ಎಟಿಎಂ ಹಣ ಕದ್ದರು, ಹಂಚಿಕೊಳ್ಳುವಾಗ ಜಗಳವಾಡಿ ಸಿಕ್ಕಿಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್!

Published : Feb 08, 2025, 07:22 AM IST
ಎಟಿಎಂ ಹಣ ಕದ್ದರು, ಹಂಚಿಕೊಳ್ಳುವಾಗ ಜಗಳವಾಡಿ ಸಿಕ್ಕಿಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್!

ಸಾರಾಂಶ

ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಹಣ ಎಗರಿಸುತ್ತಿದ್ದ ಏಜೆನ್ಸಿಯ ಮೂವರು ನೌಕರರು ಸೇರಿ ಆರು ಮಂದಿ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್ ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಫೆ.08): ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಹಣ ಎಗರಿಸುತ್ತಿದ್ದ ಏಜೆನ್ಸಿಯ ಮೂವರು ನೌಕರರು ಸೇರಿ ಆರು ಮಂದಿ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್ ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದಿನಿ ಲೇಔಟ್ ನಿವಾಸಿಗಳಾದ ಸಮೀರ್ (26), ಮನೋಹರ(29), ಗಿರೀಶ್(26), ಜಗ್ಗೇಶ್(28), ಶಿವು(27) ಮತ್ತು ಜಶ್ವಂತ್‌(27) ಬಂಧಿತರು. ಆರೋಪಿಗಳಿಂದ ₹51.76 ಲಕ್ಷ ನಗದು ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಜ.25ರಂದು ಮಹಾಲಕ್ಷ್ಮೀ ಲೇಔಟ್‌ನ ಕೆಂಪೇಗೌಡ ಲೇಔಟ್‌ನ ಸರ್ವಿಸ್‌ ರಸ್ತೆಯ ಟೀ ಅಂಗಡಿಯಲ್ಲಿ ಕದ್ದ ಹಣ ಹಂಚಿಕೊಳ್ಳುವ ವಿಚಾರ ಸಂಬಂಧ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಟಿಎಂ ಯಂತ್ರಗಳಲ್ಲಿ ಹಣ ಕಳವು ಮಾಡಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ತ ಕೈಕೊಟ್ಟ ತೊಗರಿ, ಇತ್ತ ಫೈನಾನ್ಸ್ ಕಾಟ, ವಿಜಯಪುರದಲ್ಲಿ ಪ್ರಾಣ ಬಿಟ್ಟ ರೈತ!

ಏನಿದು ಪ್ರಕರಣ?: ಬಂಧಿತ ಆರು ಮಂದಿ ಆರೋಪಿಗಳ ಪೈಕಿ ಜಗ್ಗೇಶ್‌, ಮನೋಹರ್‌ ಮತ್ತು ಗಿರೀಶ್‌ ಸೆಕ್ಯೂರ್‌ ವ್ಯಾಲ್ಯೂ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಕ್ಯಾಶ್‌ ಲೋಡರ್‌ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ಸಮೀರ್‌ ಮತ್ತು ಜಶ್ವಂತ್‌ ಕಳೆದ ಒಂದು ವರ್ಷದ ಹಿಂದೆ ಈ ಕಂಪನಿಯ ಕೆಲಸ ಬಿಟ್ಟಿದ್ದು, ಬೇರೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ಸಮೀರ್‌ನ ಸ್ನೇಹಿತನಾಗಿರುವ ಆರೋಪಿ ಶಿವು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸೆಕ್ಯೂರ್‌ ವ್ಯಾಲ್ಯೂ ಕಂಪನಿಯಲ್ಲಿ ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬುವುದು ಹಾಗೂ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು. ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸಂಚು ರೂಪಿಸಿ ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಶೇ.70ರಷ್ಟು ಹಣವನ್ನು ಮಾತ್ರ ತುಂಬಿ ಉಳಿದ ಶೇ.30ರಷ್ಟು ಹಣ ತುಂಬದೆ ಕಳವು ಮಾಡುತ್ತಿದ್ದರು. ಎಟಿಎಂ ಯಂತ್ರಗಳ ರಿಪೇರಿ ಕೆಲಸಕ್ಕೆ ಹೋದಾಗಲೂ ಪಾಸ್‌ವರ್ಡ್‌ ಪಡೆದು ಆ ಎಟಿಎಂ ಯಂತ್ರದಲ್ಲಿನ ಹಣ ಪೈಕಿ ಸ್ವಲ್ಪ ಹಣ ಎಗರಿಸುತ್ತಿದ್ದರು.

ಆಡಿಟಿಂಗ್‌ನಲ್ಲಿ ಸಿಕ್ಕಿ ಬೀಳದಂತೆ ವಂಚನೆ: ಕಂಪನಿ ಎಟಿಎಂ ಕೇಂದ್ರಗಳಲ್ಲಿರುವ ಹಣ ಆಡಿಟಿಂಗ್‌ ಮಾಡುವ ವಿಚಾರ ತಿಳಿದುಕೊಳ್ಳುತ್ತಿದ್ದ ಆರೋಪಿಗಳು, ಕಂಪನಿ ಯಾವ ಎಟಿಎಂ ಕೇಂದ್ರಗಳಲ್ಲಿ ಆಡಿಟಿಂಗ್‌ ಮಾಡುವುದಿಲ್ಲವೋ ಆ ಎಟಿಎಂ ಕೇಂದ್ರಗಳಿಂದ ಹಣ ತೆಗೆದು ಆಡಿಟಿಂಗ್‌ ನಡೆಸುವ ಎಟಿಎಂ ಕೇಂದ್ರಗಳಿಗೆ ಹಣ ತುಂಬುತ್ತಿದ್ದರು. ಕಳೆದ ಆರು ತಿಂಗಳಿಂದ ಆರೋಪಿಗಳು ಆಡಿಟಿಂಗ್‌ ವೇಳೆಯೂ ಸಿಕ್ಕಿ ಬೀಳದಂತೆ ನೋಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಗೋವಾದಲ್ಲಿ ಮೋಜು-ಮಸ್ತಿ: ಆರೋಪಿಗಳು ಈವರೆಗೆ ಎಷ್ಟು ಹಣ ವಂಚಿಸಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಕಳೆದ ಆರು ತಿಂಗಳಿಂದ ಸುಮಾರು ₹1 ಕೋಟಿವರೆಗೂ ವಂಚಿಸಿರುವ ಸಾಧ್ಯತೆಯಿದೆ. ಎಟಿಎಂ ಯಂತ್ರಗಳಲ್ಲಿ ಕಳವು ಮಾಡುತ್ತಿದ್ದ ಹಣದಲ್ಲಿ ಆರೋಪಿಗಳು ಗೋವಾಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ಕ್ಯಾಸಿನೋಗಳಲ್ಲಿ ಜೂಜಾಡಿದ್ದಾರೆ. ಯುವತಿಯರ ಜತೆಗೆ ಸೇರಿಕೊಂಡು ಮೋಜು-ಮಸ್ತಿ ಮಾಡಿ ಹಣ ವ್ಯಯಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಗೌರ್ನರ್‌ಗೆ ಸುಗ್ರೀವಾಜ್ಞೆ ಮತ್ತೆ ಕಳಿಸಲು ಸಿದ್ಧತೆ: ರಾಜ್ಯ ಸರ್ಕಾರ ನಿರ್ಧಾರ

ಮೂರು ಕಾರು ಖರೀದಿ!: ಮೂವರು ಆರೋಪಿಗಳು ಈ ಹಣ ಬಳಸಿ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಮೂರು ಕಾರುಗಳನ್ನು ಖರೀದಿಸಿದ್ದರು. ಉಳಿದ ಆರೋಪಿಗಳು ಸಾಲ ತೀರಿಸಿದ್ದರು. ಸದ್ಯ ಆ ಮೂರು ಕಾರುಗಳನ್ನೂ ಜಪ್ತಿ ಮಾಡಲಾಗಿದೆ. ಆರೋಪಿ ಜಶ್ವಂತ್‌ ಮನೆಯಲ್ಲಿ ಇರಿಸಿದ್ದ ₹8 ಲಕ್ಷ ವಶಕ್ಕೆ ಪಡೆಯಲಾಗಿದೆ. ಟೀ ಅಂಗಡಿ ಬಳಿ ಗಲಾಟೆ ಮಾಡಿಕೊಳ್ಳುವಾಗ ಕಾರಿನೊಳಗೆ ಇರಿಸಿಕೊಂಡಿದ್ದ ₹43.76 ಲಕ್ಷ ಸೇರಿದಂತೆ ಒಟ್ಟು ₹51.76 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ