ಶಿಲ್ಪಾ ಮೃತಪಟ್ಟ ಗೃಹಿಣಿಯಾಗಿದ್ದು, ಪತಿ ಶರತ್, ಮಾವ ಸುರೇಶ ಹಾಗೂ ಅತ್ತೆ ಶಶಿಕಲಾ ಅವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಶಿಲ್ಪಾ ಕುಟುಂಬಸ್ಥರು
ರಾಯಚೂರು(ಸೆ.21): ಮಹಡಿ ಮೇಲಿಂದ ಬಿದ್ದು ಗೃಹಿಣಿಯೊಬ್ಬಳು ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಸ್ಥಳೀಯ ಬದ್ರಿನಾಥ ಕಾಲೋನಿಯಲ್ಲಿ ಬುಧವಾರ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ಕೊಲೆ ಮಾಡಲಾಗಿದೆ ಎಂಬ ಶಂಕೆ ಉಂಟಾಗಿದೆ.
ಶಿಲ್ಪಾ (28) ಮೃತಪಟ್ಟ ಗೃಹಿಣಿಯಾಗಿದ್ದು, ಪತಿ ಶರತ್, ಮಾವ ಸುರೇಶ ಹಾಗೂ ಅತ್ತೆ ಶಶಿಕಲಾ ಅವರು ಕೊಲೆ ಮಾಡಿದ್ದಾರೆ ಎಂದು ಶಿಲ್ಪಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪಕ್ಕದ ಆಂಧ್ರದ ಕರ್ನೂಲ್ ಜಿಲ್ಲೆಯ ಆದೋನಿಯ ಶಿಲ್ಪಾರನ್ನು ನಗರದ ಭತ್ತದ ವ್ಯಾಪಾರಿ ಸುರೇಶ ಅವರ ಮಗ ಶರತ್‌ಗೆ ಕೊಟ್ಟು ಕಳೆದ 2022 ಜೂನ್‌ನಲ್ಲಿ ಮದುವೆ ಮಾಡಲಾಗಿತ್ತು. ಆರಂಭದಿಂದಲೂ ಸಹ ಸಂಸಾರದಲ್ಲಿ ಕಿರಿಕಿರಿ, ನಿರಂತರವಾಗಿ ಕೌಟುಂಬಿಕ ಗಲಾಟೆಗಳಾಗುತ್ತಿದ್ದವು, ಇದರಿಂದಾಗಿ ಕೆಲ ದಿನಗಳ ಕಾಲ ಶಿಲ್ಪಾ ತವರಿಗೆ ಹೋಗಿದ್ದಳು. ಹಿರಿಯರೆಲ್ಲರೂ ಕೂಡಿ ಸಮಾಧಾನಪಡಿಸಿ ಪತಿಗೆ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಬುಧವಾರ ಬೆಳಗಿನ ಜಾವ ಶಿಲ್ಪಾ ಮಹಡಿ ಮೇಲಿಂದ ಬಿದ್ದು ಸಾವನಪ್ಪಿದ್ದು, ಘಟನೆ ಮಾಹಿತಿ ತಿಳಿದು ಸಮೀಪದ ನೇತಾಜಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
undefined
ಮಗಳನ್ನು ಕಳೆದುಕೊಂಡ ಕುಟುಂಬಸ್ಥರು, ಆಪ್ತರು ಆಕೆ ಪತಿಯ ತಂದೆ ಸುರೇಶ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೇ ಅವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೆರೆಗೆ ವರದಕ್ಷಿಗೆ ಕಿರುಕುಳ ಮತ್ತು ಕೊಲೆ ಕಾಯ್ದೆಯಡಿಯಲ್ಲಿ ಸ್ಥಳೀಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.