
ಜಮಖಂಡಿ(ಸೆ.23): ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಆರು ಜನ ಅಂತರಾಜ್ಯ ಮಹಿಳೆಯರನ್ನು ಶಹರ ಠಾಣಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಡಪಟ್ಟಿ ಶ್ರೀದೊಡ್ಡ ಬಸವೇಶ್ವರ ಜಾತ್ರೆಯ ಪಲಕ್ಕಿ ಉತ್ಸವ ವಿಜೃಂಭನೆಯಿಂದ ನಡೆಯುವ ವೇಳೆ ಜಾತ್ರೆಗೆ ಬಂದ ಮಹಿಳೆಯರ ಕೊರಳಿನಲ್ಲಿನ ಚಿನ್ನಾಭರಣಗಳನ್ನು ಕದ್ದಿಯುತ್ತಿದ್ದ ಮಹಾರಾಷ್ಟ್ರದ ಸೊಲ್ಲಾಪೂರ ಮೂಲದ ಮಾಹಾದೇವಿ ವಿಲಾಸ ಜಾಧವ, ಸರಸ್ವತಿ ಸಂಜಯ ಗಾಯಕವಾಡ, ಉಷಾ ಕಿರಣ ಗಾಯಕವಾಡ, ಚಂದ್ರವ್ವ ಕಾಶಿನಾಥ ಗಾಯಕವಾಡ, ಕೇಶರ ಆನಂದ ಜಾಧವ, ಅರುಣಾ ಅಶೋಕ ಜಾಧವ ಬಂಧಿತ ಆರು ಜನ ಮಹಿಳೆಯರು ಜಾತ್ರೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಅವರನ್ನು ವಿಚಾರಿಸಿ, ಜಾತ್ರೆಗೆ ಬಂದ ಮಹಿಳೆಯರ ಮೈ ಮೇಲಿನ ಆಭರಣಗಳನ್ನು ಕಳ್ಳತನ ಮಾಡಲು ಬಂದಿರುವುದಾಗಿ ಹೇಳಿದ್ದಾರೆ.
ಜಮಖಂಡಿ: ಕಾರು-ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ
ಬಂಧಿತರಿಂದ ಅಂದಾಜು 2 ಲಕ್ಷ ರು, ಕಿಮತ್ತಿನ ಒಟ್ಟು 5 ತೋಲೆ ಬಂಗಾರದ ತಾಳಿಸರ ಹಾಗೂ ಬಂಗಾರದ ಅವಲಕ್ಕಿ ಸರವನ್ನು ಶಹರ ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆಂದು ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಅಮರನಾಥರೆಡ್ಡಿ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದ ಲ್ಲಿ ಮೂರು ತನಿಖಾ ತಂಡ ರಚಿಸಿದ ಎಸೈ ನಾಗರಾಜ ಚಿಲಾರೆ, ಕೆ.ಟಿ.ಮಾನೆ,ಗ್ರಾಮೀಣ ಠಾಣಿ ಎಸೈ ಮಹೇಶ ಸಂಖ, ಎಎಸ್‌ಐ ಎಚ್.ಎಸ್.ಮಂಡಗಾರ, ವೈ.ಬಿ.ಸೋಸರವಾಡ ಸಿಬ್ಬಂದಿ ಬಿ, ಎಂ, ಜಂಬಗಿ, ಎಸ್.ಎಚ್.ಕೋಟಿ, ಪಿ.ಎಚ್.ಘಾಟಗೆ, ಎಸ್.ಬಿ. ಹನ ಗಂಡಿ, ಬಾಹುಬಲ ಕುಸನಾಳೆ ಮಹಿಳಾ ಸಿಬ್ಬಂದ ಎಸ್.ಜಿ.ದೇಸಾಯಿ, ಎಸ್.ಎಲ್. ಪವಾರ ತನಿಖಾ ತಂಡದಲ್ಲಿದ್ದು,ಇವರ ಕಾರ್ಯವನ್ನು ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ