
ಬೆಂಗಳೂರು(ಫೆ.20): ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವೃದ್ಧನೊಬ್ಬನ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ. 35 ವರ್ಷದ ಎನ್‌ಆರ್ ಕಾಲೋನಿ ನಿವಾಸಿ, ಪ್ರಾಂಶುಪಾಲೆ ನೀಡಿದ ದೂರಿನ ಆಧಾರದ ಮೇಲೆ ಮೋಹನ್ ರಾವ್ (67) ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬಸವನಗುಡಿಯ ಕ್ಲಬ್‌ವೊಂದರಲ್ಲಿ ಪ್ರಾಂಶುಪಾಲೆ ಕಳೆದ 10 ವರ್ಷಗಳಿಂದ ಸದಸ್ಯರಾಗಿದ್ದರು. ಪತಿಯ ಜತೆ ಕೆಲವೊಮ್ಮೆ ಕ್ಲಬ್‌ಗೆ ಹೋಗುತ್ತಿದ್ದರು. ಫೆ.6ರಂದು ಸಂಜೆ 6.30ರಲ್ಲಿ ಪತಿಯೊಂದಿಗೆ ಪ್ರಾಂಶುಪಾಲೆ ಕ್ಲಬ್‌ಗೆ ಬಂದಿದ್ದರು. ಅ ವೇಳೆ ಪ್ರಾಂಶುಪಾಲೆಯ ಸ್ನೇಹಿತರು ಕ್ಲಬ್‌ಗೆ ಬಂದು ತಮಗೆ ಬೇಕಾದ ಪದಾರ್ಥಗಳನ್ನು ಆರ್ಡರ್ ಮಾಡುತ್ತಿದ್ದಾಗ ಆರೋಪಿ ಮೋಹನ್ ರಾವ್ ಇವರ ಬಳಿ ಬಂದು ಮಾತನಾಡಿಸಿ ಹೋಗಿದ್ದ. ನಂತರ ಪ್ರಾಂಶುಪಾಲೆ ವಾಷ್ ರೂಂಗೆ ಹೋಗುತ್ತಿದ್ದಾಗ ಅಡ್ಡಗಟ್ಟಿದ ಮೋಹನ್ ರಾವ್, ನಾನು ಹೇಗೆ ಕಾಣಿಸುತ್ತೇನೆ ಎಂದು ಕೇಳಿದ್ದ. ನಂತರ ಪ್ರಾಂಶುಪಾಲೆ ಜತೆ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಇದರಿಂದ ಆತಂಕಗೊಂಡ ಪ್ರಾಂಶುಪಾಲೆ ಸ್ನೇಹಿತರ ಬಳಿ ಹೋಗಿದ್ದರು.
ಕಾಮುಕ 'ಫಾದರ್' ಕಲಬುರಗಿ ಹೆಣ್ಣು ಬಾಕನ ಕೋಣೆ ಕಾಮದಾಟ!
ಇದಾದ ಕೆಲ ಸಮಯದ ನಂತರ ಮತ್ತೆ ವಾಶ್ ರೂಂಗೆ ಬಂದಾಗ ಆರೋಪಿ ಮತ್ತೆ ಅಶ್ಲೀಲವಾಗಿ ವರ್ತಿಸಿದ್ದ. ಇದರಿಂದ ನೊಂದ ಪ್ರಾಂಶುಪಾಲೆ ಬಸವನಗುಡಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ