ಮಂಡ್ಯ; ಥೇಟ್  'ನಾಟಿ ಕೋಳಿ' ವಂಚನೆ, ಏನ್ ಕತೆ!

By Suvarna News  |  First Published Mar 18, 2021, 10:29 PM IST

ಮಂಡ್ಯ ನಾಟಿ ಕೋಳಿ ಹೆಸರಲ್ಲಿ ಜನರಿಗೆ ಟೋಪಿ/ ತಮಿಳುನಾಡಿನಿಂದ ಮಂಡ್ಯಕ್ಕೆ ಬರುತ್ತಿವೆ ಹೈಬ್ರೀಡ್ ಕೋಳಿಗಳು/ ಹೈಬ್ರೀಡ್ ಕೋಳಿಗಳನ್ನೇ ನಾಟಿಕೋಳಿಗಳೆಂದು ನಂಬಿಸಿ ವ್ಯಾಪಾರ/ ಥೇಟ್ ನಾಟಿಕೋಳಿಗಳಂತೆಯೇ ಕಾಣುವ ಹೈಬ್ರೀಡ್ ಕೋಳಿಗಳ ಮಾರಾಟ/ ಕೇವಲ 80-90 ರೂಪಾಯಿಗಳಿಗೆ ಕೋಳಿ ಮಾರಾಟ ಮಾಡ್ತಿರುವ ತಮಿಳುನಾಡು ವ್ಯಾಪಾರಿಗಳು


ಮಂಡ್ಯ (ಮಾ.18) ಇದೊಂದು ವಿಚಿತ್ರ ರೀತಿಯ  ಪ್ರಕರಣ ನಾಟಿ ಕೋಳಿ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ನಾಟಿ ಕೋಳಿ ಹೆಸರಲ್ಲಿ ಜನರಿಗೆ ಟೋಪಿ ಹಾಕಿರುವ ಪ್ರಕರಣ ಮಂಡ್ಯದಿಂದ ವರದಿಯಾಗಿದೆ.

ತಮಿಳುನಾಡಿನಿಂದ ಮಂಡ್ಯಕ್ಕೆ ಬರುತ್ತಿವೆ ಹೈಬ್ರೀಡ್ ಕೋಳಿಗಳನ್ನು  ನಾಟಿಕೋಳಿಗಳೆಂದು ನಂಬಿಸಿ ವ್ಯಾಪಾರ ಮಾಡಲಾಗಿದೆ ಥೇಟ್ ನಾಟಿಕೋಳಿಗಳಂತೆಯೇ ಕಾಣುವ ಹೈಬ್ರೀಡ್ ಕೋಳಿಗಳ ಮಾರಾಟ ನಡೆದಿದೆ. ಕೇವಲ 80-90 ರೂಪಾಯಿಗಳಿಗೆ ಕೋಳಿಗಳನ್ನು ಮಾರಾಟ ಮಾಡಲಾಗಿದೆ.

Tap to resize

Latest Videos

ಮಂಡ್ಯ ರೈತರಿಗೆ ತಮಿಳುನಾಡು ಹೈಬ್ರೀಡ್ ಕೋಳಿಗಳಿಗಳ ಮಾರಾಟ ಕಂಟಕವಾಗಿದೆ. ಜಿಲ್ಲೆಯಲ್ಲಿ ಹೈಬ್ರೀಡ್ ಕೋಳಿಗಳ ಮಾರಾಟದಿಂದ ಅಪ್ಪಟ ನಾಟಿಕೋಳಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಒಂದು ನಾಟಿಕೋಳಿ ಬೆಳವಣಿಗೆಯಾಗಲು 100 ರಿಂದ 120 ದಿನ ಬೇಕು ಆದ್ರೆ ಕೇವಲ 60 ದಿನಗಳಲ್ಲಿ ಈ ಹೈಬ್ರೀಡ್ ಕೋಳಿಗಳು ಬೆಳವಣಿಗೆಯಾಗುತ್ತವೆ.

120 ದಿನದ ನಾಟಿ ಕೋಳಿ ತೂಕ ಒಂದು ಒಂದು ಕಾಲು ಕೆಜಿ, ಆದ್ರೆ 60 ದಿನದಲ್ಲೇ ಬೆಳವಣಿಗೆಯಾಗುವ ಹೈಬ್ರೀಡ್ ಕೋಳಿ ತೂಕ 2ಕೆಜಿ. ಕಡಿಮೆ ಅವಧಿಯಲ್ಲಿ ಬೆಳೆಸಲು ಹಾಗೂ ಕೋಳಿಗಳ ತೂಕ ಹೆಚ್ಚಿಸಲು ಮೆಡಿಸಿನ್ ನೀಡಿರುವ ಸಾಧ್ಯತೆಗಳು ಇವೆ. ತಮಿಳುನಾಡು ಕೋಳಿಗಳಿಂದ ಜನರ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಉಂಟಾಗುತ್ತಿದ್ದು ಇದಕ್ಕೆ ಬ್ರೇಕ್ ಹಾಕಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ. 

 

click me!