
ಒರಿಸ್ಸಾ(ಫೆ. 19) ಅಂತೂ ಇಂತೂ ಮದುವೆಗೆ ಯೋಗ ಕೂಡಿ ಬಂದಿತ್ತು. ಆದರೆ ವರನ ಅದೃಷ್ಟ ಸರಿ ಇರಲಿಲ್ಲ. ಹಸೆಮಣೆ ಏರಬೇಕಿದ್ದ ಹುಡುಗಿ ತನ್ನ ಬಾಯ್ ಫ್ರೆಂಡ್ ಜತೆ ಓಡಿಹೋಗಿದ್ದಳು. ಹೆಣ್ಣಿನ ಮನೆಯವರು ತಮ್ಮ ಮರ್ಯಾದಿ ಹೋಗುತ್ತದೆ ಎಂದು ಅಕ್ಕನ ಬದಲು ತಂಗಿ ಕೊಟ್ಟು ಮದುವೆ ಮಾಡಿದ್ದರು.
ಆದರೆ ಈ ವಿಚಿತ್ರ ಪ್ರಕರಣ ಇಲ್ಲಿಗೆ ಅಂತ್ಯವಾಗಲಿಲ್ಲ. ಒರಿಸ್ಸಾದ ಕಾಳಹಂಡಿ ಜಿಲ್ಲೆಯ ಮದುವೆ ವರನ ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ. ಮಾಲ್ಪಡ ಗ್ರಾಮದ ಯುವತಿ ಮದುವೆಗೆ ಕೆಲವೇ ಕ್ಷಣಗಳಿದ್ದಾಗ ಬಾಯ್ ಫ್ರೆಂಡ್ ಜತೆ ಓಡಿಹೋಗಿದ್ದಾಳೆ. ಇನ್ನೇನು ಮಾಡುವುದು ಎಂದು ಆಕೆಯ 15 ವರ್ಷದ ತಂಗಿ ಕಿರಿಮಗಳನ್ನು ಕೊಟ್ಟು ಮದುವೆ ಮಾಡಲಾಗಿದೆ.
ಹಾಸನ; ಮ್ಯಾಟ್ರಿಮೋನಿ ಹುಷಾರು..ಮದುವೆಯಾಗುವುದಾಗಿ ಉಂಡು ಹೋದ..ಕೊಂಡು ಹೋದ!
ಮದುವೆ ಮಾಡಿಕೊಂಡ ಸಮಾಧಾನದಿಂದ ಮನೆಗೆ ತೆರಳಿದ ವರನಿಗೆ ಅಸಲಿ ಶಾಕ್ ಈಗ ಎದುರಾಗಿದೆ. ಮೊದಲ ರಾತ್ರಿಯ ಸಿದ್ಧತೆಯಲ್ಲಿದ್ದಾಗ ಮನೆಗೆ ಅಧಿಕಾರಿಗಳ ದಂಡು ಬಂದಿದೆ. ಹುಡುಗಿಗೆ ಹದಿನೈದು ವರ್ಷವಾಗಿರುವ ಕಾರಣ ಮದುವೆ ಮಾಡಲು ಸಿದ್ಧವಿಲ್ಲ. ಇದು ಬಾಲ್ಯ ವಿವಾಹ ಎಂದಾಗುತ್ತದೆ ಎಂದಿರುವ ಅಧಿಕಾರಿಗಳು ಮದುವೆ ರದ್ದು ಮಾಡಿ ಬಾಲಕಿಯನ್ನು ವಾಪಸ್ ತವರು ಮನೆಗೆ ಕಳಿಸಿದ್ದಾರೆ.
ಎರಡು ಕುಟುಂಬಕ್ಕೂ ಬಾಲ್ಯವಿವಾಹ ಕಾನೂನು ಬಾಹಿರ ಎಂಬ ಸಂಗತಿ ಗೊತ್ತಿರಲಿಲ್ಲ ಎಂದಿರುವ ಅಧಿಕಾರಿಗಳು ತಿಳಿವಳಿಕೆ ನೀಡಿದ್ದು ಕೌನ್ಸೆಲಿಂಗ್ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ