ಉಡುಪಿ; ಮಗನಿಗೆ ಕೊರೋನಾ ಸೋಂಕು, ತಂದೆ ಆತ್ಮಹತ್ಯೆ

By Suvarna News  |  First Published Aug 27, 2020, 10:19 PM IST

ಹಿರಿಯ ಮಗನಿಗೆ ಕೊರೋನಾ ಸೋಂಕು ಎಂಬ ಸುದ್ದಿ ಕೇಳಿ ತಂದೆ ಆತ್ಮಹತ್ಯೆ/ ಉಡುಪಿ ಜಿಲ್ಲೆಯಲ್ಲಿ ಘಟನೆ/ ಆಸ್ಪತ್ರೆಗೆ ಸೇರಿದ್ದ ಮಗನಿಗೆ ಕೊರೋನಾ ದೃಢವಾಗಿತ್ತು


ಉಡುಪಿ/  ಶಿರ್ವ (ಆ.  27)  ಮಗನಿಗೆ ಕೊರೋನಾ ಸೋಂಕಿರುವುದನನ್ನು ಕೇಳಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಳತ್ತೂರು ಗ್ರಾಮದ ಪುಂಚಲಕಾಡು ಎಂಬಲ್ಲಿ ನಡೆದಿದೆ.

ಸುಂದರ ಮೂಲ್ಯ (60)  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಂದರ ಅವರು  ರಕ್ತದೊತ್ತಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ದೊಡ್ಡ ಮಗನಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಅವರಿಗೆ ಕೊರೋನಾ ಸೊಂಕು ದೃಡಪಟ್ಟಿತ್ತು.

Tap to resize

Latest Videos

ಕೊರೋನಾಕ್ಕೆ ಯುವಕರೆ ಟಾರ್ಗೆಟ್; ಯಾಕೆ ಹೀಗೆ?

ಇದನ್ನು ಕೇಳಿ ಸುಂದರ ಮೂಲ್ಯ ಅವರು ಜಿಗುಪ್ಸೆಗೊಂಡು ಮಂಗಳವಾರ ರಾತ್ರಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ 11:30 ಗಂಟೆಗೆ ಮೃತಪಟ್ಟಿದ್ದಾರೆ. ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!