
ಚೆನ್ನೈ(ಫೆ. 22) ಪಾಪಿ ಪತಿ ಕೊನೆಗೆ ತನ್ನ ಹೆಂಡಿ ಕೈಯಿಂದಲೇ ಸಾವು ಕಂಡಿದ್ದಾನೆ ಗರ್ಭಿಣಿ ಪತ್ನಿಗೆ ಪ್ರತಿನಿತ್ಯ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ ಪತಿಯನ್ನು ಪತ್ನಿಯೇ ವಿಷಕೊಟ್ಟು ಹತ್ಯೆ ಮಾಡಿದ್ದಾಳೆ. ತಮಿಳುನಾಡಿನ ಪೆರಿಯಮೋಲಪಾಲಯಂನಿಂದ ಘಟನೆ ವರದಿಯಾಗಿದೆ.
ಮೈಥಿಲಿ(21) ಪತಿಯನ್ನು ಹತ್ಯೆ ಮಾಡಿದ್ದಾಳೆ. ಪೀಡಿಸುತ್ತಿದ್ದ ಗಂಡನನ್ನು ನಂದ ಕುಮಾರ್ ಎಂದು ಗುರುತಿಸಲಾಗಿದೆ. ನಾನೇ ನನ್ನ ಪತಿಯನ್ನು ಕೊಲೆ ಮಾಡಿದ್ದೇನೆ. ನಾನು ಐದು ತಿಂಗಳ ಗರ್ಭಿಣಿ ಎಂದು ಮೈಥಿಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಫೀಲ್ ಫ್ರೀ; ಗರ್ಭಿಣಿಯರು ಸೆಕ್ಸ್ ಮಾಡಬಹುದಾ?
ಕಳೆದ 8 ತಿಂಗಳ ಹಿಂದೆ ನಂದ ಕುಮಾರ್ ನನ್ನು ಮೈಥಿಲಿ ಮದುವೆಯಾಗಿದ್ದಳು. ನಂದಕುಮಾರ್ ಗೆ ಇದು 2 ನೇ ಮದುವೆ. ಈಗ ಮೈಥಿಲಿ 5 ತಿಂಗಳ ಗರ್ಭಿಣಿಯಾಗಿದ್ದಳು. ಪತ್ನಿ ಗರ್ಭಿಣಿಯಾಗಿದ್ದರೂ ಪ್ರತಿ ನಿತ್ಯ ಸೆಕ್ಸ್ ಬೇಕೆಂದು ಗಂಡ ಪೀಡಿಸುತ್ತಿದ್ದ.
ಗಂಡನ ಕಾಟ ವಿಪರೀತಕ್ಕೆ ಹೋದಾಗ ಪತ್ನಿ ಊಟದಲ್ಲಿ ಕೀಟನಾಶಕ ಹಾಕಿ ಬಡಿಸಿದ್ದಾಳೆ. ವಿಷ ಬೆರೆಸಿದ ಊಟವನ್ನು ತಿಂದು ಅಸ್ವಸ್ಥನಾದಗಿದ್ದ ನಂದ ಕುಮಾರ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ಗಂಡ ಸಾವನ್ನಪ್ಪಿದ್ದಾನೆ. ತಾನೇ ಕೊಂದಿದ್ದು ಎಂದು ಪತ್ನಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ