
ಬೆಂಗಳೂರು(ಅ. 11) ಬೆಂಗಳೂರಿನ ಈ ಏರಿಯಾ ಸಂಪೂರ್ಣ ಆಕೆಯದ್ದೇ ದರ್ಬಾರ್, ಈಕೆಯ ಪರ್ಮಿಷನ್ ಇಲ್ದೆ ಯಾರೂ ಏರಿಯಾಗೆ ಎಂಟ್ರಿ ಕೊಡುವ ಹಾಗಿಲ್ಲ. ಈ ಮಹಿಳೆಯ ವರ್ತನೆಗೆ ಬೇಸತ್ತು ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ.
ಬೆಂಗಳೂರಿನ ಥಣಿಸಂದ್ರದ ಸಾರಾಯಿಪಾಳ್ಯದಿಂದ ಬಂದಿರುವ ವರದಿ. ಮಹಿಳೆ ಮೇರಿ ಗೀತಾ ಎಂಬಾಕೆಯಿಂದ ಏರಿಯಾದ ಜನ ಸಂಪೂರ್ಣ ಹೈರಾಣವಾಗಿದ್ದಾರೆ. ಏರಿಯಾ ಒಳಗೆ ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನ ತರುವಂತಿಲ್ಲ. ಕಾರು ತಂದು ರಸ್ತೆ ಬದಿ ನಿಲ್ಲಿಸಿದ್ರೆ, ಬೆಳಗಾಗೋದ್ರೊಳಗೆ ಸಂಪೂರ್ಣ ಜಖಂ...? ಗೂಂಡಗಳನ್ನ ಕರೆಸಿ ಸ್ಥಳೀಯರಿಗೆ ಆವಾಜ್.. ಈ ಮಹಿಳೆಯ ಆಟಾಟೋಪ ಒಂದೆರಡಲ್ಲ.
ಎಚ್ಚರ.. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿದ್ರೆ ಹಿಂಗೆಲ್ಲ ಮಾಡ್ತಾರೆ!
ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು ಹಾಗೂ ರಾಡ್ ಗಳನನ್ನು ಎಸೆಯುವುದು ಸೋಶಿಯಲ್ ಮೀಡಿಯಾದಲ್ಲಿ ರೆಕಾರ್ಡ್ ಆಗಿದೆ ಪ್ರತಿರೋಧ ವ್ಯಕ್ತಪಡಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುವುದರಲ್ಲೂ ಈ ಮಹಿಳೆ ಕಡಿಮೆ ಏನಿಲ್ಲ.
ಸದ್ಯ ಮಹಿಳೆ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಏರಿಯಾ ನಿವಾಸಿ ರೇಖಾ ಎಂಬುವರು ದೂರು ನೀಡಿದ್ದು ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ