ಕನ್ನಡದ ಹಿರಿಯ ಕಲಾವಿದ ರವಿಕಿರಣ್‌ಗೆ ಗುರೂಜಿಯಿಂದ 4 ಲಕ್ಷ ರೂ ವಂಚನೆ!

Published : Dec 18, 2023, 12:03 PM IST
ಕನ್ನಡದ ಹಿರಿಯ ಕಲಾವಿದ ರವಿಕಿರಣ್‌ಗೆ ಗುರೂಜಿಯಿಂದ 4 ಲಕ್ಷ ರೂ ವಂಚನೆ!

ಸಾರಾಂಶ

ಕನ್ನಡ ಚಲನಚಿತ್ರ ಮತ್ತು ಕಿರುತೆರೆಯ ಜನಪ್ರಿಯ  ನಟ ಕಮ್-ನಿರ್ದೇಶಕ ಪಿ ರವಿಕಿರಣ್  ಅವರಿಗೆ ನವೀನ್ ಭಾಗ್ಯಶ್ರೀ ಗುರೂಜಿ 4 ಲಕ್ಷಕ್ಕೂ ಹೆಚ್ಚು ರೂ ವಂಚಿಸಿದ ಘಟನೆ ನಡೆದಿದೆ.  

ಬೆಂಗಳೂರು (ಡಿ.18): ಕನ್ನಡ ಚಲನಚಿತ್ರ ಮತ್ತು ಕಿರುತೆರೆಯ ಜನಪ್ರಿಯ  ನಟ ಕಮ್-ನಿರ್ದೇಶಕ ಪಿ ರವಿಕಿರಣ್  ಅವರಿಗೆ 4 ಲಕ್ಷಕ್ಕೂ ಹೆಚ್ಚು ರೂ ವಂಚಿಸಿದ ಘಟನೆ ನಡೆದಿದೆ.  ದುಬೈ ಟಿಕೆಟ್ ಹಾಗೂ ಗೋಲ್ಡ್ ಆಸೆ ತೋರಿಸಿ ಹಿರಿಯ ನಟನಿಗೆ ವಂಚಿಸಿದ್ದು, ನವೀನ್ ಭಾಗ್ಯಶ್ರೀ ಗುರೂಜಿ ವಿರುದ್ದ ದೂರು ದಾಖಲಾಗಿದೆ.

65 ವರ್ಷದ ಕಲಾವಿದ   ರವಿಕಿರಣ್ ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟನಿಗೆ ನಾಲ್ಕು ಲಕ್ಷಕ್ಕೂ ಅಧಿಕ ಹಣ ವಂಚಿಸಿರೋ ಆರೋಪ ಕೇಳಿಬಂದಿದ್ದು, ನವೀನ್‌ ಗುರೂಜಿ ಅನಾಥಾಶ್ರಮಕ್ಕೆ ರೇಷನ್ ಕೊಡಿಸಿ ಎಂದು ರವಿಕಿರಣ್‌ ಬಳಿ ಹೋಗಿದ್ದನು. ಈ ವೇಳೆ ಹಿರಿಯ ನಟ 2500 ಹಣವನ್ನ ಗೂಗಲ್ ಪೇ ಮಾಡಿದ್ದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್, ಅಭಿಮಾನಿಗಳಿಂದ ವಿಶ್

ಸ್ವಲ್ಪ ದಿನದ ಬಳಿಕ ದುಬೈನಲ್ಲಿ ಕಾರ್ಯಕ್ರಮ ಇದೆ ನೀವೇ ಇದಕ್ಕೆ  ಮುಖ್ಯಅತಿಥಿ. ಕಾರ್ಯಕ್ರಮಕ್ಕೆ ಹೋದರೆ ಹಣ ಕೊಡ್ತಾರೆ ಅಂತ ಗುರೂಜಿ ಕರೆ ಮಾಡಿದ್ದ. ಇದಕ್ಕೆ ಒಪ್ಪಿ ಟಿಕೆಟ್ ಮಾಡಿಸಿ ಕೊಡಿ ಎಂದು ಗುರೂಜಿ ಬಳಿಯೇ  ರವಿಕಿರಣ್ ಕೇಳಿದ್ದರು. ಇದಕ್ಕಾಗಿ ವೀಸಾ ಮತ್ತು ಟಿಕೆಟ್ ಗೆ 42 ಸಾವಿರ ಹಣ ಗುರೂಜಿ ಪಡೆದಿದ್ದ. ನಂತರ ಟಿಕಿಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಯಾಮಾರಿಸಿದ್ದಾರಂತೆ. ಅಷ್ಟೇ ಅಲ್ಲದೇ ಕಡಿಮೆ ಬೆಲೆಗೆ ಚಿನ್ನ ಹಾಗೂ ಸೈಟ್ ಕೊಡಿಸೋದಾಗಿಯೂ ಹೇಳಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ವಂಚನೆಯಲ್ಲಿ ಗುರೂಜಿ ಪತ್ನಿ ಚೈತ್ರಾ ಕೂಡ ಭಾಗಿಯಾಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪ್ಲಾಟ್‌ಗೆ ಸಂಬಂಧಿಸಿದ ನೋಂದಣಿ ಮತ್ತು ಇತರ ವಿಚಾರಕ್ಕಾಗಿ ಹಣವನ್ನು ಪಾವತಿಸಲು ಸಹ ಅವರಿಗೆ ಆಮಿಷವೊಡ್ಡಿದ್ದಾರೆ. ಈ ಮೊತ್ತವನ್ನು ಪಾವತಿಸಿದ ನಂತರವೇ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು ಎಂದು ಅರಿತುಕೊಂಡ ರವಿಕಿರಣ್ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ಜೊತೆಯಾಗಿ ಕಾಣಿಸಿಕೊಂಡು ವಿಚ್ಚೇದನ ಸುದ್ದಿಗೆ ಅಂತ್ಯ ಹಾಡಿದ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್

ನವೀನ್ ಭಾಗ್ಯಶ್ರೀ ಗುರೂಜಿ, ಚೈತ್ರಾ ಮತ್ತಿತರರ ವಿರುದ್ಧ ದೂರು ದಾಖಲು ಮಾಡಲಾಗಿದ್ದು, ಈ ಪ್ರಕರಣದಲ್ಲಿ ಗುರೂಜಿ ನಂಬರ್ 1 ಆರೋಪಿಯಾಗಿದ್ದು, ಚೈತ್ರಾ 2ನೇ ಆರೋಪಿಯಾಗಿದ್ದಾರೆ.  ಆರೋಪಿಯ ವಿರುದ್ಧ ಕ್ರಿಮಿನಲ್ ನಂಬಿಕೆ ಉಲ್ಲಂಘನೆ (IPC 406) ಮತ್ತು ವಂಚನೆ (IPC 420) ಪ್ರಕರಣವನ್ನು ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು