
"Justice delayed is justice denied" ಎಂದರೆ ವಿಳಂಬದ ನ್ಯಾಯದಿಂದ ನ್ಯಾಯಕ್ಕೆ ಅನ್ಯಾಯ ಮಾಡಿದಂತೆ ಎನ್ನುವ ಮಾತು ತಲೆತಲಾಂತರಗಳಿಂದಲೂ ಚಾಲ್ತಿಯಲ್ಲಿ ಇದೆ. ಆರೋಪಿಯೇ ತಾವು ಅಪರಾಧ ಮಾಡಿದ್ದನ್ನು ಒಪ್ಪಿಕೊಂಡರೂ ಕಾನೂನು ಕೇಳುವುದಿಲ್ಲ. ಏಕೆಂದರೆ ಕೆಲವೊಮ್ಮೆ ಯಾರದ್ದೋ ಪಿತೂರಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೋ ಆತ ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಇದು ಒಳ್ಳೆಯ ನಿಯಮವೇ. ಆದರೆ ಕೆಲವೊಂದು ಭಯಾನಕ, ಕ್ರೌರ್ಯ ಮೆರೆದ ಘಟನೆಗಳಲ್ಲಿಯೂ ಅಪರಾಧಿಗಳಿಗೆ ಬೇಗ ಶಿಕ್ಷೆಯಾಗುವುದೇ ಇಲ್ಲ. ಒಂದು ಕೋರ್ಟ್ನಿಂದ ಇನ್ನೊಂದು ಕೋರ್ಟ್, ಅಲ್ಲಿ ಒಂದಿಷ್ಟು ವರ್ಷ ವಿಚಾರಣೆ, ಸಂತ್ರಸ್ತರ ಕುಟುಂಬಗಳೂ ಪದೇ ಪದೇ ಕೋರ್ಟ್ಗೆ ಅಲೆಯುವ ಸ್ಥಿತಿ. ಆರೋಪಿಗಳ ಪರ ಸ್ಟ್ರಾಂಗ್ ವಕೀಲರಿಂದ ವಾದದ ಹಿನ್ನೆಲೆಯಲ್ಲಿ ಮತ್ತೊಂದಿಷ್ಟು ವಿಳಂಬ... ಹೀಗೆ ನಮ್ಮ ಇಡೀ ಕಾನೂನು ವ್ಯವಸ್ಥೆಯಿಂದಾಗಿ ಸೂಕ್ಷ್ಮಾತಿಸೂಕ್ಷ್ಮ ಪ್ರಕರಣಗಳು ದಶಕಗಳವರೆಗೆ ಕೋರ್ಟ್ನಲ್ಲಿ ಎಳೆದಾಡುತ್ತಾ ಸಾಗುವುದು ಇದೆ. ಅದಕ್ಕಿಂತಲೂ ಕ್ರೂರವಾದದ್ದು ಕೆಲವೊಂದು ರಾಕ್ಷಸೀಕೃತ್ಯ ಎಸಗಿದ ಆರೋಪಿಗಳಿಗೂ ಕೋರ್ಟ್ ಜಾಮೀನು ನೀಡುವುದು...
ಇದೀಗ ಅಂಥದ್ದೇ ಒಂದು ಘಟನೆ ಸಂಭವಿಸಿದೆ. ನಮ್ಮ ಕಾನೂನು ವ್ಯವಸ್ಥೆಯನ್ನೇ ಅಣಕಿಸುವ ರೀತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಮುಸ್ಲಿಂ ಪ್ರೇಮಿಯನ್ನು ನಂಬಿ ಆತನ ಜೊತೆ ಲಿವ್ ಇನ್ ರಿಲೇಷನ್ನಲ್ಲಿದ್ದ ಶ್ರದ್ಧಾ ವಾಕರ್ ಕಥೆಯಿದು. ಈತ ಈಕೆಯ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಜ್ನಲ್ಲಿ ತುಂಬಿಸಿ ಇಟ್ಟಿದ್ದ. ಈ ಘಟನೆ ಬೆಳಕಿಗೆ ಬಂದ ಬಳಿಕ ಇಡೀ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಸುದ್ದಿ ತಣ್ಣಗಾಯಿತು 2022ರಲ್ಲಿ ನಡೆದ ಈ ಘಟನೆಯಲ್ಲಿ ಪಾಪಿ ಅಫ್ತಾಬ್ ಪೂನಾವಾಲಾನಿಗೆ(ಸದ್ಯ ಈತ ಇನ್ನೂ ಆರೋಪಿಯಷ್ಟೇ) ಶಿಕ್ಷೆಯಾಗಿಲ್ಲ. ಶ್ರದ್ಧಾ ಪಾಲಕರಿಗೆ ಮಗಳ ಅಂತ್ಯಕ್ರಿಯೆ ಮಾಡಲು ಆಕೆಯ ಶವವೂ ಸಿಕ್ಕಿಲ್ಲ. ಅದಿನ್ನೂ ಪೊಲೀಸರ ವಶದಲ್ಲಿದೆ. ಸಾಲದು ಎನ್ನುವುದಕ್ಕೆ ವಿಚಾರಣೆಗೆ ಕೋರ್ಟ್ ಅಲೆದಾಟ! ಎರಡು ವರ್ಷ ಕಳೆದರೂ ತಮ್ಮ ಮಗಳ ಕೊಲೆಗಾರನಿಗೆ ಇನ್ನೂ ಶಿಕ್ಷೆ ಆಗದೇ ಇರುವುದು ಮಾತ್ರವಲ್ಲದೇ ಮಗಳ ದೇಹದ ಅಂತ್ಯಕ್ರಿಯೆ ಮಾಡಲು ಕೂಡ ಸಿಗದೇ ಇದ್ದರೆ ಅಂಥ ಅಪ್ಪ- ಅಮ್ಮನಿಗೆ ಅದ್ಯಾವ ಪರಿಯ ನೋವು ಆಗಿರಬೇಡ? ಇದೇ ಕೊರಗಿನಲ್ಲಿ ಶ್ರದ್ಧಾ ತಂದೆ ವಿಕಾಸ್ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ.
ಶ್ರೀದೇವಿ ಸಾವಿಗೆ 7 ವರ್ಷ: ಸ್ವಂತ ತಂಗಿಗೇ ನಟಿಯಿಂದ ಮೋಸ? ಅಂತ್ಯಕ್ರಿಯೆಗೆ ಗೈರಾಗಿದ್ದೇಕೆ? ಯಾರೀ ನಿಗೂಢ ಸಹೋದರಿ?
ಮಗಳ ಅಂತಿಮ ವಿಧಿವಿಧಾನವನ್ನು ನೆರವೇರಿಸಲು, ದೇಹದ ಉಳಿದ ಭಾಗಗಳನ್ನು ಪಡೆಯಲು ಅವರು ಕಾಯುತ್ತಿದ್ದರು. ಇದಕ್ಕಾಗಿ ಕೋರ್ಟ್, ಪೊಲೀಸ್ ಠಾಣೆ ಅಲೆದಾಡುತ್ತಿದ್ದರು. ಆದರೆ ಕೇಸ್ ಮುಗಿಯುವವರೆಗೂ ಸಾಕ್ಷ್ಯವಾಗಿರುವ ಅದನ್ನು ಕೊಡಲು ಆಗುತ್ತಿರಲಿಲ್ಲ. ಎರಡು ವರ್ಷ ಕಳೆದರೂ ಕೇಸ್ ಮುಗಿಯುವ ಹಂತಕ್ಕೆ ಬರಲಿಲ್ಲ. ಹೀಗಾಗಿ ತುಂಬಾ ಕುಗ್ಗಿಹೋಗಿದ್ದರು. ಇದೇ ನೋವಿನಲ್ಲಿದ್ದ ಅವರುಮ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ ಲವ್ ಜಿಹಾದ್ ಎಂದೇ ಫೇಮಸ್ ಆಗಿದೆ.
ಅಂದಹಾಗೆ, ಶ್ರದ್ಧಾ ವಾಕರ್ ಕೊಲೆ ನಡೆದದ್ದು 2022ರ ನವೆಂಬರ್ 12ರಂದು. ಮೆಹ್ರೌಲಿಯಲ್ಲಿ ಆಕೆಯ ಸ್ನೇಹಿತ ಅಫ್ತಾಬ್ ದೇಹದ ಭಾಗಗಳನ್ನು ವಿಲೇವಾರಿ ಮಾಡುವಾಗ ಸಿಕ್ಕಿಬಿದಿದ್ದ. ಪೊಲೀಸರು ಅರೆಸ್ಟ್ ಮಾಡಿದ್ದಾಗ ಸತ್ಯವನ್ನೂ ಒಪ್ಪಿಕೊಂಡಿದ್ದ. ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಮೆಹ್ರೌಲಿಯ ಕಾಡಿನಲ್ಲಿ ಎಸೆದಿದ್ದ ಬಗ್ಗೆಯೂ ಬಾಯಿ ಬಿಟ್ಟಿದ್ದ. ಆದರೆ ಪೊಲೀಸರಿಗೆ ಶ್ರದ್ಧಾಳ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದವು. ಡಿಎನ್ಎ ಪರೀಕ್ಷೆಯ ನಂತರ, ಅದು ಅವಳದೇ ಎಂದು ಸಾಬೀತಾಗಿತ್ತು. ಮತ್ತೆ ಕೆಲವು ಭಾಗ ಸಿಕ್ಕಿರಲಿಲ್ಲ. ಶ್ರದ್ಧಾ ತಂದೆ ವಿಕಾಸ್ ಅವರು ಮಗನ ವಸೈನಲ್ಲಿ ವಾಸಿಸುತ್ತಿದ್ದರು. ಮಗಳ ಸಾವಿನಿಂದ ನೊಂದಿದ್ದ ಅವರು, ವಿಚಾರಣೆಯಿಂದಲೂ ನೊಂದುಕೊಂಡಿದ್ದರು ಎನ್ನಲಾಗಿದೆ.
ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ