ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿ ಎದುರು ಡ್ರ್ಯಾಗನ್‌ ಹಿಡಿದು ಪುಡಿರೌಡಿಯ ಹುಚ್ಚಾಟ

By Girish Goudar  |  First Published Oct 31, 2023, 8:09 PM IST

ಆರೋಪಿಯನ್ನ ಹಿಡಿಯಲು ಹೋದ ವೇಳೆ ಎನ್ ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಡ್ರ್ಯಾಗರ್ ಹಿಡಿದು ಪುಂಡಾಟ ನಡೆಸಿದ್ದಾನೆ. 


ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು(ಅ.31): ಮೊಬೈಲ್ ಕದ್ದು ಜನರ ಕೈಗೆ ಸಿಕ್ಕಿ ಬಿದ್ದ ಪುಡಿರೌಡಿಯೊಬ್ಬ, ಡ್ರ್ಯಾಗನ್ ಹಿಡಿದು ಮಹಿಳಾ ಪೊಲೀಸ್‌ ಅಧಿಕಾರಿ ಎದುರು ಹುಚ್ಚಾಟ ನಡೆಸಿದ ಘಟನೆ ನಿನ್ನೆ(ಸೋಮವಾರ) ತಡ ರಾತ್ರಿ ತುಮಕೂರು ನಗರದ ಅಶೋಕ‌ ರಸ್ತೆಯಲ್ಲಿ  ನಡೆದಿದೆ. ಮೋಜಾ@ಮಧು ಪುಂಡಾಟ ಮೇರೆದು ಪೊಲೀಸರ ಅತಿಥಿಯಾದ ಪುಡಿರೌಡಿ. 

Tap to resize

Latest Videos

undefined

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋಜಾ@ಮಧು, ಇತ್ತೀಚೆಗಷ್ಟೇ ಜೈಲಿನಿಂದ ಜಾಮೀನು ಮೇಲೆ ಹೊರಬಂದಿದ್ದ, ನಿನ್ನೆ ರಾತ್ರಿ ತುಮಕೂರಿನ ಖಾಸಗಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಬೆದರಿಸಿ ಮೊಬೈಲ್ ಕಳ್ಳತನ ಮಾಡಿದ್ದ, ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಆಗಮಿಸಿದ ಪೊಲೀಸರು, ಆರೋಪಿಯನ್ನ ಹಿಡಿಯಲು ಹೋದ ವೇಳೆ ಎನ್ ಇಪಿಎಸ್ ಠಾಣೆಯ ಮಹಿಳಾ ಪೊಲೀಸ್ ಮಂಗಳಮ್ಮ ಮುಂದೆ ಡ್ರ್ಯಾಗರ್ ಹಿಡಿದು ಪುಂಡಾಟ ನಡೆಸಿದ್ದಾನೆ. 

ಹೆತ್ತ ತಾಯಿ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮಗ: ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ ಕೊಂದ

ಬಂಧನಕ್ಕೆ ಯತ್ನಿಸಿದ್ರೆ ಕುತ್ತಿಗೆ ಕುಯ್ದುಕೊಳ್ಳುವುದಾಗಿ ಬೆದರಿಸಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಮಹಿಳಾ ಪೊಲೀಸ್ ಮುಂದೆ ಹುಚ್ಚಾಟ ಮೇರೆದಿದ್ದಾನೆ. ಕೊನೆಗೆ ಹರಸಾಹಸಪಟ್ಟು ಆರೋಪಿಯನ್ನ ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮೋಜಾ@ಮಧು ಹಾಗೂ ಆತನ ಜೊತೆಯಿದ್ದ ಮನೋಜ್ ಎಂಬಾತನನ್ನ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

click me!