ಪೆಟ್ರೋಲ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ 230 ಕಿ.ಮೀ ವೇಗದಲ್ಲಿ ನುಗ್ಗಿದ ರೋಲ್ಸ್ ರಾಯ್ಸ್‌ ಕಾರು: ಇಬ್ಬರು ಬಲಿ

By BK Ashwin  |  First Published Aug 24, 2023, 9:41 PM IST

ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 


ಹೊಸದಿಲ್ಲಿ (ಆಗಸ್ಟ್‌ 24, 2023): ಹೊಸದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ರೋಲ್ಸ್ ರಾಯ್ಸ್ ಕಾರು ಅಪಘಾತಕ್ಕೀಡಾಗ ಇಬ್ಬರು ಮೃತಪಟ್ಟಿರೋ ದಾರುಣ ಘಟನೆ ಮಂಗಳವಾರ ನಡೆದಿದೆ. ರೋಲ್ಸ್ ರಾಯ್ಸ್ ಫ್ಯಾಂಟಮ್ - ಉಬರ್-ಐಷಾರಾಮಿ ಲಿಮೋಸಿನ್ ಕಾರು ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ನಂತರ ಮಂಗಳವಾರ ಹರಿಯಾಣದ ನುಹ್‌ನಲ್ಲಿ ಭೀಕರ ಅಪಘಾತವಾಗಿದ್ದು, ಈ ವೇಳೆ ಇಬ್ಬರು ಬಲಿಯಾಗಿದ್ದಾರೆ. ರೋಲ್ಸ್ ರಾಯ್ಸ್ ಗಂಟೆಗೆ 230 ಕಿಮೀ ವೇಗದಲ್ಲಿ ಓಡಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಇನ್ನು, ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಗುರ್ಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಚಂಡೀಗಢದ ದಿವ್ಯಾ ಮತ್ತು ತಸ್ಬೀರ್ ಹಾಗೂ ದೆಹಲಿಯ ವಿಕಾಸ್ ಎಂದು ಗುರುತಿಸಲಾಗಿದ್ದು, ಟ್ಯಾಂಕರ್ ಚಾಲಕ ರಾಮಪ್ರೀತ್ ಮತ್ತು ಆತನ ಸಹಾಯಕ ಕುಲದೀಪ್ ಮೃತಪಟ್ಟ ಇಬ್ಬರು ಎಂದು 
ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 

Tap to resize

Latest Videos

ಇದನ್ನು ಓದಿ: ಅಶ್ಲೀಲ ವಿಡಿಯೋದಲ್ಲಿ ಹೆಂಡ್ತಿ ನಟಿಸಿರೋ ಅನುಮಾನ: ಮನಬಂದಂತೆ ಹಲ್ಲೆ ಮಾಡಿದ ಪೋರ್ನ್‌ ಚಟಕ್ಕೆ ಬಿದ್ದ ಪತಿ

ಅಪಘಾತದ ದೃಶ್ಯಾವಳಿಗಳು ರೋಲ್ಸ್‌ ರಾಯ್ಸ್‌ ಫ್ಯಾಂಟಮ್‌ನ ಸ್ವಲ್ಪ ಎಡ ಭಾಗವನ್ನು ತೋರಿಸಿದ್ದು, ಅಪಘಾತಕ್ಕೆ ಕಾರಿನ ಬಹುತೇಕಕ ಭಾಗ ಹಾಳಗಿದೆ. ಇದರ ಬೆಲೆ ₹ 10 ಕೋಟಿಗೂ ಹೆಚ್ಚು; ಹಾಗೂ ಇನ್ನೊಂದು ವಿಡಿಯೋದಲ್ಲಿ ಕಾರಿನ ಮುಂಭಾಗವು ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರೋದು ಮತ್ತು ವಾಹನದ ಸುತ್ತಲಿನ ಅವಶೇಷಗಳೊಂದಿಗೆ ಮ್ಯಾಂಗಲ್ಡ್ ಲೋಹದ ರಾಶಿಯನ್ನು ತೋರಿಸಿದೆ. ಹಾಗೂ, ಕಾರಿನ ಬಾಗಿಲುಗಳು ತೆರೆದಿದ್ದು ಪ್ರಕಾಶಮಾನವಾದ ಕಿತ್ತಳೆ ಒಳಾಂಗಣವನ್ನು ಬಹಿರಂಗಪಡಿಸಿದೆ.

ಇನ್ನೊಂದೆಡೆ, ಟ್ಯಾಂಕರ್‌ ಸಹ ಬಹುತೇಕ ನಾಶವಾಗಿದ್ದು,  ಸ್ಥಳೀಯರು ಬಹಿರಂಗಪಡಿಸಿದ ಚಿತ್ರಗಳು ಹೆದ್ದಾರಿಯ ಪಕ್ಕದಲ್ಲಿ ಕಂದು ಲೋಹದ ಸುಕ್ಕುಗಟ್ಟಿದ ರಾಶಿಯನ್ನು ತೋರಿಸಿದವು.
"ಅಂದು, ನಮಗೆ ಅಪಘಾತದ ಮಾಹಿತಿ ಸಿಕ್ಕಿದ ನಂತರ, ನಾವು ಐದಾರು ನಿಮಿಷಗಳಲ್ಲಿ ಸ್ಥಳಕ್ಕೆ ಬಂದೆವು. ಅಷ್ಟರೊಳಗೆ ಅಪಘಾತ ಅಂತ್ಯಗೊಂಡಿತ್ತು. ಮತ್ತು ಟ್ಯಾಂಕರ್ ಹೊತ್ತಿ ಉರಿಯಿತು. ಆದರೆ ಕಾರಿನಲ್ಲಿ ಯಾರೂ ಇರಲಿಲ್ಲ. ಅವರು ಹೊರಟು ಹೋಗಿದ್ದರು’’ ಎಂದು ಸ್ಥಳೀಯರೊಬ್ಬರು ವಿವರಿಸಿದರು.

ಇದನ್ನೂ ಓದಿ: ಬಾಲಕಿಯರ ಹಾಸ್ಟೆಲ್‌ನಲ್ಲಿ ಸರ್‌ಪ್ರೈಸ್‌ ಚೆಕ್‌: ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು

ರೋಲ್ಸ್ ರಾಯ್ಸ್‌ನಲ್ಲಿದ್ದ ಐವರು ಪ್ರಯಾಣಿಕರನ್ನು ಕ್ಷಿಪ್ರವಾಗಿ ರಕ್ಷಿಸಲಾಯಿತು, ಬಹುಶಃ ಸಂಬಂಧಿಕರು ಅಥವಾ ಅವರನ್ನು ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿದವರು ರಕ್ಷಿಸಿದ್ದಾರೆ ಎಂದು ಪೊಲೀಸರು ಇದನ್ನು ಮೊದಲೇ ದೃಢಪಡಿಸಿದ್ದರು. "ಒಂದು ಗುಂಪಿನಲ್ಲಿ 5-7, ಬಹುಶಃ ಎಂಟು, ಕಾರುಗಳು ಇದ್ದವು. ಪ್ರತಿಯೊಂದೂ 'ಸೂಪರ್ ಕಾರ್' ಆಗಿದ್ದವು. ಮುಂಭಾಗ ಮತ್ತು ಹಿಂಭಾಗದಲ್ಲಿ ಬೆಂಗಾವಲು ಕಾರುಗಳು ಸಹ ಇದ್ದವು. ಅವರು ಜನರನ್ನು ಕಾರಿನಿಂದ ಕರೆದೊಯ್ದು, ಇನ್ನೊಂದರಲ್ಲಿ ಇರಿಸಿದರು ಮತ್ತು ಅವರನ್ನು ಕರೆದುಕೊಂಡು ಹೋದರು" ಎಂದು ಪ್ರತ್ಯಕ್ಷದರ್ಶಿ ಹೇಳಿದರು.

ಇನ್ನು, ಈ ಬಗ್ಗೆ ತಿಳಿಸಿದ ನುಹ್ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, "ಪ್ರತ್ಯಕ್ಷದರ್ಶಿಗಳು ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ ಇದು ಅಪಘಾತಕ್ಕೆ ಕಾರಣವಾಯಿತು ಎಂದು ಹೇಳುತ್ತಾರೆ. ಇದನ್ನು ನಾವು ಈ ಸಮಯದಲ್ಲಿ ಅಥವಾ ಅದನ್ನು ಚಲಾಯಿಸುವ ವೇಗವನ್ನು ಖಚಿತಪಡಿಸಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಅನಾಥ ಬಾಲಕಿ ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್‌ ಮಾಡಿದ 8 ಜನ ಕಾಮುಕರು!

click me!