ಗೇಮ್ ಆಡ್ತಾನೆ ಪ್ರಾಣ ಬಿಟ್ಟ ಬಾಲಕ, ಸಡನ್ ಗೇಮರ್ ಡೆತ್ ಸಿಂಡ್ರೋಮ ಎಂದ್ರೇನು?

Published : Oct 16, 2025, 09:05 PM IST
Mobile Gaming

ಸಾರಾಂಶ

Sudden Gamer Death Syndrome : ಮೊಬೈಲ್ ಗೇಮಿಂಗ್ ಚಟ ಇದ್ರೆ ಎಚ್ಚರ. ಇದು ಬರೀ ಚಟವಲ್ಲ. ನಿಮ್ಮ ಪ್ರಾಣಕ್ಕೆ ಕುತ್ತು ತರ್ಬಹುದು. ಈಗಾಗಲೇ 13 ವರ್ಷದ ಬಾಲಕ ಇದಕ್ಕೆ ಬಲಿಯಾಗಿದ್ದಾನೆ. 

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್ ನಲ್ಲಿ ಗೇಮ್ ಆಡ್ತಿದ್ದ13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಗೇಮ್ ಆಡ್ತಾ ಆಡ್ತಾನೆ ಆತ ಸಾವನ್ನಪ್ಪಿದ್ದು, ಎಲ್ಲರನ್ನು ಆಘಾತಗೊಳಿಸಿದೆ. ಮೃತ ಬಾಲಕನ ಹೆಸ್ರು ವಿವೇಕ್. ಆತ ಮೊಬೈಲ್ ಗೇಮಿಂಗ್ (Mobile gaming) ಚಟ ಹೊಂದಿದ್ದ. ಪ್ರತಿ ದಿನ ಗಂಟೆಗಟ್ಟಲೆ ಫ್ರೀ ಪೈರ್ ಆಟ ಆಡ್ತಿದ್ದ. ಘಟನೆ ನಡೆದ ದಿನ ಆತನೊಬ್ಬನೇ ಮನೆಯಲ್ಲಿದ್ದನಂತೆ. ಸಹೋದರಿ ಮನೆಗೆ ಬಂದು ನೋಡಿದಾಗ ವಿವೇಕ್ ಬೆಡ್ ಮೇಲೆ ಬಿದ್ದಿದ್ದ. ಮೊಬೈಲ್ ನಲ್ಲಿ ಫ್ರೀ ಫೈರ್ ಗೇಮ್ (Free Fire Game) ಓಡ್ತಾ ಇತ್ತು. ಇದನ್ನು ವೈದ್ಯರು ಸಡನ್ ಡೆತ್ ಎಂದಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸಡನ್ ಗೇಮರ್ ಡೆತ್ ಎಂದು ಕರೆಯಲಾಗುತ್ತದೆ.

ಸಡನ್ ಗೇಮರ್ ಡೆತ್ (Sudden Gamer Death) ಎಂದ್ರೇನು? : 

ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೇಮ್ ಆಡ್ತಿರುವಾಗ ಸಾವನ್ನಪ್ಪಿದ್ರೆ ಅದನ್ನು ಸಡನ್ ಗೇಮರ್ ಡೆತ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಗೆ ಯಾವುದೇ ಗಾಯ ಆಗೋದಿಲ್ಲ. ಅಥವಾ ಯಾರ ಜೊತೆಯೂ ಗಲಾಟೆ ಮಾಡ್ಕೊಂಡು ಸಾವನ್ನಪ್ಪೋದಿಲ್ಲ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸಂಶೋಧನೆ ಪ್ರಕಾರ, ನಿರಂತರವಾಗಿ ಆಟಗಳನ್ನು ಆಡುವಾಗ ಜನರು ಸಾವನ್ನಪ್ಪಿದ ಸುಮಾರು 24 ಪ್ರಕರಣಗಳು ವಿಶ್ವಾದ್ಯಂತ ನಡೆದಿವೆ. 1982 ರಲ್ಲಿ ಮೊದಲ ಸಾವು ಸಂಭವಿಸಿತ್ತಂತೆ. ಉಳಿದ 23 ಸಾವುಗಳು 2002 ಮತ್ತು 2021 ರ ನಡುವೆ ಸಂಭವಿಸಿವೆ. ಹೆಚ್ಚಿನ ಪ್ರಕರಣಗಳು ಆಗ್ನೇಯ ಏಷ್ಯಾದ ದೇಶಗಳಲ್ಲಿ ನಡೆದಿದೆ. ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳು ಇದ್ರಲ್ಲಿ ಸೇರಿವೆ. ಹಠಾತ್ ಗೇಮರ್ ಸಾವುಗಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಪುರುಷರು. ಸಾವನ್ನಪ್ಪಿದವರೆಲ್ಲರೂ 11 ರಿಂದ 40 ವರ್ಷ ವಯಸ್ಸಿನವರು.

ಡಾ.ಕೃತಿಕಾ ರೆಡ್ಡಿ ಪ್ರಕರಣ: ಮಹೀಂದ್ರಾ ರೆಡ್ಡಿ ಡ್ರಗ್ ತಂದಿರೋದು ಎಲ್ಲಿಂದ? ಬೆಚ್ಚಿ ಬೀಳಿಸುತ್ತೆ ಆರೋಪಿ ಕ್ರಿಮಿನಲ್ ಹಿನ್ನೆಲೆ

ಸಡನ್ ಗೇಮರ್ ಸಾವು ಹೇಗಾಗುತ್ತೆ? : 

ಮೊಬೈಲ್ ಗೇಮಿಂಗ್ ಈಗ ಒಂದು ಚಟವಾಗಿ ಬದಲಾಗಿದೆ. ಕುಡಿತ, ಧೂಮಪಾನ, ಜೂಜಾಟ ಸೇರಿದಂತೆ ಕೆಟ್ಟ ಚಟಗಳ ಸಾಲಿಗೆ ಇದನ್ನು ಸೇರಿಸ್ಬಹುದು. ಬಹುತೇಕ ಮಕ್ಕಳು ಈ ಗೇಮಿಂಗ್ ಚಟಕ್ಕೆ ಬಲಿಯಾಗ್ತಿದ್ದಾರೆ. ಇದು ಅವ್ರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರ್ತಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಗೇಮಿಂಗ್ ಚಟಕ್ಕೆ ಬೀಳುವ ಜನರು ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ತಾರೆ. ಹಗಲಿರುಳೆನ್ನದೆ ಆಟ ಆಡ್ತಾರೆ. ಬಹುತೇಕರು ಮಧ್ಯರಾತ್ರಿ, ಬೆಳಗಿನಜಾವದವರೆಗೆ ಗೇಮಿಂಗ್ ನಲ್ಲಿ ಬ್ಯುಸಿಯಾಗ್ತಾರೆ. ಇದು ಅವರಿಗೆ ತಾತ್ಕಾಲಿಕ ನೆಮ್ಮದಿ ನೀಡಿದ್ರೂ ದೀರ್ಘ ಸಮಯಕ್ಕೆ ಅತ್ಯಂತ ಅಪಾಯಕಾರಿ. ಗೇಮರ್ ಒಂದೇ ಸ್ಥಳದಲ್ಲಿ, ಒಂದೇ ಭಂಗಿಯಲ್ಲಿ ತಾಸು, ಎರಡು ತಾಸು ಕುಳಿತುಕೊಳ್ಳುವುದ್ರಿಂದ ಈ ಸಾವು ಸಂಭವಿಸುತ್ತದೆ. ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದ್ರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ. ಇದು ದೇಹದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. 

ವಿಜಯಪುರ: ಮದ್ಯ ಸೇವಿಸಿದ ಬಳಿಕ ಮೂವರ ನಡುವೆ ಜಗಳ: ಇಬ್ಬರು ಸೇರಿ ಓರ್ವನ ಹತ್ಯೆ!

ಕೆಲವರು ಗೇಮಿಂಗ್ ಮಧ್ಯೆ ಸಣ್ಣ ಬ್ರೇಕ್ ತೆಗೆದುಕೊಳ್ತಾರೆ. ಆದ್ರೆ ಈ ಸಣ್ಣ ಬ್ರೇಕ್ ನಿಂದ ಯಾವುದೇ ದೊಡ್ಡ ವ್ಯತ್ಯಾಸವಾಗುವುದಿಲ್ಲ. ಗೇಮರ್ ಗಳು ಗೇಮ್ ಆಡಿದ್ದಕ್ಕಿಂತ ಹೆಚ್ಚು ಕಾಲ ಬ್ರೇಕ್ ತೆಗೆದುಕೊಳ್ಬೇಕು. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಸಂಶೋಧನೆ ಪ್ರಕಾರ, ವಿಶ್ವಾದ್ಯಂತ ಹಠಾತ್ ಗೇಮರ್ ಸಾವುಗಳಿಗೆ ಮುಖ್ಯ ಕಾರಣಗಳು ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ. ಮೆದುಳಿನ ರಕ್ತಸ್ರಾವ ಹಾರ್ಟ್ ರಿದಮ್ ನ ಅಡಚಣೆಯಾಗಿದೆ. ಮಕ್ಕಳಿರಲಿ, ದೊಡ್ಡವರಿರಲಿ, ಮೊಬೈಲ್ – ಕಂಪ್ಯೂಟರ್ ಗೇಮಿಂಗ್ ಅಪಾಯಕಾರಿಯಾಗಿದ್ದು, ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ