ಕೋಲಾರ: ಪತಿ ಅನುಮಾನಾಸ್ಪದ ಸಾವು; ಠಾಣೆ ಮೆಟ್ಟಿಲೇರಿದ ಪತ್ನಿ!

ಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತನಿಖೆ ನಡೆಸುವಂತೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು ಗ್ರಾಮದಲ್ಲಿ ನಡೆದಿದೆ.ಚಕ್ರೇಶ್ವರ್ ಮೃತ ವ್ಯಕ್ತಿ.


ಕೋಲಾರ (ಸೆ.22): ಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತನಿಖೆ ನಡೆಸುವಂತೆ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು ಗ್ರಾಮದಲ್ಲಿ ನಡೆದಿದೆ.

ಚಕ್ರೇಶ್ವರ್ ಮೃತ ವ್ಯಕ್ತಿ. ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಚಕ್ರೇಶ್ವರ್. ಕೆಜಿಎಫ್ ತಾಲೂಕಿನ ಕೋಟಿಲಿಂಗೇಶ್ವರ ದೇವಸ್ಥಾನದ ಬಳಿ ಪತಿಗೆ ಹಾವು ಕಚ್ಚಿದೆ ಬಾಯಲ್ಲಿ ನೊರೆ ಬರುತ್ತಿದೆ ಎಂದು ಪತ್ನಿ ಅನಿತಾಗೆ ತಿಳಿಸಿದ್ದ ಸ್ಥಳೀಯರು. ಕೆಜೆಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಪತಿ ಚಕ್ರೇಶ್ವರ್.

Latest Videos

ಗಣಪತಿ ಪೂಜೆ ಮಾಡಿದ ವಿದ್ಯಾರ್ಥಿನಿ ಕೈ ಮುರಿದ ಮುಖ್ಯ ಶಿಕ್ಷಕಿಗೆ ದೇವರೇ ಶಿಕ್ಷೆ ಕೊಟ್ಟ!

ಆದರೆ ಪತಿ ಹಾವು ಕಚ್ಚಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಪತಿಯ ಸಾವಿನ ಸತ್ಯಾಸತ್ಯತೆ ತಿಳಿಯಲು ಪೊಲೀಸ್ ಠಾಣೆಗೆ ದೂರು. ಕೆಜಿಎಫ್ ನ ಬೆಮೆಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರು ಪತ್ನಿ ಅನಿತಾ. ಪತಿ ಹಾವು ಕಚ್ಚಿ ಮೃತಪಟ್ಟಿದ್ದಾನೋ, ವೈಷ್ಯಮ್ಯಕ್ಕೆ ಹತ್ಯೆ ಆಗಿದೆಯೋ ಎಲ್ಲ ಅನುಮಾನಗಳಿಗೆ ಪೊಲೀಸ್ ತನಿಖೆಯ ಬಳಿಕಷ್ಟೇ ಉತ್ತರ ಸಿಗಲಿದೆ. 

click me!