ಮುಂಬೈನಲ್ಲಿ ಮತ್ತೊಂದು ಪೋರ್ನ್ ದಂಧೆ ಬಟಾಬಯಲು/ ಪೋರ್ನ್ ಶೂಟ್ ಮಾಡಿ ಅದನ್ನು ಒಟಿಟಿ ಮೂಲಕ ಜನರಿಗೆ ನಿಡಲಾಗುತ್ತಿತ್ತು/ ಪೋರ್ನ್ ಶೂಟಿಂಗ್ ಕೇಂದ್ರದ ಮೇಲೆ ದಾಳಿ ಮಾಡಿದ ನಂತರ ವಿಚಾರ ಬಹಿರಂಗ/ ಹನ್ನೆರಡಕ್ಕೂ ಅಧಿಕ ಆಪ್ ಗಳನ್ನು ಸಿದ್ಧಮಾಡಿಕೊಳ್ಳಲಾಗಿತ್ತು
ಮುಂಬೈ(ಫೆ. 22) ಮಂಬೈನ ಹೊರವಲಯದ ದ್ವೀಪ ಪ್ರದೇಶಗಳಲ್ಲಿ ಲೈವ್ ಪೋರ್ನ್ ಶೂಟಿಂಗ್ ನಡೆಯುತ್ತಿತ್ತು ಎಂಬ ವಿಚಾರ ಪೊಲೀಸರ ಗಮನಕ್ಕೆ ಬಂದು ಅನೇಕ ಕಡೆ ದಾಳಿ ಮಾಡಿದ್ದರು. ಈಗ ಇದಕ್ಕೆ ಸಂಬಂಧಿಸಿದ ಇನ್ನೊಂದು ಲಿಂಕ್ ಬಹಿರಂಗವಾಗಿದೆ.
ಒಟಿಟಿ ಫ್ಲಾಟ್ ಫಾರ್ಮ್ ಬಳಸಿಕೊಂಡು ವೆಬ್ ಸೀರಿಸ್ ತರಹ ಕಂತಿನಲ್ಲಿ ನೀಲಿ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ಈ ಬಗೆಹ ಹನ್ನೆರಡಕಲ್ಕೂ ಅಧಿಕ ಆಪ್ ಗಳನ್ನು ಪತ್ತೆ ಮಾಡಲಾಗಿದ್ದು ಲಾಕ್ ಡೌನ್ ಸಮಯದಲ್ಲಿ ಇವು ಹುಟ್ಟಿಕೊಂಡಿದ್ದವು.
undefined
ಯುವತಿಯರ ಬೆತ್ತಲೆ ಶೂಟ್ ಮಾಡುತ್ತಿದ್ದ ನಟಿ.. ಇವಳೇನು ಕಡಿಮೆ ಇಲ್ಲ
ಮಾಧವನಗರದ ಬಂಗಲೆಯೊಂದರಲ್ಲಿ ಬ್ಲೂ ಫಿಲಂ ಶೂಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದರು. ಅಲ್ಲಿ ಸಿಕ್ಕ ಆರೋಪಿ ಯಾಸ್ಮೀನ್ ಹಲವು ಸಂಗತಿಗಳನ್ನು ಬಾಯಿ ಬಿಟ್ಟಿದ್ದಾನೆ .
ಚಿತ್ರೀಕರಣಗೊಂಡ ಪೋರ್ನ್ ಪ್ರಸಾರ ಮಾಡುವುದಕ್ಕಾಗಿಯೇ ಆಪ್ ಗಳು ಹುಟ್ಟಿಕೊಂಡಿದ್ದವು. ತಿಂಗಳಿಗೆಬ 199 ರೂ. ನೀಡಿ ಸದಸ್ಯತ್ವ ಪಡೆದುಕೊಳ್ಳಲು ಗ್ರಾಹಕರನ್ನು ಕೇಳಿಕೊಳ್ಳಲಾಗುತ್ತಿತ್ತು. ಶಾಕಿಂಗ್ ಸುದ್ದಿ ಎಂದರೆ ಈ ರೀತಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಚಂದಾದಾರರಾಗಿದ್ದರು.
ಬಾಡಿಗೆಗೆ ತೆಗೆದುಕೊಂಡ ಬಂಗಲೆಯಲ್ಲಿ ಶೂಟ್ ಮಾಡಲಾಗುತ್ತಿತ್ತು. ಹೊಸ ನಟಿಯರನ್ನು ವೆಬ್ ಸೀರಿಸ್ ನಲ್ಲಿ ಅವಕಾಶ ಕೊಡುವುದಾಗಿ ಕರೆದುಕೊಂಡು ಬಂದು ಅವರನ್ನು ಬಳಸಿಕೊಳ್ಳಲಾಗುತ್ತಿತ್ತು.