ಹಾಸನ ಸ್ಥಳ ಮಹಜರು ವೇಳೆ ಒಂದೇ ಒಂದು ಅವಕಾಶ ಮಾಡಿ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!

By Gowthami K  |  First Published Jun 21, 2024, 7:44 PM IST

ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಪ್ರಜ್ವಲ್‌ ರೇವಣ್ಣನನ್ನು ಹಾಸನಕ್ಕೆ ಕರೆದೊಯ್ದು ವೇಳೆ  ಪೊಲೀಸರ ಬಳಿ ಬೇಡಿಕೆ ಇಟ್ಟ ಘಟನೆ ನಡೆದಿದೆ.


ಹಾಸನ (ಜೂ.21): ಅತ್ಯಾಚಾರ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಪೊಲೀಸರು ಹಾಸನಕ್ಕೆ ಕರೆದೊಯ್ದು ಸ್ಥಳ ಮಹಜರ್ ನಡೆಸಿದರು.  ಈ  ವೇಳೆ ಪ್ರಜ್ವಲ್  ಅಧಿಕಾರಿಗಳೆದುರು ಒಂದು ಬೇಡಿಕೆ ಇಟ್ಟರು.  ಮಾಧ್ಯಮಗಳಿಗೆ ಹೇಳಿಕೆ ನೀಡಲು ಒಂದು ಅವಕಾಶ ಮಾಡಿ ಕೊಡಿ ಎಂದು  ಪ್ರಜ್ವಲ್ ರೇವಣ್ಣ  ಮನವಿ ಮಾಡಿಕೊಂಡರು.

ವಿಚ್ಚೇದನ ಪಡೆದು 7ವರ್ಷ ದೂರಾಗಿ ಮರುಮದುವೆಯಾದ ಖ್ಯಾತ ನಿರ್ಮಾಪಕ, ಈಗ ಪತ್ನಿ ಸೌಂದರ್ಯ ಸ್ಪರ್ಧೆ ವಿಚೇತೆ!

Tap to resize

Latest Videos

undefined

ಒಂದು ನಿಮಿಷ ಸಮಯ ಕೊಡಿ ಮೀಡಿಯಾ ಜೊತೆ ಮಾತಾಡಿ ಬರ್ತೆನೆ ಎಂದು ಸಂಸದರ ನಿವಾಸದಿಂದ ಹೊರ ಬರಲು ಯತ್ನಿಸಿದ್ದರಂತೆ, ಈ ಬೇಡಿಕೆಗೆ ಎಸ್ ಐ ಟಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ನೀವು ಆರೋಪಿ ಯಾವುದೇ ಕಾರಣದಿಂದ ಮಾಧ್ಯಮಗಳ ಎದುರು ಹೋಗೋ ಹಾಗಿಲ್ಲ ಎಂದು ತಡೆದರು

ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಮೇಲಿನ ಆರೋಪ ಸುಳ್ಳು  ಎಂದು , ಮಾಧ್ಯಮಗಳ ಎದುರು ಮಾತನಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಪ್ರಜ್ವಲ್ ರನ್ನ ಕವರ್ ಮಾಡಿ ಪೊಲೀಸರು ಜೀಪ್ ಹತ್ತಿಸಿದರು. ಸ್ಥಳ ಮಹಜರು ನಡೆಸಿದ  ಬಳಿಕ ಈ ಘಟನೆ ನಡೆದಿದ್ದು, ಪೊಲೀಸರ ಸರ್ಪಗಾವಲಿನಲ್ಲಿ  ಪೋಲೀಸರು ಕರೆದೊಯ್ದರು.

ಅಂಬಾನಿ ಕುಟುಂಬದ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ಗಳನ್ನು ಕರೆಯುವುದಿಲ್ಲವೇ!?

ಸ್ಥಳ ಮಹಜರು ಎಲ್ಲಿ ನಡೆಯಿತು?
ಹಾಸನದ ಆರ್.ಸಿ ರಸ್ತೆಯ ಸಂಸದರ ನಿವಾಸದಲ್ಲಿ ಸ್ಥಳ ಮಹಜರು ನಡೆಸಲಾಯಿತು. ಸಂತ್ರಸ್ತೆ ನೀಡಿದ ದೂರಿನಲ್ಲಿ ಸಂಸದರ ನಿವಾಸದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು  ಎಂದು ಉಲ್ಲೇಖವಿದೆ. ಸುಮಾರು 4 ಗಂಟೆಗಳ ಕಾಲ ಸ್ಥಳ ಮಹಜರು ನಡೆದಿದೆ. ಎಸ್‌ಐಟಿ ಅಧಿಕಾರಿಗಳ ಜೊತೆ ಎಫ್‌ಎಸ್‌ಎಲ್ ತಂಡ ಕೂಡ ಸ್ಥಳ ಮಹಜರು ವೇಳೆ ಇದ್ದರು. ಮಧ್ಯಾಹ್ನ 12 ಗಂಟೆಗೆ ಕರೆತಂದಿದ್ದ ಎಸ್ ಐ ಟಿ  ತಂಡ ಸುದೀರ್ಫ ನಾಲ್ಕು ಗಂಟೆಗಳ ಮಹಜರು ಬಳಿಕ ಪಂಚರ ಸಮ್ಮುಖದಲ್ಲಿ ಮಾಹಿತಿ ರೆಕಾರ್ಡ್ ಮಾಡಿ, ಮತ್ತೆ ಬೆಂಗಳೂರಿನತ್ತ ಹೊರಟರು. 

click me!