ಕ್ಷುಲ್ಲಕ ಕಾರಣಕ್ಕೆ ಮಗನಿಂದಲೇ ತಂದೆಯ ಹತ್ಯೆ | ಅಪ್ಪ, ಮಗನ ನಡುವೆ ಪ್ರತಿನಿತ್ಯ ಜಗಳ
ಚಿಕ್ಕಮಗಳೂರು(ಜ.12): ಕ್ಷುಲ್ಲಕ ಕಾರಣಕ್ಕೆ ಮಗನಿಂದಲೇ ತಂದೆಯ ಹತ್ಯೆ ನಡೆದಿದೆ. ಕಲ್ಲಿನಿಂದ ಜಜ್ಜಿ ತಂದೆಯನ್ನು ಮಗನೇ ಕೊಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ನಡೆದಿದೆ.
ತಮ್ಮಣ್ಣ (66) ಮೃತ ದುರ್ದೈವಿ. ಮಗ ಸತೀಶನಿಂದ ದುಷ್ಕೃತ್ಯ ನಡೆದಿದೆ. ಅಪ್ಪ, ಮಗನ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಬಾರಿ ಜಗಳ ವಿಕೋಪ ತಿರುಗಿ ಕೊಲೆಯಲ್ಲಿ ಕೊನೆಗೊಂಡಿದೆ.
ಸಂಗೊಳ್ಳಿ ರಾಯಣ್ಣ ಬಗ್ಗೆ ಅವಹೇಳನ ಮಾಡಿವದನ ವಿರುದ್ಧ ಕೇಸ್
ಟ್ರಾಕ್ಟರ್ ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದಿದ್ದು, ಬಂದಿದ್ದವರ ಬಗ್ಗೆ ತಂದೆ ಮಗನನ್ನು ಪ್ರಶ್ನಿಸಿದ್ದರು. ಇಬ್ಬರ ಸಂಭಾಷೆ, ವಾದ ವಿವಾದ ವಿಕೋಪದಕ್ಕೆ ತಿರುಗಿ ಜಗಳ ತಾರಕಕ್ಕೇರಿದೆ.
ಈ ಸಂದರ್ಭ ಪುತ್ರನೇ ಕಲ್ಲಿನಿಂದ ಜಜ್ಜಿ ಪ್ರಶ್ನೆ ಮಾಡಿದ ತಂದೆಯನ್ನು ಕೊಲೆ ಮಾಡಿದ್ದಾನೆ. ಸಖರಾಯಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.