9:40 AM IST

ಕೆಲಸ ಅರಸಿಕೊಂಡು ಹಾಸನ ನಗರಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ನಿಗೂಢವಾಗಿ ಸಾವನಪ್ಪಿರುವ ಘಟನೆ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ. 


ಹಾಸನ (ಜು.15): ಕೆಲಸ ಅರಸಿಕೊಂಡು ಹಾಸನ ನಗರಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ನಿಗೂಢವಾಗಿ ಸಾವನಪ್ಪಿರುವ ಘಟನೆ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ನಯನ್‌ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು. 

ವಾರದ ಹಿಂದೆ ಹಾಸನಕ್ಕೆ ಬಂದಿದ್ದ ರಾಮ್ ಸಂಜೀವನ್ ಹಾಗೂ ನವಾಬ್ ಹನುಮಂತಪುರದಲ್ಲಿ ಬಾಡಿಗೆ ರೂಂ ಪಡೆದು ನಗರದ ಹೊರವಲಯದ ಖಾಸಗಿ ಕಂಪನಿಯಲ್ಲಿ ಎರಡು ದಿನ ಕೆಲಸ ಮಾಡಿದ್ದರು. ಬಳಿಕ ಇಬ್ಬರಿಗೂ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲಸಕ್ಕೆ ರಜೆ ಹಾಕಿ ಗುರುವಾರ ಇಬ್ಬರೂ ಖಾಸಗಿ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದು ರಾತ್ರಿ ಊಟ ಮಾಡಿ ಮಲಗಿದ್ದರು. 

Latest Videos

undefined

ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್

ಶುಕ್ರವಾರ ಇಡೀ ದಿನ ರೂಂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮನೆ ಮಾಲೀಕರು ರೂಂ ಬಾಗಿಲು ಒಡೆದು ನೋಡಿದಾಗ ಮಲಗಿದ್ದಲ್ಲಿಯೇ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ.   ಇದರಿಂದ ಗಾಬರಿಗೊಂಡ ಮನೆ ಮಾಲೀಕ ಕೂಡಲೇ ಹಾಸನ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಕಾರ್ಖಾನೆಯಲ್ಲಿ ಕುಸಿದು ಬಿದ್ದು ಮಹಿಳೆ ಸಾವು: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿರುವ ಸ್ಟೌವ್‌ ಕ್ರಾಫ್ಟ್‌ ಕಾರ್ಖಾನೆಯಲ್ಲಿ ಮಹಿಳೆ ಕುಸಿದು ಬಿದ್ದು ಸಾವ​ನ್ನ​ಪ್ಪಿದ್ದು, ಆಕೆಯ ಕುಟುಂಬ​ಸ್ಥರು ಪರಿ​ಹಾ​ರಕ್ಕೆ ಒತ್ತಾ​ಯಿಸಿ ಬುಧ​ವಾರ ಪ್ರತಿ​ಭ​ಟನೆ ನಡೆ​ಸಿ​ದರು. ಕಾರ್ಖಾ​ನೆ ನೌಕ​ರ​ರಾದ ಮಹ​ದೇ​ವಮ್ಮ (41) ಮೃತ​ಪ​ಟ್ಟ​ವರು. ಅವರ ಸಾವಿಗೆ ಕಾರ್ಖಾನೆ ಆಡ​ಳಿತ ಮಂಡ​ಳಿಯೇ ಕಾರ​ಣ​ವಾ​ಗಿದ್ದು, ಪರಿ​ಹಾರ ನೀಡ​ಬೇ​ಕೆಂದು ಕುಟುಂಬ​ಸ್ಥರು ಪ್ರತಿ​ಭ​ಟಿಸಿ ಒತ್ತಾ​ಯಿ​ಸಿ​ದ​ರು. ಕಾರ್ಖಾನೆ ಮಾಲೀಕರು ಹಾಗೂ ಆಡಳಿತ ವರ್ಗದವರು ಕಾರ್ಮಿಕರನ್ನು ಕಾಲು ಕಸದಂತೆ ಕಾಣುತ್ತಾರೆ. ಬಹಳ ಒತ್ತಡದಿದ ಕೆಲಸ ಮಾಡಿಸುತ್ತಾರೆ ಆಗಿಂದಾಗ್ಗೆ ಈ ಕಾರ್ಖಾನೆಯಲ್ಲಿ ಹಲವಾರು ರೀತಿಯ ಅವಘಡಗಳು ನಡೆಯುತ್ತಿದ್ದರು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಇವರ ಅಡಿಯಾಳಾಗಿ ದುಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಸಂಘರ್ಷಕ್ಕಿಳಿದರೆ ಎದುರಿಸಲು ಸಿದ್ಧ: ಕೆಂಪಣ್ಣ ಎಚ್ಚರಿಕೆ

ದುಡ್ಡಿನ ದರ್ಪ: ಈ ವೇಳೆ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್‌ ಮಾತನಾಡಿ, ಸ್ಟೌವ್‌ ಕ್ರಾಫ್ಟ್‌ ಮಾಲೀಕ ಹಾಗೂ ಸಿಬ್ಬಂದಿ ಮಹಿಳೆಯ ಸಾವಿಗೆ ಬೆಲೆ ಕೊಡದೆ ನೀವು ಏನಾದರೂ ಮಾಡಿಕೊಳ್ಳಿ ನಮ್ಮನ್ನು ಏನು ಮಾಡಲಾಗುವುದಿಲ್ಲ. ದೊಡ್ಡ ದೊಡ್ಡವರ ಶ್ರೀರಕ್ಷೆ ನಮಗಿದೆ ಎಂದು ದುಡ್ಡಿನ ದರ್ಪದಿಂದ ಮಾತನಾಡುತ್ತಿದ್ದಾರೆ. ನಾಲ್ಕು ಸಾವಿರ ಮಂದಿಗೆ ಕೆಲಸ ನೀಡಿರುವ ಇವರಿಗೆ ಪರಿಹಾರ ನೀಡಲು ಕಷ್ಟವೇ. ಮಹದೇವಮ್ಮ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಅವರ ಪತಿ ಹಿಂದೆಯೇ ತೀರಿಕೊಂಡಿದ್ದಾರೆ. ಇದೀಗ ಮಹದೇವಮ್ಮ ಅವರು ತೀರಿಕೊಂಡಿದ್ದು ಇಬ್ಬರೂ ಹೆಣ್ಣು ಮಕ್ಕಳು ಅನಾಥವಾಗಿದ್ದಾರೆ. ಈ ಕಾರ್ಖಾನೆಯ ಮಾಲೀಕನಿಗೆ ಮಾನವೀಯತೆ, ಮನುಷ್ಯತ್ವ ಇದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಮಾನವೀಯತೆಯನ್ನು ಮರೆತಿರುವ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

click me!