'ರೋಡಲ್ಲೇ ಪ್ಯಾಂಟ್‌ ಬಿಚ್ಚಿ ಛೀ ಅಸಹ್ಯ.. ದಿನಾ ನರಕ' ಮೈಸೂರು ಹುಡುಗಿಯ ಆರ್ತನಾದ

By Suvarna News  |  First Published Mar 2, 2021, 3:36 PM IST

ಮೈಸೂರು ಹಾಸ್ಟೆಕ್ ಹುಡುಗಿಯರಿಗೆ ಲೈಂಗಿಕ ದೌರ್ಜನ್ಯ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸಂದೇಶ/ ಸಂಬಂಧಿಸಿದವರು ಗಮನ ನೀಡಲೇಬೇಕು/ ಪುಂಡರ್ ತಂಡಕ್ಕೆ ಬ್ರೇಕ್ ಹಾಕಲೇಬೇಕು


ಮೈಸೂರು(ಮಾ. 02)  'ಹಾಯ್ ಅಣ್ಣ,,ನಾನು ಯುವರಾಜ್ ಗರ್ಲ್ಸ್ ಹಾಸ್ಟೇಲ್ ಹುಡುಗಿ, ಇದು ನನ್ನ ಅಣ್ಣನ ಅಕೌಂಟ್..ಅಣ್ಣ ಡೇಲಿ ನಾವು ಓಡಾಡುವಾಗ ನಮ್ಮ ಹಾಸ್ಟೇಲ್ ಸುತ್ತ ಮುತ್ತ ರೋಡ್ ನಲ್ಲಿ ಮಹಾರಾಜಾ  ಗ್ರೌಂಡ್ ನಲ್ಲಿ ಹುಡುಗರು ತುಂಬಾ ಮಿಸ್ ಬಿಹೇವ್ ಮಾಡ್ತಿದ್ದಾರೆ. ಅಣ್ಣ ಇವತ್ತು ನಾನು ನನ್ನ  4  ಜನ ಫ್ರೆಂಡ್ಸ್ ಬರ್ತಾ ಇದ್ವಿ.. ರೋಡಲ್ಲೆ ಪ್ಯಾಂಟ್ ಬಿಚ್ಚಿ ಅಸಹ್ಯವಾಗಿ... ಅಣ್ಣ ಹೇಳೋದಕ್ಕೆ ಸಂಕೋಚ ಆಗುತ್ತಿದೆ.

ಅಣ್ಣ ಇದರ ಬಗ್ಗೆ ಯಾರಿಗೆ ಹೇಳಿದರೆ ಸರಿ ಆಗುತ್ತದೆಯೋ ಗೊತ್ತಿಲ್ಲ. ನೀವಾದರೂ ಇದರ ಬಗ್ಗೆ ವೈಸ್ ರೈಸ್ ಮಾಡಿ.. ಅಣ್ಣ ದಿನಾ ಓಡಾಡೋದಕ್ಕೆ ನರಕ ಅನಿಸುತ್ತಿದೆ. ಮೇನೆಯಲ್ಲೂ ಹೇಳೋದಕ್ಕೆ ಆಗಲ್ಲ. ಓದೋದಕ್ಕೆ ಅಂತ ಬಂದು ಇಲ್ಲಿ ಸಿಕ್ಕಾಕಿಕೊಂಡು ಅನುಭವಿಸುವಂತೆ ಆಗಿದೆ. ಊಟಾನೂ ಮಾಡೋಕೆ ಆಗ್ತಿಲ್ಲ. ಅಣ್ಣಾ ನೆನೆಸಿಕೊಂಡ್ರೆ ಭಯ ಆಗುತ್ತೆ.,..ಪ್ಲೀಸ್ ಹೆಲ್ಪ್ ಅಸ್' 

Tap to resize

Latest Videos

17  ವರ್ಷದ  ಬಾಲಕನೊಂದಿಗೆ 27 ವರ್ಷದ ಗಣಿತ ಶಿಕ್ಷಕಿ ಸೆಕ್ಸ್.. ಕೊನೆಗೂ ಜಾಮೀನು

ಸೋಶಿಯಲ್  ಮೀಡಿಯಾದಲ್ಲಿ ಇಂಥದ್ದೊಂದು ಸಂದೇಶ ಹರಿದಾಡುತ್ತಿದೆ.  ಕೊಡಗು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೂ ಈ ಕಮೆಂಟ್ ತರಲಾಗಿದೆ. ನೊಂದ ಯುವತಿಯೊಬ್ಬಳು ತನ್ನ ಆತಂಕವನ್ನು ತೋಡಿಕೊಂಡಿರುವ ಸಂದೇಶ ಇದೆ.

ಮೈಸೂರಿನ ಯುವರಾಜ ಹಾಸ್ಟೇಲ್ ಹುಡುಗಿಯರಿಗೆ ಪುಂಡರ ತಂಡ ಲೈಂಗಿಕ ದೌರ್ಜನ್ಯ ನೀಡುತ್ತಿದ್ದು  ಈ ಬಗ್ಗೆ ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವತಿ ಆತಂಕ ತೋಡಿಕೊಂಡಿದ್ದು ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಅರಿಯುವ ಕೆಲಸ ಆಗಬೇಕಿದೆ . 

 

 

 

Posted by on Monday, 1 March 2021
click me!