ಸಿಂಧನೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಬಂಧನ

By Ravi Janekal  |  First Published May 28, 2023, 11:39 AM IST

ಜಿಲ್ಲೆಯ ಸಿಂಧನೂರು ತಾಲೂಕಿನ ನಾಲ್ಕನೇ ಮೈಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 23 ರಂದು ನಡೆದಿದ್ದ ಪ್ರಕರಣ


ರಾಯಚೂರು (ಮೇ.27) : ಜಿಲ್ಲೆಯ ಸಿಂಧನೂರು ತಾಲೂಕಿನ ನಾಲ್ಕನೇ ಮೈಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 23 ರಂದು ನಡೆದಿದ್ದ ಪ್ರಕರಣ.ಅತ್ಯಾಚಾರ ನಡೆಸಿದ್ದ ನಾಲ್ಕು ಜನ ಆರೋಪಿಗಳಲ್ಲಿ ಓರ್ವನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು. ಸಂತ್ರಸ್ತೆಗೆ ಈ ಮೊದಲೇ ಪರಿಚಿತನಾಗಿದ್ದ ನಾಲ್ಕು ಮೈಲ್ ಮಾಳಪ್ಪ ಎಂಬುವವನೇ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ.

Latest Videos

undefined

11 ವರ್ಷದ ಬಾಲಕಿಯ ಮೇಲೆ ನಾಲ್ವರ ಅತ್ಯಾಚಾರ, ಕ್ಲಾಸ್‌ಮೇಟ್‌ ಕೂಡ ಭಾಗಿ!

 ಏಳುಮೈಲ್ ನಿವಾಸಿ ರುಕ್ಕಮ್ಮ(45) ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ವೇಳೆ ಕಿರುಚಾಡಿದ್ದಕ್ಕೆ ರುಕ್ಕಮ್ಮಳಿಗೆ ಮನಬಂದಂತೆ ಥಳಿಸಿದ್ದ ಮಾಳಪ್ಪ. ಕಾಲುವೆಯ ಸೇತುವೆಯಿಂದ ಕೆಳಗೆ ತಳ್ಳಿ ಗಂಭಿರ ಗಾಯಗೊಳಿಸಿ ಹಲ್ಲೆ ನಡೆಸಿದ್ದ ಕಿರಾತಕ. ಭೀಕರ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಗ್ಯಾಂಗ್. ಸ್ಥಳೀಯರು ರುಕ್ಕಮ್ಮಳನ್ನ ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು. ಸಾವಿಗೆ ಮುನ್ನ ಅತ್ಯಾಚಾರ ನಡೆಸಿದವರ ಮಾಹಿತಿ ನೀಡಿದ್ದ ರುಕ್ಕಮ್ಮ. ರುಕ್ಕಮ್ಮ ಹೇಳಿಕೆಯಿಂದಲೇ ಸಿಕ್ಕಿಬಿದ್ದ ಮಾಳಪ್ಪ. ಉಳಿದವರ ಪತ್ತೆ ತಂಡ ರಚಿಸಿರುವ ಪೊಲಿಸರು. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

ಅತ್ಯಾಚಾರ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಸಿಂಧನೂರು ತಾಲೂಕಿನ 4ನೇ ಮೈಲ್‌ ಕ್ಯಾಂಪ್‌ ಹೊರವಲಯದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ಘಟನೆ ಖಂಡನೀಯವಾಗಿದ್ದು, ಕೂಡಲೇ ಪೋಲಿಸರು ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಿಪಿಐ (ಎಂಎಲ್‌) ರೆಡ್‌ಸ್ಟಾರ್‌ ಪಕ್ಷ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್‌ ಒತ್ತಾಯಿಸಿದ್ದಾರೆ.

ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ

ಈ ಸಂಬಂಧ ಶನಿವಾರ ಹೇಳಿಕೆ ನೀಡಿರುವ ಅವರು, ಸಿಂಧನೂರಿನ ಏಳಮೈಲ್‌ ಕ್ಯಾಂಪಿನಲ್ಲಿ ವಾಸಿಸುತ್ತಿದ್ದ ಮಹಿಳೆ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ನಾಲ್ವರು ಕಾಮುಕ ಆರೋಪಿಗಳ ಪೈಕಿ, ಒಬ್ಬನನ್ನು ಪೊಲೀಸರು ಬಂಧಿಸಿದ್ದು ಉಳಿದ ಮೂರು ಜನರನ್ನು ತಕ್ಷಣ ಬಂಧಿಸಬೇಕು. ತಾಲೂಕಿನ ಅನತಿ ದೂರದಲ್ಲಿ ನಡೆದಿರುವ ಅತ್ಯಾಚಾರ ಕೊಲೆ ಘಟನೆ ಮಾನವ ಕುಲ ತಲೆ ತಗ್ಗಿಸುವಂತ ಘಟನೆಯಾಗಿದೆ. ತಪ್ಪಿತಸ್ಥರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಿ, ಸಾವಿಗೀಡಾದ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರ ರು.1 ಕೋಟಿ ಪರಿಹಾರ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

click me!