8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!

By Chethan Kumar  |  First Published Jul 20, 2024, 8:35 PM IST

14ರ ಹರೆಯದ ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಮಹಿಳಾ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ನಗ್ನ ಫೋಟೋ, ಇತರ ಕೆಲ ಪೊರ್ನ್ ವಿಡಿಯೋ ಕಳುಹಿಸಿದ್ದ ಶಿಕ್ಷಕಿ ಇದೀಗ ಪೊಲೀಸ ಅತಿಥಿಯಾಗಿದ್ದಾಳೆ.
 


ಡೆಲ್ವಾರ್(ಜು.20) ಶಾಲಾ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಘಟನೆಗಳು ತೀವ್ರ ಕಳವಳಕಾರಿಯಾಗಿದೆ. ಇದೀಗ 24ರ ಹರೆಯ ಮಹಿಳಾ ಟೀಚರ್ 8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಹಾಗೂ ಇತರ ಕೆಲ ಪೊರ್ನ್ ವಿಡಿಯೋಗಳನ್ನು ಕಳುಹಿಸಿ ಮಂಚಕ್ಕೆ ಕರೆದಿದ್ದಾಳೆ. ಘಟನೆಯಿಂದ ಬೆಚ್ಚಿ ಬಿದ್ದ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ ಪರಿಣಾಮ ಇದೀಗ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ ಘಟನೆ ಅಮೆರಿಕದ ಡೆಲ್ವಾರ್‌ನಲ್ಲಿ ನಡೆದಿದೆ.

ವಿಲ್ಮಿಂಗ್ಟನ್‌ನ ಸೈಂಟ್ ಮೇರಿ ಮಗ್ಡೇಲನ್ ಕ್ಯಾಥೋಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಅಲಾನಿಸ್ ಪಿಲಾನಿಯನ್ ಅರೆಸ್ಟ್ ಆಗಿದ್ದಾರೆ.  8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ, ಇತರ ಕೆಲ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದದ ಅಲಾನಿಸ್ ಮಂಚಕ್ಕೆ ಕರೆದಿದ್ದಾಳೆ. ಸ್ನಾಪ್‌ಚಾಟ್ ಮೂಲಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿದ್ದ ಅಲಾನಿಸ್, ಪಠ್ಯ, ಪರೀಕ್ಷೆ ಸಂಬಂಧಿತ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ 14ರ ಹರೆಯದ ಓರ್ವ ವಿದ್ಯಾರ್ಥಿ ಜೊತೆ ಆತ್ಮೀಯವಾಗಿ ಸಂದೇಶ ಕಳುಹಿಸಲು ಆರಂಭಿಸಿದ್ದಾಳೆ.

Tap to resize

Latest Videos

undefined

ಮಗನ ತಲೆ ನೆಲಕ್ಕೆ ಚಚ್ಚಿ, ನೀರು ಕೇಳಿದರು ಕೊಡದೇ ಕ್ರೂರವಾಗಿ ಥಳಿಸಿದ ತಾಯಿ: ವೀಡಿಯೋ ವೈರಲ್

ಇದರ ನಡುವೆ ಅಲಾನಿಸ್ ವಿದ್ಯಾರ್ಥಿಗೆ ತನ್ನ ನಗ್ನ ಪೋಟೋ ಹಾಗೂ ಇತರ ಕೆಲ ವಿಡಿಯೋಗಳನ್ನು ಕಳುಹಿಸಿದ್ದಾಳೆ. ಬಳಿಕ ಮನೆಗೆ ಕರೆದಿದ್ದಾಳೆ. ಆತಂಕಗೊಂಡ ವಿದ್ಯಾರ್ಥಿ, ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಇತ್ತ ಪೋಷಕರು ಪೊಲೀಸ್ ಠಾಣೆಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಇತ್ತ ಶಿಕ್ಷಕಿ ಬಂಧನವಾಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿದೆ. ಈ ಘಟನೆ ಕುರಿತು ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ. ಇದೇ ವೇಳೆ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಿದೆ. ಅಪ್ರಾಪ್ತರಿಗೆ ಲೈಂಗಿಕ ಕಿರುಕಳ ನೀಡಿದ, ಕರ್ವತ್ಯ ಮರೆತ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. 

ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಗೆ ಬೇಸತ್ತು ಶಿಕ್ಷಕಿಯರು, ಜನಸ್ಪಂದನ ವೇಳೆ ಶಾಸಕರ ಮುಂದೆ ಕಣ್ಣೀರು!

ವಿದ್ಯಾರ್ಥಿ ಪೋಷಕರು ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಶಿಕ್ಷಕರು, ವಿದ್ಯಾರ್ಥಿಗಳ ಕುರಿತು ತೀವ್ರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಟೀಚರ್ ವಿದ್ಯಾರ್ಥಿಗಳಿಗೆ ಕಳುಹಿಸುವ ಸಂದೇಶ ಸೇರಿದಂತೆ ಇತರ ಮಾಹಿತಿ ಸೂಚನೆಗಳ ಕುರಿತು ಶಾಲಾ ಆಡಳಿತ ಮಂಡಳಿ ನಿಗಾವಹಿಸಬೇಕು ಎಂದು ಆಗ್ರಹಿಸಿದ್ದಾರೆ.
 

click me!