ದಾವಣಗೆರೆ; ಅಂಗಳದಲ್ಲಿದ್ದ ಬಾಲಕಿ ಎಳೆದೊಯ್ದ ಬೀದಿ ನಾಯಿಗಳು

By Suvarna News  |  First Published Jun 6, 2021, 10:07 PM IST

* ಬಾಲಕಿಯನ್ನು ಕಚ್ಚಿ ಎಳೆದೊಯ್ದ ಬೀದಿನಾಯಿಗಳು
* ದಾವಣಗೆರೆ ಆಜಾದ್ ನಗರದಲ್ಲೊಂದು ಹೃದಯವಿದ್ರಾಹಕ‌ ಘಟನೆ 
* ಮನೆಯಂಗಳದಲ್ಲಿದ್ದ ನಾಲ್ಕು ವರ್ಷದ ಬಾಲಕಿಯನ್ನು ಎಳೆದೊಯ್ದು ಕಚ್ಚಿದ ನಾಯಿಗಳು
* ತೀವ್ರ ಗಾಯಗೊಂಡ ಬಾಲಕಿ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲು 


ದಾವಣಗೆರೆ (ಜೂ. 06)  ದಾವಣಗೆರೆ ಆಜಾದ್ ನಗರದಲ್ಲೊಂದು ಘೋರ ಘಟನೆ ನಡೆದುಹೋಗಿದೆ. ಬಾಲಕಿಯನ್ನು ಬೀದಿನಾಯಿಗಳು ಕಚ್ಚಿ ಎಳೆದೊಯ್ದಿವೆ.

ಮನೆಯಂಗಳದಲ್ಲಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಗಾಯಗೊಂಡ ಬಾಲಕಿಯನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

ಬೆಂಗಳೂರಿನಲ್ಲಿ ಏನ್ ಕಡಿಮೆ ಇಲ್ಲ ಬೀದಿ ನಾಯಿ ಕಾಟ

ಆಜಾದ್‌ನಗರ  ನಿವಾಸಿ ತಲಾಂ ಶೇಖ್‌– ತಬುಸುಂ ಬಾನು ದಂಪತಿಯ ನಾಲ್ಕು ವರ್ಷದ ಮಗು ಕನಿಷ್‌ ಫಾತಿಮಾ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ  ನಮಾಜ್‌ ವೇಳೆ ಅಂಗಳದಲ್ಲಿದ್ದ ಮಗುವಿನ ಮೇಲೆ ನಾಯಿಗಳು ದಾಳಿ ಮಾಡಿವೆ.

ಕೂಡಲೇ ಮನೆಯವರು ಬಂದು ಬಿಡಿಸಿದರೂ ತಲೆ, ಕೈ. ಕಾಲು ಸಹಿತ ದೇಹದ ವಿವಿಧೆಡೆ ಗಾಯ ಗಳಾಗಿದ್ದವು. ದಾವಣಗೆರೆ ಪಾಲಿಕೆ‌ ಸಿಬ್ಬಂದಿ ವಿರುದ್ದ ಬಡಾವಣೆ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. 

 

click me!