ಯುವತಿ ಪೋಷಕರಿಂದ ಹೈಕೋರ್ಟ್‌ಗೆ ಅರ್ಜಿ ಮತ್ತೊಂದು ಟ್ವಿಸ್ಟ್‌ ಶುರು

By Suvarna NewsFirst Published Mar 31, 2021, 10:16 PM IST
Highlights

ಸಿಡಿ ಸ್ಫೋಟ ಕೇಸ್ ನಲ್ಲಿ ಮತ್ತೊಂದು ಅರ್ಜಿ/ ಯುವತಿ ಪೋಷಕರಿಂದ ಹೈ ಕೋರ್ಟ್ ಗೆ ಮೊರೆ/  ನಮ್ಮ ಮಗಳು ಒತ್ತಡಲ್ಲಿ ಹೇಳಿಕೆ ನೀಡಿದ್ದಾರೆ/  ಹೇಳಿಕೆ ಪ್ರತಿಯನ್ನು ನಮಗೆ ನೀಡಬೇಕು

ಬೆಂಗಳೂರು (ಮಾ​ 31) ಒಂದು ಕಡೆ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿ ನಂತರ ವೈದ್ಯಕೀಯ ಪರೀಕ್ಷೆಗೂ ಒಳಗಾಗಿದ್ದಾರೆ.  ಆದರೆ ಇನ್ನೊಂದು ಕಡೆ ಯುವತಿಯ ಪೋಷಕರು ಮಗಳು ಒತ್ತಡಲ್ಲಿ ಇದ್ದಾಳೆ ಎಂದು ಹೇಳಿದ್ದಾರೆ.

ಕೋರ್ಟ್​ ಮೆಟ್ಟಿಲೇರಿರುವ ಯುವತಿಯ ಪೋಷಕರು,  ಮಗಳು ಸ್ಚ ಇಚ್ಚೆಯಿಂದ ಹೇಳಿಕೆ ನೀಡಿಲ್ಲ. ಒತ್ತಡ ಮತ್ತು ಬಲವಂತದಿಂದ ಹೇಳಿಕೆ ಕೊಟ್ಟಿರೋ ಸಾಧ್ಯತೆ ಇದೆ. ಹೀಗಾಗಿ ಈ ಹೇಳಿಕೆಯನ್ನು ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಂತ್ರಸ್ತೆಯ ಮೆಡಿಕಲ್ ಚೆಕ್ ಅಪ್ ಹೇಗೆ ನಡೆಯುತ್ತದೆ?

ಮಗಳು ನೀಡಿರುವ 164 ಸೇಳಿಕೆಯನ್ನ ಪರಿಗಣಿಸದಂತೆ ಹೈಕೋ ರ್ಟ್ ಗೆ  ಅರ್ಜಿ ಹಾಕಿದ್ದಾರೆ.   164 ಹೇಳಿಕೆ ಕಾಂಗ್ರೆಸ್ ಸದಸ್ಯನ ಉಪಸ್ಥಿತಿ ಪ್ರಶ್ನಿಸಿರುವ ಯುವತಿಯ ತಂದೆ ವೈದ್ಯಕೀಯ ಪರೀಕ್ಷೆಗೂ ಮುನ್ನ 164 ಹೇಳಿಕೆ ಪಡೆಯುವುದು ಕಾನೂನುಬಾಹಿರ . ನನ್ನ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. . ಸಿಡಿ ನಕಲಿ, ಒತ್ತಡದಲ್ಲಿ ಇದ್ದೇನೆ ಎಂದು ಪೋನ್‌ ನಲ್ಲಿ ನಮ್ಮ ಜೊತೆ ಮಾತನಾಡಿದ್ದಾಳೆ.  ಇಂಥ ಸಂದರ್ಭದಲ್ಲಿ ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಮೂರನೇ ವ್ಯಕ್ತಿಯ ಸಮ್ಮುಖದಲ್ಲಿ 164 ಹೇಳಿಕೆಯನ್ನ ಪಡೆದಿರುವುದು ಸರಿಯಲ್ಲ. ನಮ್ಮ ಮಗಳು ಒತ್ತಡ ಹಾಗೂ ಬಲವಂತದಿಂದ ಹೇಳಿಕೆಯನ್ನು ನೀಡಿದ್ದಾಳೆ. 164 ಹೇಳಿಯ ವಿಡಿಯೋ ಪ್ರತಿಯನ್ನು  ತಮಗೆ ನೀಡಬೇಕು ಎಂದು ತಂದೆ ಮನವಿ ಮಾಡಿಕೊಂಡಿದ್ದು ರಾಜಕೀಯ  ಉದ್ದೇಶದಕ್ಕೆ ಬಲಿಪಶು ಆಗುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 

click me!