ವಂಚನೆ ಕೇಸ್‌ನಲ್ಲಿ ಸ್ಯಾಂಡಲ್‌ವುಡ್‌ ಖ್ಯಾತ ನಟಿ ಆಪ್ತ ಸೇರಿ ಇಬ್ಬರು ಅರೆಸ್ಟ್

By Kannadaprabha News  |  First Published Jul 18, 2022, 7:42 AM IST

ವಂಚನೆ ಕೇಸ್ಸಲ್ಲಿ ಸ್ಯಾಂಡಲ್‌ವುಡ್‌ ನ ಖ್ಯಾತ ನಟಿ ಆಪ್ತ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಕಾರಿನ ಲೈಫ್‌ ಟೈಮ್‌ ಟ್ಯಾಕ್ಸ್‌ ಕಟ್ಟೋದಾಗಿ ಹಣ ಪಡೆದು ಮೋಸ ಮಾಡಿದ ಪ್ರಕರಣ ಇದಾಗಿದೆ.


ಬೆಂಗಳೂರು (ಜು.18): ಕಾರಿನ ಲೈಫ್‌ ಟೈಮ್‌ ಟ್ಯಾಕ್ಸ್‌ ಪಾವತಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಕಾರು ಡೀಲರ್‌ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯ ಆಪ್ತರೂ ಆಗಿರುವ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕನನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾಂಧಿ ಬಜಾರ್‌ನ ಕಾರು ಡೀಲರ್‌ ಅಜಯ್‌(42) ಮತ್ತು ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್‌(43) ಬಂಧಿತರು. ಮಲ್ಲೇಶ್ವರಂ ನಿವಾಸಿ ಯೋಗೇಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಯೋಗೇಶ್‌ ಅವರು ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದ ಮಾರುತಿ ಸ್ವಿಫ್‌್ಟಕಾರಿಗೆ ಲೈಫ್‌ಟೈಮ್‌ ಟ್ಯಾಕ್ಸ್‌ ಪಾವತಿಸುವುದಾಗಿ ಆರೋಪಿಗಳು .1.37 ಲಕ್ಷ ಪಡೆದು, ಪಾವತಿಸದೆ ವಂಚಿಸಿದ್ದರು.

ಪ್ರಕರಣ ವಿವರ: ದೂರುದಾರ ಯೋಗೇಶ್‌ ಅವರು ತಮ್ಮ ಪತ್ನಿ ಆಶಾ ಅವರ ಹೆಸರಿನಲ್ಲಿ ಕಾರು ಖರೀದಿಸಲು ನಿರ್ಧರಿಸಿದ್ದರು. ಈ ಸಂಬಂಧ ಕಾರು ಡೀಲರ್‌ ಅಜಯ್‌ ಜತೆ ಚರ್ಚಿಸಿದ್ದರು. ಈ ವೇಳೆ ಅಜಯ್‌ ತನ್ನ ಚೇತಕ್‌ ಇಂಟರ್‌ ನ್ಯಾಷನಲ್‌ ಮುಖಾಂತರ ಮಹದೇವಪುರದ ಬಿಮಲ್‌ ಆಟೋ ಏಜೆನ್ಸಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಿಂದ 2018ರ ಡಿ.13ರಂದು ಆಶಾ ಯೋಗೇಶ್‌ ಅವರಿಗೆ ಮಾರುತಿ ಸ್ವಿಫ್‌್ಟಕಾರು ಕೊಡಿಸಿದ್ದ. ಈ ವೇಳೆ ಕಾರಿನ ಲೈಫ್‌ ಟೈಮ್‌ ಟ್ಯಾಕ್ಸ್‌ ಎಂದು ಚೆಕ್‌ ಮುಖಾಂತರ .93 ಸಾವಿರ ಹಾಗೂ ನಗದು ಮೂಲಕ .43 ಸಾವಿರ ಸೇರಿ ಒಟ್ಟು .1.37 ಲಕ್ಷ ಪಡೆದಿದ್ದ.

Tap to resize

Latest Videos

ಈ ನಡುವೆ 2022ರ ಮೇ 17ರಂದು ಹಾಗೂ ಜೂನ್‌ 10ರಂದು ಆಶಾ ಯೋಗೇಶ್‌ ಅವರಿಗೆ ಆರ್‌ಟಿಓ ಕೇಂದ್ರ ಕಚೇರಿಯಿಂದ ಕಾರು ಖರೀದಿ ಮಾಡಿದಾಗಿನಿಂದ ಲೈಫ್‌ಟೈಮ್‌ ಟ್ಯಾಕ್ಸ್‌ ಪಾವತಿಸದ ಬಗ್ಗೆ ನೋಟಿಸ್‌ ಬಂದಿದೆ. ಈ ವೇಳೆ ಪರಿಶೀಲನೆ ಮಾಡಿದಾಗ ಟ್ಯಾಕ್ಸ್‌ ಪಾವತಿಸದೆ ಅಜಯ್‌ ವಂಚಿಸಿರುವುದು ಬೆಳಕಿಗೆ ಬಂದಿತ್ತು. ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ನಕಲಿ ದಾಖಲೆ ಸೃಷ್ಟಿ: ಆರೋಪಿ ಅಜಯ್‌ ಮತ್ತೊಬ್ಬ ಆರೋಪಿ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್‌ ಜತೆ ಸೇರಿಕೊಂಡು ಆಶಾ ಯೋಗೇಶ್‌ ಹೆಸರಿನ ಕಾರು ನೋಂದಣಿ ಪತ್ರ(ಆರ್‌ಸಿ)ದಲ್ಲಿ ಲೈಫ್‌ ಟೈಮ್‌ ಟ್ಯಾಕ್ಸ್‌(ಎಲ್‌ಟಿಟಿ) ಎಂದು ನಮೂದಿಸಿದ್ದರು. ಟ್ಯಾಕ್ಸ್‌ ಪಾವತಿಸದೆ ಕಾರಿನ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ವಂಚನೆ ಪ್ರಕರಣದಲ್ಲಿ ಅಜಯ್‌ ಮತ್ತು ರವಿಶಂಕರ್‌ ಜತೆಗೆ ಹಲವರು ಕೈ ಜೋಡಿಸಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟಿಯ ‘ಆಪ್ತ’ ರವಿಶಂಕರ್‌: ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಆರೋಪಿ ರವಿಶಂಕರ್‌ ಹೆಸರು ಈ ಹಿಂದೆ ಸ್ಯಾಂಡಲ್‌ವುಡ್‌ ಡ್ರಗ್‌್ಸ ಪ್ರಕರಣದಲ್ಲಿ ಸಿಲುಕಿದ್ದ ಖ್ಯಾತ ನಟಿಯ ಹೆಸರಿನೊಂದಿಗೆ ಕೇಳಿ ಬಂದಿತ್ತು. ಆ ಪ್ರಕರಣದಲ್ಲಿ ರವಿಶಂಕರ್‌ ಸಹ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಇದೀಗ ವಂಚನೆ ಪ್ರಕರಣದಲ್ಲಿ ಮತ್ತೆ ರವಿಶಂಕರ್‌ ಜೈಲು ಸೇರಿದ್ದಾನೆ.

ಡಿಸಿಸಿ ಬ್ಯಾಂಕ್‌ಲ್ಲಿ .12 ಕೋಟಿ ವಂಚನೆ; 22 ಜನರ ವಿರುದ್ಧ ಎಫ್‌ಐಆರ್‌ ದಾಖಲು
ಬಾಗಲಕೋಟೆ (ಜು.18): ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿನ ಸಿಪಾಯಿಯೊಬ್ಬ ನಡೆಸಿದ .12 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂ​ಧಿಸಿದಂತೆ ಬಾಗಲಕೋಟೆ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕಿನ ಸಿಪಾಯಿ ಪ್ರವೀಣ ಪತ್ರಿ ಸೇರಿದಂತೆ 22 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು ಪೂರ್ಣ ಪ್ರಮಾಣದ ಮಾಹಿತಿಯನ್ನು ಕಲೆ ಹಾಕಲು ಆರಂಭಿಸಿದ್ದಾರೆ.

ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ ವ್ಯಾಪ್ತಿಯ ಕಮತಗಿ, ಅಮೀನಗಡ, ಗುಡೂರ ಸೇರಿ ಮೂರು ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ ಸಿಬ್ಬಂದಿ ಐಡಿ ಹ್ಯಾಕ್‌ ಮಾಡಿದ್ದ ಪ್ರಮುಖ ಆರೋಪಿ ಪ್ರವೀಣ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ .12.27 ಕೋಟಿ ಹಣ ವಂಚನೆಯಾದ ಕುರಿತು ಈಚೆಗೆ ಬ್ಯಾಂಕ್‌ ಅಧಿಕಾರಿಗಳು ದೂರು ನೀಡಿದ್ದರು.

click me!